ಗ್ಯಾಂಗ್‌ರೇಪ್‌ಗೆ ಒಳಗಾದ ಮಹಿಳೆಯನ್ನೇ ಮೆರವಣಿಗೆ ಮಾಡಿದ ಕಿರಾತಕಿಯರು!

Published : Jan 28, 2022, 01:25 AM ISTUpdated : Jan 28, 2022, 09:01 AM IST
ಗ್ಯಾಂಗ್‌ರೇಪ್‌ಗೆ ಒಳಗಾದ ಮಹಿಳೆಯನ್ನೇ ಮೆರವಣಿಗೆ ಮಾಡಿದ ಕಿರಾತಕಿಯರು!

ಸಾರಾಂಶ

* ದೆಹಲಿ ಮಹಿಳೆ ಮೇಲೆ ಅತ್ಯಾಚಾರ * ಕೂದಲು ಕತ್ತರಿಸಿ  ರಸ್ತೆಯಲ್ಲಿ ಮೆರವಣಿಗೆ * ಮಹಿಳೆಯರಿಂದಲೇ ಹೀನ ಕೃತ್ಯ * ಸಂತ್ಸಸ್ತೆಯನ್ನೇ ಹಿಂಸಿಸಿ ಮೆರವಣಿಗೆ ಮಾಡಿದರು

ನವದೆಹಲಿ(ಜ. 28)   ಮಹಿಳೆಯೊಬ್ಬಳ (Woman) ಮೇಲೆ ಗ್ಯಾಂಗ್‌ ರೇಪ್‌ (Gang Rape)ನಡೆಸಿ ಆಕೆಯನ್ನು ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಹೀನ ಕೃತ್ಯ ದೆಹಲಿಯ(Newdelhi) ಕಸ್ತೂರಬಾ ನಗರದಲ್ಲಿ ನಡೆದಿದೆ. ಈ ಸಂಬಂಧ ಒಂದೇ ಕುಟುಂಬದ 9 ಜನರನ್ನು ಪೊಲೀಸರು (Arrest) ಬಂಧಿಸಿದ್ದು ಇದರಲ್ಲಿ 7 ಜನ ಮಹಿಳೆಯರು ಸೇರಿದ್ದಾರೆ. ಉಳಿದ ಇಬ್ಬರಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. 

ಕೃತ್ಯ ಎಸಗಿದ ಮನೆಯ ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಂತ್ರಸ್ತೆಯೇ ಕಾರಣ ಎಂದು ಇಡೀ ಕುಟುಂಬ ಆಕೆಯ ಮೇಲೆ ದೌರ್ಜನ್ಯವೆಸಗಿದೆ. ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕೂದಲನ್ನು ಕತ್ತರಿಸಿ, ಕತ್ತಿಗೆ ಶೂಗಳನ್ನು ಕಟ್ಟಿಮೆರವಣಿಗೆ ಮಾಡಲಾಗಿದೆ. ಪೊಲೀಸ್‌ ಠಾಣೆಯ ಸಮೀಪದಲ್ಲೇ ಈ ಕೃತ್ಯ ಬುಧವಾರ ಮಧ್ಯಹ್ನ ನಡೆದಿದೆ. ವೈಯಕ್ತಿಕ ದ್ವೇಷಕ್ಕೆ ಈ ಕೃತ್ಯ ನಡೆಸಲಾಗಿದೆ ಎಂಬುದು ಪ್ರಾಥಮಿಕ  ಮಾಹಿತಿ. 

ಪ್ರಕರಣ ನಡೆದ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು ಕೂಡಲೇ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

Sexual Harassment : ನೈಟ್ ಕರ್ಫ್ಯೂ ವೇಳೆ ಆಟೋ ಹತ್ತಿದ್ದೇ ತಪ್ಪಾಯ್ತು..

ಸ್ವಾತಿ ಮಲಿವಾಲ್​ ತಮ್ಮ ತಂಡದೊಂದಿಗೆ ಆಸ್ಪತ್ರೆಯಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದ್ದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರೇ ಮುಂದಾಗಿ ನಿಂತು ಸಂತ್ರಸ್ತೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಸಂತ್ರಸ್ತೆ ಆಸ್ಪತ್ರೆತಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಆರೋಗ್ಯಸ್ಥಿತಿ ಸ್ಥಿರವಾಗಿದೆ.

