ಪತಿಯ ಆಯಸ್ಸಿಗಾಗಿ ಕರ್ವಾಚೌತ್ ಆಚರಿಸಿ ಬಳಿಕ ವಿಷ ಉಣಿಸಿದ ಪತ್ನಿ 

By Kannadaprabha News  |  First Published Oct 22, 2024, 9:59 AM IST

ಗಂಡನ ಆಯಸ್ಸು ಹೆಚ್ಚಳಕ್ಕೆ ಕರ್ವಾ ಚೌತ್ ವ್ರತ ಆಚರಿಸಿದ ಪತ್ನಿ, ಬಳಿಕ ಹಬ್ಬದ ಊಟದಲ್ಲೇ ವಿಷ ಉಣಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪತಿಯ ಸಾವಿನ ಬಳಿಕ ಪತ್ನಿ ವಿಷ ಉಣಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.


ಕೌಶಾಂಬಿ: ಗಂಡನ ಆಯಸ್ಸು ಹೆಚ್ಚಳಕ್ಕೆ ಆಚರಿಸಲಾಗುವ ಕರ್ವಾ ಚೌತ್ ವ್ರತ ಆಚರಿಸಿದ ಪತ್ನಿ, ಬಳಿಕ ಪತಿಗೆ ಹಬ್ಬದ ಊಟದಲ್ಲೇ ವಿಷ ಉಣಿಸಿ ಹತ್ಯೆಗೈದ ಭೀಕರ ಘಟನೆ ಉತ್ತರಪ್ರದೇಶದ ಇಸ್ಮಾ ಯಿಲ್‌ಪುರದಲ್ಲಿನಡೆದಿದೆ. ಘಟನೆ ಸಂಬಂಧ ಸವಿತಾ ಎಂಬಾಕೆಯನ್ನು ಬಂಧಿಸಲಾಗಿದೆ. ಶೈಲೇಶ್ (32) ಎಂಬ ವ್ಯಕ್ತಿ ಭಾನುವಾರ ರಾತ್ರಿ ಕರ್ವಾ ಚೌತ್ ಹಬ್ಬದ ಊಟ ಸೇವಿಸಿದ ಬಳಿಕ ಕುಸಿದು ಬಿದ್ದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆತ ಸಾವನ್ನಪ್ಪಿದ್ದ. ಬಳಿಕ ಆತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಶೈಲೇಶ್‌ನ ಪತ್ನಿಯನ್ನು ವಿಚಾರಣೆ ನಡೆಸಿದಾಗ, ಆಕೆ ಆಹಾರದಲ್ಲಿ ವಿಷ ಸೇವಿಸಿದ್ದಾಗಿ ಒಪಿಕೊಂಡಿದ್ದಾಳೆ.

ಪತಿಯ ದೀರ್ಘಾಯುಷ್ಯಕ್ಕಾಗಿ ಹಿಂದೂ ಮಹಿಳೆಯರು ಪ್ರತಿವರ್ಷ ಕರ್ವಾಚೌತ ಆಚರಣೆ ಮಾಡುತ್ತಾರೆ. ಇಡೀ ದಿನ ಉಪವಾಸ ವ್ರತ ಆಚರಣೆ ಮಾಡಿ, ರಾತ್ರಿ ಚಂದ್ರನ ಜೊತೆ ಪತಿಯ ಮುಖ ನೋಡಿ ಉಪವಾಸ ವ್ರತ ಮುಗಿಸುತ್ತಾರೆ. ಪ್ರತಿವರ್ಷ ಕಾರ್ತಿಕ ಮಾಸದ ನಾಲ್ಕನೇ ದಿನದಂದು ಕರ್ವಾಚೌತ ಆಚರಣೆ ಮಾಡುತ್ತಾರೆ. ಭಾರತದ ಉತ್ತರದ ರಾಜ್ಯಗಳಲ್ಲಿ ಈ ವ್ರತವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. 

Tap to resize

Latest Videos

ಈ ದಿನ ವಿವಾಹಿತ ಮಹಿಳೆಯರಿಗೆ ಅತ್ಯಂತ ವಿಶೇಷ ದಿನವಾಗಿದೆ. ಸಂಜೆ ಚಂದ್ರದರ್ಶನವರೆಗೂ ಮಹಿಳೆಯರು ಆಹಾರವನ್ನು ಸೇವಿಸಲ್ಲ. ಪತಿಯ ದೀರ್ಘಾಯುಷ್ಯಕ್ಕಾಗಿ ಶಿವ-ಪಾರ್ವತಿ ಬಳಿ ಪ್ರಾರ್ಥನೆ ಮಾಡುತ್ತಾರೆ.

click me!