ಹೋಂ ವರ್ಕ್ ಮಾಡದ್ದಕ್ಕೆ ಮಗುವಿಗೆ ಮನಸೋಇಚ್ಛೆ ಥಳಿಸಿದ ಶಿಕ್ಷಕಿ! 

By Ravi Janekal  |  First Published Sep 5, 2024, 9:31 AM IST

ಹೋಂ ವರ್ಕ್ ಮಾಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ  ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕಿ ಮನಸೋಇಚ್ಛೆ ಥಳಿಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ.


ರಾಯಚೂರು (ಸೆ.5): ಹೋಂ ವರ್ಕ್ ಮಾಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ  ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕಿ ಮನಸೋಇಚ್ಛೆ ಥಳಿಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ.

ಪ್ರಿಯಾ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕಿ. ಪಟ್ಟಣದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಪ್ರಿಯಾ. ಹೊಡೆದ ರಭಸಕ್ಕೆ ವಿದ್ಯಾರ್ಥಿನಿ ಕೈ, ತೊಡೆ ಭಾಗದಲ್ಲಿ ಗಂಭೀರ ಗಾಯ. ತೊಡೆ ಭಾಗದಲ್ಲಿ ಚರ್ಮ ಕದ್ದುಬಣ್ಣಕ್ಕೆ ತಿರುಗಿದೆ. ವಿದ್ಯಾರ್ಥಿನಿ ಮನೆಗೆ ಹೋದಾಗ ಮಗು ಅಳುತ್ತಿರುವುದು ಗಮನಿಸಿ ಪೋಷಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು. ಕ್ಷುಲ್ಲಕ ಕಾರಣಕ್ಕೆ ಮಗುವಿಗೆ ಮಾರಣಾಂತಿಕವಾಗಿ ಥಳಿಸಿದ್ದಾರೆ. ಶಿಕ್ಷಕಿ ವಿರುದ್ಧ  ಕ್ರಮ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.

Tap to resize

Latest Videos

ರೇಣುಕಾಸ್ವಾಮಿ ಎದೆ,ವೃಷಣ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆದಿದ್ದ ದರ್ಶನ್!

click me!