SHOCKING NEWS:ಕೇರಳದಿಂದ ತಂದು ಗುಂಡ್ಲುಪೇಟೆಯಲ್ಲಿ ಕೊಳೆತ ಗೋ ಮಾಂಸ ಮಾರಾಟ! ಜಾಣ ಕುರುಡಾದ ಪೊಲೀಸ್ ಇಲಾಖೆ

By Ravi Janekal  |  First Published Oct 22, 2024, 5:01 PM IST

ಕೇರಳದಿಂದ ಮಾಂಸ ತ್ಯಾಜ್ಯ ತಂದು ಕರ್ನಾಟಕದ ಗಡಿಯಲ್ಲಿ ಸುರಿದಿದ್ದು ಆಯ್ತು, ಇದೀಗ ಸತ್ತ ಗೋವುಗಳನ್ನು ತಂದು ಅದರ ಮಾಂಸವನ್ನು ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ  ಮಾರಾಟ ಮಾಡುತ್ತಿರುವ ಆಘಾತಕಾರಿ  ಘಟನೆ ಬೆಳಕಿಗೆ ಬಂದಿದೆ.


ಚಾಮರಾಜನಗರ ಅ(.22): ಕೇರಳದಿಂದ ಮಾಂಸ ತ್ಯಾಜ್ಯ ತಂದು ಕರ್ನಾಟಕದ ಗಡಿಯಲ್ಲಿ ಸುರಿದಿದ್ದು ಆಯ್ತು, ಇದೀಗ ಸತ್ತ ಗೋವುಗಳನ್ನು ತಂದು ಅದರ ಮಾಂಸವನ್ನು ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ  ಮಾರಾಟ ಮಾಡುತ್ತಿರುವ ಆಘಾತಕಾರಿ  ಘಟನೆ ಬೆಳಕಿಗೆ ಬಂದಿದೆ.

ದಂಧೆಕೋರರು ಸತ್ತ ಜಾನುವಾರುಗಳನ್ನು ಕೇರಳದಿಂದ ಕಂಟೈನರ್‌ಗಳಲ್ಲಿ ಸಾಗಿಸುತ್ತಿದ್ದರೂ ತಪಾಸಣೆ ನಡೆಸದೆ ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ. ಪೊಲೀಸರು ಗಡಿಯಲ್ಲಿ ತಪಾಸಣೆ ನಡೆಸದೆ ನಿರ್ಲಕ್ಷ್ಯ ಮಾಡಿರುವುದರಿಂದ ಅಕ್ರಮಗಳಿಗೆ ರಹದಾರಿಯಾಗಿದೆ. ವಾಸ್ತವವಾಗಿ ಇದೆಲ್ಲ ಪೊಲೀಸರ ಮುಗಿನಡಿಯೇ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

Tap to resize

Latest Videos

undefined

ಚಾಮರಾಜನಗರದಲ್ಲಿ ಪೊಲೀಸರ ಮನೆಗೇ ಇಲ್ಲ ರಕ್ಷಣೆ: ಪೇದೆ ಮನೆಗೆ ಕನ್ನ ಹಾಕಿ ಚಿನ್ನಾಭರಣ ಕದ್ದ ಕಳ್ಳರು!

 ಕೇರಳದಿಂದ ಸತ್ತ ಜಾನುವಾರುಗಳನ್ನು ಕಂಟೈನರ್ ಮೂಲಕ ಚಾಮರಾಜನಗರ, ಗುಂಡ್ಲುಪೇಟೆಗೆ ಸಾಗಿಸುವ ದಂಧೆಕೋರರು ಬಳಿಕ ಸತ್ತ ಗೋವುಗಳ ಮಾಂಸ, ಮೂಳೆ, ಚರ್ಮ ಬೇರ್ಪಡಿಸಿ ಒಣಗಿಸಿ ಸ್ಥಳೀಯರಿಗೆ 150 ರೂಪಾಯಿಗೆ ಕೆಜಿಯಂತೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಜಾನುವಾರುಗಳ ಕೊಂಬು ಹಾಗೂ ಮೂಳೆ ಪುಡಿ ಮಾಡಿ ಪುನಃ ಕೇರಳಕ್ಕೆ ರವಾನಿಸುತ್ತಿದೆ ಎಂಬ ಮಾಹಿತಿ ಬೆಚ್ಚಿಬಿಳಿಸಿದೆ. ಇನ್ನು ಆಘಾತಕಾರಿ ವಿಚಾರವೆಂದರೆ ಇಷ್ಟೆಲ್ಲ ನಡೆಯುತ್ತಿರುವುದು ಪೊಲೀಸರಿಗೂ ತಿಳಿದಿದೆ. ಅವರಿಗೆ ಮಾಮೂಲು ಕೊಟ್ಟೇ ದಂಧೆಕೋರರು ಮಾರಾಟ ಮಾಡುತ್ತಿದ್ದಾರೆ. ಪೊಲೀಸರಷ್ಟೆ ಅಲ್ಲ, ಪುರಸಭಾ ಅಧಿಕಾರಿಗಳಿಗೂ, ಜಮೀನು ಮಾಲೀಕನಿಗೂ ದಂಧೆಕೋರರು ಮಾಮೂಲು ನೀಡುತ್ತಿರುವ ಆರೋಪವೂ ಕೇಳಿಬಂದಿದೆ.

Chamarajanagar: 6 ವರ್ಷಗಳ ಹಿಂದೆ ನಿರ್ಮಾಣವಾದ್ರು ಇನ್ನು ಉದ್ಘಾಟನೆಯಾಗದೆ ತುಕ್ಕು ಹಿಡಿಯುತ್ತಿದೆ ವಾಟರ್ ಪ್ಲಾಂಟ್

 ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯ ಯುವಕರು ಸ್ಥಳಕ್ಕೆ ಹೋದಾಗ ಕಂಟೈನರ್ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ದಂಧೆ ಬಹಳ ದಿನಗಳಿಂದಲೂ ನಡೆಯುತ್ತಿದೆ. ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಪಕ್ಕದ ಜಮೀನಿನಲ್ಲಿ ಈ ದಂಧೆ ನಡೆಯುತ್ತಿದೆ. 

click me!