
ಬೆಂಗಳೂರು (ಸೆ.5): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರು ಬರೋಬ್ಬರಿ 3991 ಪುಟಗಳ ಚಾರ್ಜ್‌ಶೀಟ್‌ಅನ್ನು ಪೊಲೀಸರಿಗೆ ಸಲ್ಲಿಕೆ ಮಾಡಿದ ಬೆನ್ನಲ್ಲಿಯೇ ಪ್ರಕರಣದ ಕುರಿತಾಗಿ ಮಹತ್ವದ ಸಾಕ್ಷಿಗಳು ಮಾಧ್ಯಮಕ್ಕೂ ಲಭ್ಯವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಇಂದು ರೇಣುಕಾಸ್ವಾಮಿ ಕೊನೆ ಕ್ಷಣದ ಎರಡು ಫೋಟೋಗಳನ್ನು ಮೊಟ್ಟಮೊದಲ ಬಾರಿಗೆ ಪ್ರಸಾರ ಮಾಡಿದ ಬೆನ್ನಲ್ಲಿಯೇ, ದರ್ಶನ್ ಗ್ಯಾಂಗ್‌ಅನ್ನು ಸ್ಟೋನಿ ಬ್ರೂಕ್ ಪಬ್‌ನಲ್ಲಿ ಮಹಜರು ಮಾಡಿದ ಫೋಟೋ ಕೂಡ ಮಾಧ್ಯಮಕ್ಕೆ ಲಭ್ಯವಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್‌ರನ್ನು ಬಂಧಿಸಿದ ಬಳಿಕ ಸ್ಟೋನಿ ಬ್ರೂಕ್ ಪಬ್ & ರೆಸ್ಟೋರೆಂಟ್‌ಗೆ ಪೊಲೀಸರು ಸ್ಥಳ ಮಹಜರು ಮಾಡಲು ಕರೆದೊಯ್ದಿದ್ದರು. ಈ ವೇಳೆ ಪಾರ್ಟಿ ಮಾಡಿದ್ದ ಬಗ್ಗೆ ಸ್ಥಳವನ್ನು ಪೊಲೀಸರು ಮಹಜರು ಮಾಡಿದ್ದಾರೆ. ಅಂದಿನ ಸಂಗತಿಗಳನ್ನು ರಿಕ್ರಿಯೇಟ್ ಮಾಡಿದ್ದಾರೆ. ಯಾರ್ಯಾರು ಎಲ್ಲೆಲ್ಲಿ ಕುಳಿತಿದ್ದರು ಅನ್ನೋ ಬಗ್ಗೆ ಪರಿಶೀಲನೆ ಮಾಡಿದ್ದಾರೆ.
ಸ್ಟೋನಿ ಬ್ರೂಕ್‌ನಲ್ಲಿಯೇ ರೇಣುಕಾಸ್ವಾಮಿ ಕಿಡ್ನಾಪ್ ಬಗ್ಗೆ ಪ್ಲಾನ್ ನಡೆದಿತ್ತು ಎನ್ನಲಾಗಿದೆ. ಇಲ್ಲಿ ಪಾರ್ಟಿ ಮಾಡುತ್ತಲೇ ಮರ್ಡರ್ ಪ್ಲಾನ್‌ಅನ್ನು ಡಿ ಗ್ಯಾಂಗ್ ಮಾಡಿತ್ತು. ಕೊಲೆಗೂ ಮುಂಚೆ ಕೊಲೆ ನಂತರ ಇದೇ ರೆಸ್ಟೋರೆಂಟ್ ನಲ್ಲಿ ಮಾತುಕತೆ ನಡೆಸಲಾಗಿದೆ. ಕೊಲೆಗು ಮುಂಚೆಯೂ ಪಾರ್ಟಿ, ಕೊಲೆ ನಂತರವೂ ಪಾರ್ಟಿ ಮಾಡಿದ್ದ ಹಂತಕರ ಟೀಮ್. ಸ್ಟೋನಿ ಬ್ರೂಕ್ ನಲ್ಲಿ ಸ್ಥಳ ಮಹಜರು ನಡೆಸಿದ್ದ ವೇಳೆ ತೆಗೆದ ಫೋಟೋ ಇದಾಗಿದೆ. ಸ್ಟೋನಿ ಬ್ರೂಕ್ ನಲ್ಲಿ ದರ್ಶನ್ ನ ಕೂರಿಸಿಕೊಂಡು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು.
