ಬೆಂಗಳೂರು: WhatsApp ಹ್ಯಾಕ್‌ ಮಾಡಿ ಹಣ ಎಗರಿಸುತ್ತಿದ್ದ ವಿದೇಶಿಗನ ಬಂಧನ

Kannadaprabha News   | Asianet News
Published : Nov 02, 2021, 07:08 AM ISTUpdated : Nov 02, 2021, 07:11 AM IST
ಬೆಂಗಳೂರು: WhatsApp ಹ್ಯಾಕ್‌ ಮಾಡಿ ಹಣ ಎಗರಿಸುತ್ತಿದ್ದ ವಿದೇಶಿಗನ ಬಂಧನ

ಸಾರಾಂಶ

*  ಬೆಂಗಳೂರಲ್ಲಿ ವಾಟ್ಸಾಪ್‌ ಹ್ಯಾಕಿಂಗ್‌: ದೆಹಲಿಯಲ್ಲಿ ವಂಚಕ ಬಂಧನ *  ನೈಜೀರೀಯಾ ಮೂಲದ ವಂಚಕ ಪೊಲೀಸ್‌ ಬಲೆಗೆ *  ಹಾಡಹಗಲೇ ಬೆಸ್ಕಾಂನಲ್ಲಿ 1.40 ಲಕ್ಷ ರು. ಕಳವು  

ನವದೆಹಲಿ(ನ.02):  ವಾಟ್ಸಾಪ್‌(WhatsApp) ಖಾತೆಗಳನ್ನು ಹ್ಯಾಕ್‌ ಮಾಡಿ, ಬಳಕೆದಾರರ ಹೆಸರಲ್ಲಿ ಹಣ ಕಬಳಿಸುತ್ತಿದ್ದ ವಂಚನೆ ಜಾಲವೊಂದನ್ನು ದೆಹಲಿ ಪೊಲೀಸರು(Delhi Police) ಭೇದಿಸಿದ್ದಾರೆ. ವಂಚಕರು ಬೆಂಗಳೂರು ಮತ್ತು ದೆಹಲಿ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದುದ್ದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನೈಜೀರಿಯಾ(Nigeria) ಮೂಲದ ಚಿಮೆಲುಮ್‌ ಎಮ್ಯಾನುವೆಲ್‌ ಅನಿವೆಟಾಲು ಎಂಬಾತನನ್ನು ಪೊಲೀಸರು(Police) ಬಂಧಿಸಿದ್ದಾರೆ(Arrest).

ವಂಚನೆ ಹೇಗೆ?:

ವಂಚಕರು(Fraudsters)ಮೊದಲಿಗೆ ಬಳಕೆದಾರರ ಮೊಬೈಲ್‌ಗೆ(Mobile) ಯಾವುದಾದರೂ ಆ್ಯಪ್‌(Application) ಹೆಸರಲ್ಲಿ ಮಾಲ್‌ವೇರ್‌ ರವಾನಿಸುತ್ತಿದ್ದರು. ಅವರು ಅದನ್ನು ಡೌನ್‌ ಮಾಡಿಕೊಳ್ಳುತ್ತಲೇ, ಮೊಬೈಲ್‌ನಲ್ಲಿ ಎಲ್ಲಾ ಸಂಖ್ಯೆಯಗಳು, ಕರೆ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ವಂಚಕರು ಕದಿಯುತ್ತಿದ್ದರು. ಜೊತೆಗೆ ಬಳಕೆದಾರರ ವಾಟ್ಸಾಪ್‌ ಹ್ಯಾಕ್‌ ಅವರ ಮೊಬೈಲ್‌ ಮೂಲಕವೇ, ಅವರ ಮೊಬೈಲ್‌ನಲ್ಲಿದ್ದ ಪರಿಯಚಸ್ಥರಿಗೆ ಹಣಕ್ಕಾಗಿ(Money) ಬೇಡಿಕೆ ಇಡುತ್ತಿದ್ದರು. ಹೀಗೆ ರವಾನಿಸಿದ ಹಣವನ್ನು ದೋಚುತ್ತಿದ್ದರು.

ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲೂ(Social Media) ಈ ತಂಡ ಕಾರ್ಯಾಚರಣೆ ನಡೆಸುತ್ತಿತ್ತು. ಅಲ್ಲೂ ಮಹಿಳೆಯರ ಹೆಸರಲ್ಲಿ ನಕಲಿ ಖಾತೆ(Fake Account) ತೆರೆದು ವಂಚನೆ(Fraud) ನಡೆಸುತ್ತಿತ್ತು. ಬಳಕೆದಾರರಿಗೆ ಯಾವುದಾದರೂ ಲಿಂಕ್‌ ಕಳುಹಿಸುತ್ತಿತ್ತು. ಅದನ್ನು ಒತ್ತಿದ ಕೂಡಲೇ ಖಾತೆಯ ನಿಯಂತ್ರಣ ಬಳಕೆದಾರರ ಕೈತಪ್ಪಿ ವಂಚಕರ ಪಾಲಾಗುತ್ತಿತ್ತು. ಬಳಿಕ ಈ ತಂಡ ಸುಳ್ಳು ಮಾಹಿತಿ ರವಾನಿಸಿ ಹಣ ದೋಚುವುದು ಸೇರಿದಂತೆ ನಾನಾ ರೀತಿಯ ಕೃತ್ಯ ಎಸುಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಡಿಮೆ ಬೆಲೆಗೆ ಮೊಬೈಲ್‌ ಎಂದು ಸೋಪ್... ವಂಚಕರ ಗ್ಯಾಂಗ್‌ನಲ್ಲಿ ಮಹಿಳೆಯರದ್ದೇ ಪಾರಮ್ಯ!

ಹಾಡಹಗಲೇ ಬೆಸ್ಕಾಂನಲ್ಲಿ 1.40 ಲಕ್ಷ ರು. ಕಳವು

ಕೆಂಗೇರಿ: ಕೆಂಗೇರಿ ಉಪನಗರದ 5ನೇ ಮುಖ್ಯರಸ್ತೆಯ ಬೆಸ್ಕಾಂ(BESCOM) ಕಚೇರಿಯಲ್ಲಿ ಹಾಡಹಗಲೇ 1.40 ಲಕ್ಷ ರು. ಕಳುವಾಗಿರುವ(Theft) ಘಟನೆ ನಡೆದಿದೆ.

ಬೆಸ್ಕಾಂ ಕಚೇರಿಯ ಎಟಿಪಿ ಆಪರೇಟರ್‌ ಹಾಗೂ ಕ್ಯಾಷ್‌ ಕಲೆಕ್ಟರ್‌ ಕವಿತಾ ಅವರು ಕಳೆದ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕಚೇರಿಗೆ ಬಂದಿದ್ದು, ಎಟಿಪಿ(ATM) ಯಂತ್ರದಲ್ಲಿ ಹಿಂದಿನ ದಿನ ಸಂಗ್ರಹವಾಗಿದ್ದ ಹಣವನ್ನು ತೆಗೆದು ಬಾಕ್ಸ್‌ನಲ್ಲಿ ಇರಿಸಿ ಕೊಠಡಿ ಲಾಕ್‌ ಮಾಡಿದ್ದರು. ಬಳಿಕ ಎಂದಿನಂತೆ ಕಿಯೋಸ್ಕ್‌ನಲ್ಲಿ ಗ್ರಾಹಕರಿಂದ ಶುಲ್ಕ ಕಟ್ಟಿಸಿಕೊಳ್ಳಲು ಮುಂದಾಗಿದ್ದರು. ಈ ನಡುವೆ ಸಹೋದ್ಯೋಗಿ ಹೇಮಂತ್‌ ಎಂಬಾತ ಶುಕ್ರವಾರದ ಪೂಜೆ ಪ್ರಯುಕ್ತ ಕವಿತಾ ಅವರಿಗೆ ಪ್ರಸಾದ ನೀಡಲು ಬಂದಿದ್ದಾನೆ. ಆಗ ಪ್ರಸಾದವನ್ನು ಹಣವಿರುವ ಕೊಠಡಿಯಲ್ಲಿ ಇರಿಸಿ ಬರುವಂತೆ ಬೀಗದ ಕೀ ಕೊಟ್ಟು ಕಳುಹಿಸಿದ್ದರು.

ಅದರಂತೆ ಆತ ಪ್ರಸಾದವನ್ನು ಕೊಠಡಿಯಲ್ಲಿ ಇರಿಸಿ ಕೀಯನ್ನು ಕವಿತಾಗೆ ವಾಪಸ್‌ ನೀಡಿದ್ದಾನೆ. ಬಳಿಕ ಬೆಳಗ್ಗೆ 11.25ರ ಸುಮಾರಿಗೆ ಹಣ ಸಂಗ್ರಹಿಸಲು ಬರುವ ಮಂಜುನಾಥ್‌ ಹಣವಿದ್ದ ಕೊಠಡಿಯ ಬಾಗಿಲು ತೆರೆದಿರುವ ಬಗ್ಗೆ ಕವಿತಾ ಗಮನಕ್ಕೆ ತಂದಿದ್ದಾರೆ. ಕೂಡಲೇ ದೌಡಾಯಿಸಿ ನೋಡಿದಾಗ ಕೊಠಡಿಯಲ್ಲಿ ಇರಿಸಿದ್ದ 1.40 ಲಕ್ಷ ರು. ಹಣ ಕಳುವಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೆಂಗೇರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ವಸಂತ್‌ ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