ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಹುಮುಖ್ಯ ವರದಿ ಅಂದ್ರೆ ಅದು ಎಫ್‌ಎಸ್‌ಎಲ್ ರಿಪೋರ್ಟ್. ಈ ಪ್ರಕರಣದಲ್ಲಿ ಸಂಗ್ರಹಿಸಿದ್ದ ಸಾಕ್ಷಿಗಳ ಮುಕ್ಕಾಲು ಭಾಗದ ಎಫ್‌ಎಸ್‌ಎಲ್ ರಿಪೋರ್ಟ್ ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಆ.13): ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಹುಮುಖ್ಯ ವರದಿ ಅಂದ್ರೆ ಅದು ಎಫ್‌ಎಸ್‌ಎಲ್ ರಿಪೋರ್ಟ್. ಈ ಪ್ರಕರಣದಲ್ಲಿ ಸಂಗ್ರಹಿಸಿದ್ದ ಸಾಕ್ಷಿಗಳ ಮುಕ್ಕಾಲು ಭಾಗದ ಎಫ್‌ಎಸ್‌ಎಲ್ ರಿಪೋರ್ಟ್ ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಸಂಬಂಧ ಎಸಿಪಿ ಚಂದನ್ ಕುಮಾರ್ ಟೀಮ್ ಸಂಗ್ರಹಿಸಿದ್ದ ಸಾಕ್ಷ್ಯಗಳನ್ನು ಮಡಿವಾಳದಎಫ್‌ಎಸ್‌ಎಲ್‌ಗೆ ಕಳಿಸಿದ್ರು. ಅದರಲ್ಲಿ 70% ಎಫ್‌ಎಸ್‌ಎಲ್ ವರದಿ ಪೊಲೀಸರು ಕೈ ಸೇರಿದೆ.
ಇನ್ನು ಸಿಸಿಟಿವಿ, ಮೊಬೈಲ್ ಡೇಟಾ ರಿಪೋರ್ಟ್‌ಗಾಗಿ ಪೊಲೀಸರು ಕಾಯುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪೊಲೀಸರಿಗೆ ಮಹತ್ವದ ದಾಖಲೆಗಳು ಸಿಕ್ಕಿವೆ.. ಪ್ರಕರಣದ ದಿಕ್ಕನ್ನೇ ಬದಲಿಸೋ ಎಫ್ ಎಸ್ ಎಲ್ ರಿಪೋರ್ಟ್ ಗಳು ತನಿಖಾಧಿಕಾರಿ ಕೈ ಸೇರಿದೆ. ಕೊಲೆಯಾದ ನಂತರ ಸಂಗ್ರಹಿಸಿದ್ದ ಟೆಕ್ನಿಕಲ್ ಸಾಕ್ಷಿಗಳ ಪೈಕಿ 70% ರಷ್ಟು ಎಫ್‌ಎಸ್‌ಎಲ್ ರಿಪೋರ್ಟ್ ಪೊಲೀಸರಿಗೆ ತಲುಪಿದ್ದು, ತನಿಖೆಗೆ ಮತ್ತಷ್ಟು ಸಹಕಾರಿಯಾಗಲಿದೆ.
ಜೈಲಲ್ಲಿ ದರ್ಶನ್ ‘ಅವರ’ಜೊತೆ ಮಾತ್ರ ಮಾತುಕತೆ.. ಯಾರವನು..?: ನಟನ ಬಿಡುಗಡೆ ಭವಿಷ್ಯ ಹೇಳ್ತು ನಿಗೂಢ ಕಲ್ಲು!
ಫೋಸ್ಟ್ ಮಾರ್ಟ್ ರಿಫೋರ್ಟ್ (ಮರಣೋತ್ತರ ಪರೀಕ್ಷೆ) ಏನಿದೆ?
ದರ್ಶನ್ ಗ್ಯಾಂಗ್ ಹತ್ಯೆ ಮಾಡಿದ ಬಳಿಕ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಹಾಗಾದ್ರೆ, ದೇಹದ ಯಾವ್ಯಾವ ಭಾಗದಲ್ಲಿ ಗಾಯಗಳಾಗಿವೆ.
* ಎದೆಯ ಎಲುಬು ಮುರಿದು ಶ್ವಾಸಕೋಸಕ್ಕೆ ಮೂಳೆ ಚುಚ್ಚಿದೆ.
* ತಲೆಗೆ ಗಂಭೀರ ಗಾಯ, ಮೆದಳಿನಲ್ಲಿ ತೀವ್ರವಾದ ರಕ್ತಸ್ರಾವ ( ಲಾರಿಯ ಹಿಂಬಾಗಕ್ಕೆ ಬಲವಾಗಿ ಗುದ್ದಿಸಿರೋದ್ರಿಂದ ಗಾಯ)
* ಸ್ಪೈನಲ್ ಕಾರ್ಡ್ ಮುರಿತ ( ನಿರಂತರವಾಗಿ ಬೆನ್ನಿನ ಮೇಲೆ ಥಳಿತದಿಂದ ಆದ ಗಾಯ )
* ವೃಷಣ ಚೀಲದಲ್ಲಿ ರಕ್ತ ಸೋರಿಕೆ ( ಬಲವಾಗಿ ಕಾಲಿನಿಂದ ಒದ್ದಿರೋದು )
* ಮೊಣಕಾಲು ಮುರಿತ
* ಬಲಗಣ್ಣಿನ ಮೇಲೆ ತೀವ್ರವಾದ ಪೆಟ್ಟು
ಸಾವಿನ ಸಮಯ: ಸಂಜೆ 6 ರಿಂದ 6:30
ಸಾವಿಗೆ ಕಾರಣ: ಮೆದಳಿನಲ್ಲಿ ತೀವ್ರವಾದ ರಕ್ತಸ್ರಾವ
ಪೊಲೀಸರ ಕೈ ಸೇರಿರೋ ವರದಿಗಳೇನು..?: ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದ ಶೇ.70% ಎಫ್‌ಎಸ್‌ಎಲ್ ವರದಿ.
