Mysuru: ಮಕ್ಕಳಿಲ್ಲವೆಂಬ ಕೊರಗು, ಪತ್ನಿ ತವರು ಸೇರಿಕೊಂಡ್ರೆ, ಪತಿ ಆತ್ಮಹತ್ಯೆ!

By Suvarna News  |  First Published Feb 17, 2023, 10:24 PM IST

ಆ ದಂಪತಿ‌ ಜಂಗಲ್ ರೆಸಾರ್ಟ್ ನಲ್ಲಿ ಪುಟ್ಟದೊಂದು ಕೆಲಸ ಮಾಡಿಕೊಂಡಿದ್ರು. ಮದುವೆಯಾಗಿ 5 ವರ್ಷದಿಂದ ಸಂತೋಷದಿಂದ ಇದ್ದವರಿಗೆ ಒಂದೇ ಒಂದು ಕೊರಗು ಕಾಡುತ್ತಿತ್ತು. ಅದೇ ಕೊರಗಿನಲ್ಲಿ ಪತ್ನಿ ತವರು ಸೇರಿಕೊಂಡ್ರೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 


ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್

ಮೈಸೂರು (ಫೆ.17): ಆ ದಂಪತಿ‌ ಜಂಗಲ್ ರೆಸಾರ್ಟ್ ನಲ್ಲಿ ಪುಟ್ಟದೊಂದು ಕೆಲಸ ಮಾಡಿಕೊಂಡಿದ್ರು. ಮದುವೆಯಾಗಿ 5 ವರ್ಷದಿಂದ ಸಂತೋಷದಿಂದ ಇದ್ದವರಿಗೆ ಒಂದೇ ಒಂದು ಕೊರಗು ಕಾಡುತ್ತಿತ್ತು. ಅದೇ ಕೊರಗಿನಲ್ಲಿ ಪತ್ನಿ ತವರು ಸೇರಿಕೊಂಡ್ರೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ನಮ್ಮ ಜನ ವಯಸ್ಸಾದ ಮೇಲೂ ಒಂಟಿಯಾಗಿದ್ರೆ ಮದುವೆ ಆಗಿಲ್ವ ಅಂತ ಕೇಳ್ತಾರೆ. ಮದುವೆ ಆದ ಮೇಲೆ ಮಕ್ಕಳು ಯಾವಾಗ ಅಂತಾರೆ. ಎರಡು ವರ್ಷ ಕಳೆದ್ರೂ ಮಕ್ಕಳಾಗದಿದ್ರೆ ಏನೋ ತೊಂದರೆ ಇರಬೇಕು ಅನ್ಕೊತಾರೆ. ನಂತರೂ ಮಕ್ಕಳು ಆಗಲಿಲ್ಲ ಅಂದ್ರೆ ಕೇವಲ ಚುಚ್ಚು ಮಾತನಿಲ್ಲೇ ದಂಪತಿಗಳ ಮನಸ್ಸನ್ನ ಕೆಡಿಸಿ ಬಿಡ್ತಾರೆ. ಅಂತಹದೇ ಸನ್ನಿವೇಶಕ್ಕೆ ಇಲ್ಲೊಂದ ಆತ್ಮಹತ್ಯೆಯಾಗಿದೆ.

Tap to resize

Latest Videos

 ಮಕ್ಕಳಿಲ್ಲದ ಕೊರಗಿನಿಂದ ಬೇಸತ್ತು ಪತ್ನಿ ಇಲ್ಲದ ವೇಳೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆ ಹೆಚ್‌.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್ ನೌಕರ ಧರ್ಮರಾಜು (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಂಗಲ್ ರೆಸಾರ್ಟ್ ನ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Belagavi: ದಾಂಪತ್ಯ ಕಲಹ ದೂರ ಮಾಡ್ತೀನಿ ಅಂತಾ ಬಂದಾಕೆ ಎರಡನೇ ಪತ್ನಿಯಾದಳು!
 
ಮದುವೆಯಾಗಿ  ಐದು ವರ್ಷ ಕಳೆದರೂ ಮಕ್ಕಳಿಲ್ಲದ ಚಿಂತೆಯಲ್ಲಿದ್ದ ಧರ್ಮರಾಜು ದಂಪತಿ. ಅಕ್ಕಪಕ್ಕದ ಮನೆಯವರು, ಸಹೋದ್ಯೋಗಿಗಳು ಇದರ ಬಗ್ಗೆ ಪದೇ ಪದೇ ಕೇಳಿ ಬೇಸರ ತರಿಸಿದ್ದರು. ಇತ್ತೀಚೆಗೆ ಮಕ್ಕಳಾಗಿಲ್ಲ ಅನ್ನುವ ವಿಚಾರದಲ್ಲಿ ಪತಿಪತ್ನಿ ನಡುವೆ ಮಾತಿನ ವಾಗ್ದಾಳಿ ನಡೆದು ಪತ್ನಿ ತವರಿಗೆ ತೆರಳಿದ್ದಳು. ಇದರಿಂದ ತೀರಾ ಬೇಸರಗೊಂಡಿದ್ಧ ಧರ್ಮರಾಜು ಪತ್ನಿ ಇಲ್ಲದ ವೇಳೆ ಕರ್ತವ್ಯಕ್ಕೆ ರಜೆ ಹಾಕಿ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತದೇಹ ಪತ್ತೆ ಪ್ರಕರಣ, ತನಿಖೆಗೂ ಮೊದಲೇ ಭಜರಂಗದಳ ಹೆಸರು ಹೇಳಿದ ಸಿಎಂ ಕ್ಷಮೆಯಾಚನೆಗೆ ಪಟ್ಟು!

ಪ್ರಕರಣ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳಾಗದ ವಿಚಾರಕ್ಕೆ ಆತ್ಮಹತ್ಯೆ ಆಗಿರೋದು ಮಾತ್ರ ದುರಂತವಾಗಿದೆ.

click me!