ದರ್ಶನ್ ಹೆಸರಿನಲ್ಲಿಯೇ ಅಡ್ಡಾ: ಇನ್ನು ಸ್ಟೋನಿ ಬ್ರೂಕ್ ಪಬ್ ನಲ್ಲಿ ದರ್ಶನ್ ಹೆಸರಿನಲ್ಲಿಯೇ ಒಂದು ಅಡ್ಡಾ ಇದೆ. ಅದಕ್ಕೆ 'ಡಿ ಬಾಸ್ ಸಫಾರಿ..' ಎಂದು ಹೆಸರನ್ನು ಇಡಲಾಗಿದೆ. ವನ್ಯಜೀವಿಗಳ ಚಿತ್ರ, ಕಾಡಿನ ಥೀಮ್‌ನ ಅಡ್ಡಾ ಇದಾಗಿದ್ದು, ದರ್ಶನ್ ಹಾಗೂ ಆತನ ಸಹಚರರು ಬಂದಾಗ ಇದೇ ಸ್ಥಳದಲ್ಲಿಯೇ ಪಾರ್ಟಿ ಮಾಡ್ತಿದ್ದರು ಎನ್ನಲಾಗಿದೆ. ದರ್ಶನ್‌ಗಾಗಿಯೇ ಸ್ಪೆಷಲ್ ರೂಮ್‌ಅನ್ನು ವಿನ್ಯಾಸ ಮಾಡಲಾಗಿತ್ತು. ಸ್ಟೋನಿ ಬ್ರೂಕ್ ಪಬ್ ಗೆ ಬಂದಾಗ ದರ್ಶನ್ ಇಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಟ್ಟಿದ್ದು ಮಾತ್ರವಲ್ಲದೆ, ದರ್ಶನ್‌ಗಾಗಿ ವಿಶೇಷ ದೊಡ್ಡ ಚೇರ್ ಕೂಡ ಇರಿಸಲಾಗಿತ್ತು. ಇಲ್ಲಿಯೇ ಕೂತು ರೇಣುಕಾಸ್ವಾಮಿ ಹತ್ಯೆಯ ಪ್ಲ್ಯಾನ್ ಮಾಡಲಾಗಿತ್ತು.
ಸ್ವಲ್ಪ ದಯೆ ತೋರಿ ಬಿಟ್ಟಿದ್ರೂ, ಸಾಯೋ ತನಕ ಮಗನನ್ನ ಚೆನ್ನಾಗಿ ನೋಡಿಕೊಳ್ತಿದ್ವಿ: ತಾಯಿ ರತ್ನಪ್ರಭಾ ಕಣ್ಣೀರು
ಡಿ ಗ್ಯಾಂಗ್ ಮಾರ್ಟಿ ಮಾಡಿದ್ದನ್ನ ಪೊಲೀಸರು ರೀಕ್ರಿಯೇಟ್ ಮಾಡಿದ್ದಾರೆ. ಇಲ್ಲಿ ದರ್ಶನ್ ಅವರ ಮ್ಯಾನೇಜರ್ ನಾಗರಾಜ್, ಪ್ರದೂಷ್, ಸ್ಟೋನಿ ಬ್ರೂಕ್‌ನ ಮಾಲೀಕ ವಿನಯ್, ನಟ ಚಿಕ್ಕಣ್ಣ ಕೂಡ ಇದ್ದಾರೆ. ದರ್ಶನ್, ವಿನಯ್ ಸೇರಿದಂತೆ ಇತರೆ ಆರೋಪಿಗಳೊಂದಿಗೆ ದೃಶ್ಯವನ್ನು ಮರುಸೃಷ್ಟಿ ಮಾಡಲಾಗಿದೆ. ರೀ ಕ್ರಿಯೇಟ್ ಮಾಡಿದ್ದ ಫೋಟೋ ಈಗ ಲಭ್ಯವಾಗಿದೆ.
Exclusive Photo: ದರ್ಶನ್ ಗ್ಯಾಂಗ್ ಎದುರು ರೇಣುಕಾಸ್ವಾಮಿ ಪ್ರಾಣಭಿಕ್ಷೆ ಬೇಡಿದ್ದ ಎರಡು ಫೋಟೋ ವೈರಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