ಉತ್ತರ ಕನ್ನಡ: ಹಳಿಯಾಳದಲ್ಲಿ ಜಿಂಕೆ ಬೇಟೆ, ಇಬ್ಬರ ಬಂಧನ

By Ravi Janekal  |  First Published Mar 16, 2024, 8:09 PM IST

ಜಿಂಕೆಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕಾರವಾರ ಜಿಲ್ಲೆಯ ಹಳಿಯಾಳ ರಾಮಾಪುರದ ಮೊದಲಗೇರದಲ್ಲಿ ನಡೆದಿದೆ.


ಕಾರವಾರ, ಉತ್ತರಕನ್ನಡ (ಮಾ.16): ಜಿಂಕೆಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕಾರವಾರ ಜಿಲ್ಲೆಯ ಹಳಿಯಾಳ ರಾಮಾಪುರದ ಮೊದಲಗೇರದಲ್ಲಿ ನಡೆದಿದೆ.

ಮೊದಲಗೇರಾ ನಿವಾಸಿಗಳಾದ ಪರಶುರಾಮ  ಶಿವಾಜಿ ಕೊಡಗೇಕರ  (37 ), ಸುನೀಲ ಮಾವಳು ತುಫಾರಿ (31) ಬಂಧಿತ ಆರೋಪಿಗಳು. ಬಂಧಿತರಿಂದ ಒಂಟಿ ನಳಿಕೆಯ ನಾಡ ಬಂದೂಕು, ಕಟ್ಟಿಗೆಯ ಹಿಡಿಕೆ ಇರುವ ಕಬ್ಬಿಣದ ಸಣ್ಣ ಕೈ ಕೊಡ, ದೊಡ್ಡ ಗಾತ್ರದ ಕಬ್ಬಿಣದ ಕೊಡಲಿ, 7.940 ಕೆಜಿ ಜಿಂಕೆ ಮಾಂಸವಿರುವ ಮೂರು ಪ್ಲಾಸ್ಟಿಕ್ ಬ್ಯಾಗ್‌ಗಳು ಹಾಗೂ ಜಿಂಕೆಯ ತಲೆಬುರುಡೆ ವಶಕ್ಕೆ ಪಡೆಯಲಾಗಿದೆ.

Tap to resize

Latest Videos

 

ಕಾಡು ರಕ್ಷಿಸುತ್ತೇವೆಂದು ಬಂದ ಎನ್‌ಜಿಒ ಸದಸ್ಯರೇ ಕಡವೆ ಬೇಟೆಯಾಡಿ ಮಾಂಸ ತಿಂದ್ರು

ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದ ಆರೋಪಿಗಳು. ಜಿಂಕೆಯನ್ನ ಬೇಟೆಯಾಡಿ ತಲೆ ಭಾಗವನ್ನು ಸುಟ್ಟು, ಇನ್ನುಳಿದ ಮಾಂಸವನ್ನು ಕತ್ತರಿಸಿದ್ದರು. ಮಾಂಸವನ್ನು ಸಮವಾಗಿ ಹಂಚಿಕೊಳ್ಳಲು ಕತ್ತರಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು.

ಜಿಂಕೆ ಬೇಟೆಯಾಡಿದ ಕಳ್ಳರು ರೈತರನ್ನು ಕಂಡು ಓಡುವಾಗ ಆಗಿದ್ದೇ ದುರಂತ

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಹಾಗೂ ಭಾರತೀಯ ಆಯುಧ ಕಾಯ್ದೆ  1959ರ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅರಣ್ಯ ಸಂಚಾರಿ ದಳದ ಪಿಎಸ್ಐ ಕಿರಣ ಪಾಟೀಲ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೋಲೀಸ ಸಿಬ್ಬಂದಿ ಮುಲ್ಲಾ, ಚಂದ್ರಶೇಖರ, ಪ್ರಶಾಂತ, ಭಾನು ಕಾಂತ, ಗಜಾನನ , ಮಂಜುನಾಥ ಕಾರ್ಯಾಚರಣೆಯಲ್ಲಿ ಭಾಗಿಯಾದವರು.

click me!