ರಾಯಚೂರಲ್ಲಿ ಭೀಕರ ಅಪಘಾತ: ಶಿಕ್ಷಕರ ದಿನಾಚರಣೆಯಂದೇ ಕಾಲು ಕಳೆದುಕೊಂಡ ನಾಲ್ವರು ಮಕ್ಕಳು!

By Ravi Janekal  |  First Published Sep 5, 2024, 10:09 AM IST

ಶಾಲಾ ವಾಹನ ಮತ್ತು ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ಮಕ್ಕಳ ಕಾಲು ಕತ್ತರಿಸಿ ದುರ್ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ನಡೆದಿದೆ.


ರಾಯಚೂರು (ಸೆ.6): ಶಾಲಾ ವಾಹನ ಮತ್ತು ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ಮಕ್ಕಳ ಕಾಲು ಕತ್ತರಿಸಿ ದುರ್ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ನಡೆದಿದೆ.

ಒಟ್ಟು 32 ಮಕ್ಕಳು ಶಾಲಾ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಆ ಪೈಕಿ 18 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 14 ಮಕ್ಕಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 14 ಮಕ್ಕಳ ಪೈಕಿ ಮೂವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ.

Latest Videos

undefined

ಕಪ್‌ಗಲ್‌ ನಿಂದ ಮಾನ್ವಿ ಕಡೆ ಹೊರಟಿದ್ದ ಖಾಸಗಿ ಶಾಲಾ ವಾಹನದಲ್ಲಿ 30ಕ್ಕೂ ಅಧಿಕ ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಸಿಂಧನೂರು ಕಡೆಯಿಂದ ರಾಯಚೂರಿಗೆ ಹೊರಟಿದ್ದ ಸಾರಿಗೆ ಬಸ್. ಎರಡೂ ಬಸ್‌ಗಳು ಮುಖಾಮುಖಿ ಭೀಕರವಾಗಿ ಡಿಕ್ಕಿಯಾದ ಪರಿಣಾಮ ನಾಲ್ವರ ಮಕ್ಕಳ ಕಾಲು ಕಟ್ ಆಗಿದ್ದು, ಹಲವಾರು ಮಕ್ಕಳು ಗಾಯಗೊಂಡಿದ್ದಾರೆ. 

ಆಸ್ಪತ್ರೆ ಮುಂದೆ ಪೋಷಕರು ಕಣ್ಣೀರು!

ರಿಮ್ಸ್ ಆಸ್ಪತ್ರೆಗೆ ದೌಡಾಯಿಸಿದ ಪೋಷಕರು. ಮಕ್ಕಳು ಸ್ಥಿತಿ ನೋಡಿ ಕಣ್ಣೀರಾಕಿ 'ದೇವ್ರೇ ನಮಗೆ ಯಾಕಿಂತ ಶಿಕ್ಷೆ ಎಂದು ಆಸ್ಪತ್ರೆ ಮುಂಭಾಗ ಗೋಳಾಡುತ್ತಿರುವ ಪೋಷಕರು. ಕೂಲಿ ಮಾಡಿ ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ಪೋಷಕರು. ಇದೀಗ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಮಕ್ಕಳ ಸ್ಥಿತಿ ಕಂಡು ಪೋಷಕರು ಅಕ್ರಂದನ. ಸದ್ಯ ಎಲ್ಲ ಮಕ್ಕಳಿಗೂ ಚಿಕಿತ್ಸೆ ಮುಂದುವರಿದಿದೆ.

ಹೋಂ ವರ್ಕ್ ಮಾಡದ್ದಕ್ಕೆ ಮಗುವಿಗೆ ಮನಸೋಇಚ್ಛೆ ಥಳಿಸಿದ ಶಿಕ್ಷಕಿ! 

ಇಂದು ಶಿಕ್ಷಕರ ದಿನಾಚಣೆ ಹಿನ್ನೆಲೆ ಖುಷಿಯಿಂದ ಹೊರಟಿದ್ದ ವಿದ್ಯಾರ್ಥಿಗಳು. ಚಾಲಕನ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳಿಗೆ ಗಂಭೀರ ಗಾಯ. ಅತಿಯಾದ ವೇಗ, ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!