ಪುಣೆಯ ಪ್ರಕರಣ:   ಮಹಿಳೆಯೊಬ್ಬರು (Woman) ಮಹಾರಾಷ್ಟ್ರದ ಪುಣೆಯ ಹಿಂಜೆವಾಡಿ ಪೊಲೀಸರಿಗೆ  ದೂರು ನೀಡಿದ್ದು, ತನ್ನ 25 ವರ್ಷದ ಸೋದರ ಸಂಬಂಧಿ ಮೇಲೆ ಆರೋಪ ಮಾಡಿದ್ದಾರೆ. ತಾನು ಸ್ನಾನ ಮಾಡುತ್ತಿರುವ ವಿಡಿಯೋವನ್ನು (videro) ಕದ್ದು ಮಾಡಿಕೊಂಡಿರುವ ಸೋದರ ಸಂಬಂಧಿ  ಬ್ಲಾಕ್ ಮೇಲ್ (Blackmail)ಮಾಡಿದ್ದು ಅದನ್ನೇ ಇಟ್ಟುಕೊಂಡು  ಅತ್ಯಾಚಾರ (Rape) ಮಾಡಿದ್ದಾನೆ ಎಂದು ಆರೋಪಿಸಿದ್ದರು.

ಮಹಿಳೆ ಮೊದಲಿಗೆ ಆತನ ಮಾತಿಗೆ  ಭಯಗೊಂಡಿಲ್ಲ. ಆಕೆಯ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ.  ತನ್ನ ಕಾಮದ ಆಸೆಯನ್ನು ಪೂರೈಸಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ. ನಿರಂತರ ದೌರ್ಜನ್ಯದಿಂದ ಕಂಗೆಟ್ಟ ಮಹಿಳೆ ಗಂಡನಿಗೆ ಘೋರ ಸಂಗತಿ ತಿಳಿಸಿದ ನಂತರ ಪೊಲೀಸರ ಮೊರೆ ಹೋಗಿದ್ದರು.

ಹೆತ್ತ ತಾಯಿ ಮೇಲೆಯೇ ಅತ್ಯಾಚಾರ:  ಹೆತ್ತ ತಾಯಿಯ ಮೇಲೆಯೇ ಕಿರಾತಕ ಮಗ ದೌರ್ಜನ್ಯ ಎಸಗಿದ್ದ ಪ್ರಕರಣ ಪುತ್ತೂರಿನಿಂದ ದಾಖಲಾಗಿತ್ತು.  ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರ ಎಂಬಲ್ಲಿ ನಡೆದಿದ್ದು, ದುಷ್ಕೃತ್ಯ ಎಸಗಿದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು  ಬಂಧಿಸಿದ್ದರು. ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ 33 ವರ್ಷದ ವ್ಯಕ್ತಿ  ಆರೋಪಿ. ಜ .12 ರ ತಡ ರಾತ್ರಿ ತಾಯಿ ಮೇಲೆ ಎರಗಿದ್ದ.  ತಾಯಿಯ ತೀವ್ರ ವಿರೋಧದ ನಡುವೆಯೂ ಅಮಾನುಷವಾಗಿ ಪ್ರಾಾಣಿಯಂತೆ ಎರಗಿದ್ದ ಡೆಸುತ್ತಿದ್ದಾರೆ.

ರಾಜಸ್ಥಾನದ ಪ್ರಕರಣ: ಅಪ್ರಾಪ್ತ ವಯಸ್ಸಿನ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಭೀಕರ ಸರಣಿ ಅತ್ಯಾಚಾರ ನಡೆಸಿ, ಆಕೆಗೆ ಗುಪ್ತಾಂಗಗಳಿಗೆ ಹಾನಿ ಮಾಡಿರುವ ಭೀಕರ ಘಟನೆಯೊಂದು ರಾಜಸ್ಥಾನದ ಅಲ್ವಾರ್‌ ನಿಂದ ವರದಿಯಾಗಿತ್ತು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?