Asianet Suvarna News Asianet Suvarna News

Sexual Harassment : ನೈಟ್ ಕರ್ಫ್ಯೂ ವೇಳೆ ಆಟೋ ಹತ್ತಿದ್ದೇ ತಪ್ಪಾಯ್ತು... ಕಿರಾತಕ ಚಾಲಕ!

* ನೈಟ್ ಕರ್ಪ್ಯೂ ಲಾಭ ಪಡೆದುಕೊಂಡ ಕಿರಾತಕ ಚಾಲಕ
*  ರೈಲ್ವೆ ನಿಲ್ದಾಣಕ್ಕೆ ತೆರಳಲು ಆಟೋ ಪಡೆದುಕೊಂಡ ಮಹಿಳೆ ಮೇಲೆ ಅತ್ಯಾಚಾರ
* ಸ್ನೇಹಿತೆಯ ಭೇಟಿ ಮಾಡಲು ಬಂದಿದ್ದ ಕೋಲ್ಕತ್ತಾದ ಮಹಿಳೆ

Chandigarh Auto-rickshaw driver takes advantage of night curfew, rapes 35-year-old woman mah
Author
Bengaluru, First Published Jan 12, 2022, 7:51 PM IST
  • Facebook
  • Twitter
  • Whatsapp

ಚಂಡಿಗಢ (ಜ.12)  ಕೊರೋನಾ (Coronavirus) ನಿಯಂತ್ರಣಕ್ಕೆ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ನೈಟ್ ಕರ್ಫ್ಯೂ(Night Curfew) ಜಾರಿ ಮಾಡಿವೆ. ಆದರೆ ಕಿರಾತಕನೊಬ್ಬ ಇದನ್ನೇ ತನ್ನ ಲಾಭಕ್ಕೆ ಬಳಸಿಕೊಂಡು ಕ್ರೌರ್ಯ ಮೆರೆದಿದ್ದಾನೆ.  ಚಂಡೀಗಢದಿಂದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ 35 ವರ್ಷದ  ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ.    ಚಂಡೀಗಢದ ಸೆಕ್ಟರ್ 17ರ ಜನರಲ್ ಪೋಸ್ಟ್ ಆಫೀಸ್ ಬಳಿ ಈ ಘಟನೆ ನಡೆದಿದದ್ದು ಮಹಿಳೆಯನ್ನು  ಮೂವರು ಗೃಹರಕ್ಷಕರು ರಕ್ಷಿಸಿದ್ದಾರೆ.

ಆರೋಪಿಯನ್ನು ದಾರುವಾ ಗ್ರಾಮದ ನಿವಾಸಿ 27 ವರ್ಷದ ಜೈ ದೇವ್ ಎಂದು ಗುರುತಿಸಲಾಗಿದೆ.  ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂತ್ರಸ್ತ ಮಹಿಳೆ ಸೆಕ್ಟರ್ 17 ಬಸ್ ನಿಲ್ದಾಣಕ್ಕೆ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು, ಅಲ್ಲಿಂದ ದೆಹಲಿಗೆ ಬಸ್ ತೆಗೆದುಕೊಳ್ಳಲು ಯೋಜಿಸಿದ್ದಳು ಮಹಿಳೆ ಮೌಲಿ ಜಾಗರಣದಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದಳು.  ಆದರೆ ಭೇಟಿ ಸಾಧ್ಯವಾಗದೆ ಹಿಂದಕ್ಕೆ ಹೊರಟಿದ್ದಳು. 

ಆ ಸಮಯದಲ್ಲಿ ಯಾವುದೇ ರೈಲು ಲಭ್ಯವಿಲ್ಲದ ಕಾರಣ ರಾತ್ರಿ 10 ಗಂಟೆಗೆ ಆಟೋವನ್ನು ಸೆಕ್ಟರ್ 17 ಬಸ್ ನಿಲ್ದಾಣಕ್ಕೆ ತೆಗೆದುಕೊಂಡಿದ್ದಾಳೆ. ಆಟೋ ರಿಕ್ಷಾ ಸೆಕ್ಟರ್ 17 ತಲುಪುತ್ತಿದ್ದಂತೆ ಕಿರಾತಕ ಚಾಲಕ ಬೇರೆ ರಸ್ತೆಯಲ್ಲಿ ತೆರಳಿದ್ದಾನೆ. ಮೊದಲಿಗೆ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ನಂತರ ಅತ್ಯಾಚಾರ ಎಸಗಿದ್ದಾನೆ.

Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!

ರಸ್ತೆಯಲ್ಲಿ ಬಿದ್ದದ್ದ ಮಹಿಳೆಯನ್ನು ರಕ್ಷಣೆ ಮಾಡಿದ ನಂತರ ಆಕೆಗೆ ಆಟೋದ ನಂಬರ್ ನೆನಪಿರಲಿಲ್ಲ. ಆದರೆ  ಆತನ ಚಲನ ವಲನದ ಆಧಾರದ ಮೇಲೆ ಮಾಹಿತಿ ನೀಡಿದ್ದು ಪೊಲೀಸರು ಆರೋಪಿಯನ್ನು ಹಿಡಿದು
ತಂದಿದ್ದಾರೆ.

ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ), 354 (ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ಮೂವರು ಗೃಹ ರಕ್ಷಕರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಡಿಎಸ್ಪಿ ಚರಂಜಿತ್ ತಿಳಿಸಿದ್ದಾರೆ.

ಹಾಸನದ ಪ್ರಕರಣ:   ಯುವತಿ (Woman)ಜೊತೆ ಅಸಭ್ಯ ವರ್ತನೆ (Sexual Harassment) ತೋರಿದ ಆರೋಪದ ಮೇಲೆ  ಯುವಕನ ಮೇಲೆ (Attack) ಹಲ್ಲೆಯಾಗಿದೆ. ಯುವಕನನ್ನು
ವಿವಸ್ತ್ರಗೊಳಿಸ ಗುಂಪೊಂದು ಹಲ್ಲೆ ನಡೆಸಿದೆ. ಹಾಸನದ (Hassan) ಹೇಮಾವತಿ ಪ್ರತಿಮೆ ಬಳಿ ಘಟನೆ ನಡೆದಿದೆ ಸಮೀಪದ ಮಹಾರಾಜ ಪಾರ್ಕ್ ನಲ್ಲಿ ಯುವತಿಯನ್ನ ಹಿಡಿದು ಎಳೆದಾಡುತ್ತಿದ್ದ ಎಂಬ ಕಾರಣಕ್ಕೆ ಗುಂಪೊಂದು ಹಲ್ಲೆ ಮಾಡಿದೆ.

ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಎಂಬ ಕಾರಣಕ್ಕೆ ಸ್ಥಳೀಯರು ಹಲ್ಲೆಗೆ ಮುಂದಾಗಿದ್ದಾರೆ.  ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಾರೆ.  ಕೈ ಮುಗಿದು ಬೇಡಿಕೊಂಡರೂ  ಯುವಕರ ಗುಂಪು ಮನಸೋ ಇಚ್ಛೆ ಹಲ್ಲೆ ಮಾಡಿದೆ.  ಸ್ಥಳಕ್ಕೆ  ಬಂದ ಪೊಲೀಸರು ಯುವಕನ ರಕ್ಷಣೆ ಮಾಡಿದ್ದಾರೆ, ಹಲ್ಲೆ ಮಾಡಿದವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದು ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ತುಮಕೂರಿನ ಪ್ರಕರಣ:  ತುಮಕೂರು  ರೈಲ್ವೆ ನಿಲ್ದಾಣದಲ್ಲಿ (Indian Railways) ಹೆಣ್ಣು ಮಕ್ಕಳ ಮುಂದೆ ಅಸಭ್ಯವಾಗಿ (Sexual Harassment) ವರ್ತಿಸುತ್ತಿದ್ದ ವ್ಯಕ್ತಿಗೆ  ಸರಿಯಾಗಿ ಧರ್ಮದೇಟು ಬಿದ್ದಿತ್ತು.

ಶಾಲೆಯಿಂದ ಬರುವ ಹೆಣ್ಣು ಮಕ್ಕಳನ್ನ ( Students) ಕಾಮುಕ ದೃಷ್ಟಿಯಿಂದ ಚೂಡಾಯಿಸುತ್ತಿದ್ದ ಕೀಚಕ  ಕೈಯಲ್ಲಿ ಬಿಸ್ಕತ್ ಹಿಡಿದುಕೊಂಡು ಹೆಣ್ಣು ಮಕ್ಕಳನ್ನ ಕರೆಯುತ್ತಿದ್ದ. ಹತ್ತಿರ ಬಂದರೆ ತನ್ನ ಪ್ಯಾಂಟ್ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ.

 

 

Follow Us:
Download App:
  • android
  • ios