ಕೋಚಿಂಗ್ ಸೆಂಟರ್‌ಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಕಾಮುಕ, ಬಳಿಕ ಅಬಾರ್ಶನ್ ಮಾಡಿಸಿಕೊಂಡಿಲ್ಲ ಎಂದು ಹತ್ಯೆ ಮಾಡಿದ್ದಾನೆ.
ವಾರಣಾಸಿ(ಮಾ.16) ಚೆನ್ನಾಗಿ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋದು 9ನೇ ತರಗತಿ ವಿದ್ಯಾರ್ಥಿನಿ ಬಯಕೆಯಾಗಿತ್ತು. ಇದಕ್ಕಾಗಿ ಕೋಚಿಂಗ್ ಸೆಂಟರ್‌ಗೆ ತೆರಳಿ ಅಧ್ಯಯನ ಆರಂಭಿಸಿದ್ದಳು. ಆದರೆ ಆಮಿಷ ಒಡ್ಡಿ, ಬೆದರಿಸಿ ಲೈಂಗಿಕವಾಗಿ ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿ ಮಾಡಿದ್ದಾನೆ. ಅಬಾರ್ಶನ್ ಮಾಡಿಸಿಕೊಳ್ಳು ನಿರಾಕರಿಸಿದ ಬಾಲಕಿಯನ್ನು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ವಾರಣಸಿ ನಿವಾಸಿಯಾಗಿರುವ ವಿದ್ಯಾರ್ಥಿನಿ ಕೋಚಿಂಗ್ ಸೆಂಟರ್ ಸೇರಿಕೊಂಡಿದ್ದಾಳೆ. ಕೋಚಿಂಗ್ ಆಪರೇಟರ್ 43 ವರ್ಷದ ಸಂಜಯ್ ಪಟೆಲ್ ಈ ವಿದ್ಯಾರ್ಥಿನಿ ಮೇಲೆ ಕಣ್ಮು ಹಾಕಿದ್ದಾನೆ. ಪುಸಲಾಯಿಸಿ ಸ್ನೇಹ ಬೆಳೆಸಿದ್ದಾನೆ. ಬಳಿಕ ಕೆಲಸ, ಉತ್ತಮ ವಿಧ್ಯಾಭ್ಯಾಸ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡಿದ್ದಾನೆ. ಇಷ್ಟೇ ಅಲ್ಲ ಕೆಲ ಫೋಟೋಗಳನ್ನು ಎಡಿಟ್ ಮಾಡಿ ಬೆದರಿಕೆ ತಂತ್ರವನ್ನೂ ಉಪಯೋಗಿಸಿದ್ದಾನೆ.
ಸ್ವರ್ಗದಂತೆ ಎಲ್ಲಾ ಭೋಗ ಅನುಭವಿಸುತ್ತಿದ್ದೇನೆ, ಜೈಲಿನಿಂದ ಕೊಲೆ ಆರೋಪಿಯ ಫೇಸ್‌ಬುಕ್ ಲೈವ್!
ಪ್ರತಿ ದಿನ ಸಂಜೆ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಗರ್ಭಿಣಿಯಾದ ಮಾಹಿತಿ ತಿಳಿಯುತ್ತದ್ದಂತೆ ವಿದ್ಯಾರ್ಥಿನಿ ಆತಂಕಗೊಂಡಿದ್ದಾಳೆ. ಈ ಮಾಹಿತಿಯನ್ನು ಕೋಚಿಂಗ್ ಆಪರೇಟರ್ ಸಂಜಯ್ ಪಟೇಲ್‌ಗೆ ತಿಳಿಸಿದ್ದಾಳೆ. ಇತ್ತ ಸಂಜಯ್ ಪಟೇಲ್ ಅಬಾರ್ಶನ್ ಮಾಡಿಸಿಕೊಂಡು ಬರಲು ಸೂಚಿಸಿದ್ದಾನೆ.
ಪೋಷಕರಲ್ಲೂ ಹೇಳಲು ಆಗದೆ, ಇತ್ತ ಏಕಾಂಗಿಯಾಗಿ ಹೋಗಿ ಅಬಾರ್ಶನ್ ಮಾಡಿಸಿಕೊಳ್ಳಲು ಸಾಧ್ಯವಾಗದೇ ವಿದ್ಯಾರ್ಥಿನಿ ನೊಂದಿದ್ದಾಳೆ. ಇತ್ತ ಆಕ್ರೋಶಗೊಂಡ ಸಂಜಯ್ ಪಟೇಲ್ ಅಬಾರ್ಶನ್ ಮಾಡಿಸಿಕೊಂಡಿಲ್ಲ ಎಂದು ವಿದ್ಯಾರ್ಥಿನಿ ಬಾಯಿಗೆ ಪಾಲಿಥಿನ್ ಬಟ್ಟೆ ತುರುಕಿದ್ದಾನೆ. ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕೆ ಆಯೆಕ ಮೃತದೇಹವನ್ನು ಪ್ಯಾಕ್ ಮಾಡಿ ರೈಲಿನ ಬೋಗಿಯಲ್ಲಿ ಇಟ್ಟು ಪರಾರಿಯಾಗಿದ್ದಾನೆ.
ಹೋಟೆಲ್ ನಲ್ಲಿ ಉಜ್ಬೇಕಿಸ್ತಾನ ಯುವತಿಯ ಕೊಲೆ ಪ್ರಕರಣ - ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ
ರೈಲಿನಲ್ಲಿನ ಅನಾಥ ಪ್ಯಾಕೇಜ್ ನೋಡಿದ ಅಧಿಕಾರಿಗಳು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಆರೋಪಿ ಸಂಜಯ್ ಪಾಟೀಲ್ ಅರೆಸ್ಟ್ ಮಾಡಿದ್ದಾರೆ.ವಿಚಾರಣೆ ವೇಳ ನಡೆದ ಘಟನೆ ಬಹರಂಗವಾಗಿದೆ.