* ಪಟ್ಟಣಗೆರೆ ಶೆಡ್ ನಲ್ಲಿ ಸಿಕ್ಕ ಫಿಂಗರ್ ಪ್ರಿಂಟ್ ಗಳ ವರದಿ.
* ಆರೋಪಿಗಳ ಬಟ್ಟೆಗಳಲ್ಲಿದ್ದ ರಕ್ತದ ಕಲೆಗಳ ವರದಿ.
* ಶವ ಸಾಗಿಸಿದ ಸ್ಕಾರ್ಪಿಯೋ ವಾಹನದಲ್ಲಿದ್ದ ಫಿಂಗರ್ ಪ್ರಿಂಟ್ ಗಳ ವರದಿ.
* ಘಟನೆ ಜಾಗದಲ್ಲಿ ಸಿಕ್ಕ ಚಪ್ಪಲಿ, ಶೂ ಮಾರ್ಕ್ ಗಳ ವರದಿ
* ಹಲ್ಲೆ ಮಾಡಲು ಬಳಸಿದ್ದ ವಸ್ತುಗಳ ಮೇಲಿನ ರಕ್ತದ ಕಲೆಯ ವರದಿ.
ಹೀಗೆ ಪಟ್ಟಣಗೆರೆಯ ಶೆಡ್ ನಲ್ಲಿ ಕೃತ್ಯ ನಡೆದ ಜಾಗ ಮತ್ತು ಆರೋಪಿಗಳ ಬಳಿ ಸಿಕ್ಕ ಸಾಕಷ್ಟು ಸಾಕ್ಷಿಗಳ ಎಫ್ ಎಸ್ ಎಲ್ ವರದಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಲುಪಿದೆ. ಆದರೆ ಪ್ರಕರಣದ 30% ಎಫ್ ಎಸ್ ಎಲ್ ವರದಿ ಅಂದ್ರೆ ಮೊಬೈಲ್, ಸಿಸಿಟಿವಿ ,ಆಡಿಯೋಗಳು ಸೇರಿದಂತೆ ಇನ್ನಷ್ಟು ಎಲೆಕ್ಟ್ರಾನಿಕ್ ಡಿವೈಸ್ ಗಳ ವರದಿಗಳು, ಆಡಿಯೋ ಸ್ಯಾಂಪಲ್ಸ್ ಹೈದರಾಬಾದ್ ಎಫ್ ಎಸ್ ಎಲ್ ನಿಂದ ಬರಬೇಕಿದೆ. ಸದ್ಯ ಬಂದಿರೋ ವರದಿಗಳಲ್ಲಿ ರಕ್ತದ ಕಲೆಗಳು ರೇಣುಕಾಸ್ವಾಮಿ ಗೆ ಸೇರಿದ್ದು ಎಂದು ದೃಡಪಟ್ಟಿದೆಯಂತೆ. ಹಾಗೇ ಆರೋಪಿಗಳ ಫಿಂಗರ್ ಪ್ರಿಂಟ್, ಫೂಟ್ ಪ್ರಿಂಟ್ ಕೂಡ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ಮತ್ತು ರೇಣುಕಾಸ್ವಾಮಿಗೆ ಸೇರಿದ್ದು ಅನ್ನೋದು ಪಕ್ಕಾ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.
ನಟ ಚಿಕ್ಕಣ್ಣ ಸೆಕ್ಷನ್ 164 ಹೇಳಿಕೆಯಲ್ಲಿ ಏನಿದೆ?: ದರ್ಶನ್‌ಗೆ ಮುಳುವಾಗುತ್ತಾ ಹಾಸ್ಯ ನಟನ ಹೇಳಿಕೆ?
ಸದ್ಯ ಸಿಕ್ಕಿರೋ ಎಫ್‌ಎಸ್‌ಎಲ್ ವರದಿಗಳನ್ನ ಮುಂದಿಟ್ಟುಕೊಂಡು ನಗರ ಪೊಲೀಸ್ ಕಮಿಷನರ್ ದಯಾನಂದ್ ,ಡಿಸಿಪಿ ಗಿರೀಶ್ ಹಾಗೂ ತನಿಖಾಧಿಕಾರಿ ಎಸಿಪಿ ಚಂದನ್ ಇತರೆ ಪೊಲೀಸರು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಪರಿಶೀಲನೆ ನಡೆಸ್ತಿದ್ದಾರೆ. ವರದಿಗಳ ಬಗ್ಗೆ ಕಾನೂನು ತಜ್ಞರ ಜೊತೆಯೂ ಚರ್ಚೆ ನಡೆಸಲಾಗ್ತಿದೆ. ಒಟ್ನಲ್ಲಿ ತನಿಖೆ ಭಾಗವಾಗಿ ಈ ವರದಿಗಳು ಬಹುಮುಖ್ಯವಾಗಿದ್ದು, ನಟ ಡಿ ಅಂಡ್ ಗ್ಯಾಂಗ್ ಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗ್ತಿದೆ.