ಬಳ್ಳಾರಿ: ಪೊಲೀಸ್ ಕ್ವಾಟ್ರಸ್‌ಲ್ಲಿ ಪೇದೆ ಆತ್ಮಹತ್ಯೆ, ಸಾವಿಗೆ ಕಾರಣವಾಯ್ತೇ ಹಿರಿಯ ಅಧಿಕಾರಿಗಳ ಕಿರುಕುಳ?

By Girish GoudarFirst Published Oct 10, 2023, 12:46 PM IST
Highlights

ಸಿಸಿಟಿ ತರಬೇತಿಗೆ ಕಳುಹಿಸುವ 15 ಜನರ ತಂಡದಲ್ಲಿ ಪ್ರಕಾಶ್ ನಾಯ್ಕ ಹೆಸರಿತ್ತು. ಆದ್ರೇ, ಈ ಟ್ರೈನಿಂಗ್ ಗೆ ತೆರಳಲು ಪ್ರಕಾಶ್ ನಾಯ್ಕನಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.  

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಅ.10): ಆ ಯುವಕ ನೂರಾರು ಕನಸುಗಳನ್ನು ಹೊತ್ತು ಪೊಲೀಸ್ ಪೇದೆಯಾಗಿದ್ದನು. ಬಡ ಕುಟುಂಬ ಜೊತೆ ತಾಂಡಾವೊಂದರಲ್ಲಿ ಹುಟ್ಟಿ ಬೆಳೆದ್ರೂ ಬಿಇ ಎಂಜಿನಿಯರಿಂಗ್ ಮಾಡಿಕೊಂಡು ಬಳ್ಳಾರಿಯಲ್ಲಿ ಡಿಎಆರ್ ಪೊಲಿಸ್ ಪೇದೆಯಾಗಿ ಕಳೆದೆರೆಡು ವರ್ಷದ ಹಿಂದೆ ನೇಮಕವಾಗಿದ್ದನು. ಅದೇನಾಯ್ತೋ ಗೊತ್ತಿಲ್ಲ ತಡರಾತ್ರಿ ಇದ್ದಕ್ಕಿಂದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳ ಕಾರಣವೋ ಅಥವಾ ವೈಯಕ್ತಿಕ ಕಾರಣವೋ ಅನ್ನೊದ್ರ ಕಂಪ್ಲೀಟ್ ಡಿಟೈಲ್ ಸ್ಟೋರಿ ಇಲ್ಲಿದೆ ನೋಡಿ…

ಸಿಸಿಟಿ ತರಬೇತಿಗೆ ಹೋಗಲು ಆದೇಶ ನೀಡಿರೋದೇ ಸಾವಿಗೆ ಕಾರಣವಾ..?

ಪೊಲೀಸ್ ಪೇದೆ ಸಾವಿಗೆ ಕಾರಣವಾಯ್ತೇ ಹೆಚ್ಚುವರಿ ತರಬೇತಿ ಕಳುಹಿಸುವ ವಿಷಯ. ತರಬೇತಿ ಕುಳುಹಿಸೋಕು ರದ್ದು ಮಾಡೋಕು ಮೇಲಾಧಿಕಾರಿಗಳು ಹಣ ಕೇಳ್ತಿದ್ರಂತೆ. ಹೌದು, ಹೀಗೆ ಬಳ್ಳಾರಿಯ ಡಿಎಆರ್ ಕ್ವಾಟ್ರಸ್‌ನಲ್ಲಿ ನೇಣಿಗೆ ಶರಣಾಗಿರೋ ಈ ಪೊಲೀಸ್ ಪೇದೆ ಹೆಸರು ಪ್ರಕಾಶ್ ನಾಯ್ಕ. ಹಗರಿಬೊಮ್ಮನ ಹಳ್ಳಿಯ ಅನೇಕಲ್ ತಾಂಡಾದ ನಿವಾಸಿ. ಬಿಇ ಎಂಜಿನೇಯರಿಂಗ್ ಮಾಡಿಕೊಂಡಿದ್ದ ಪ್ರಕಾಶ ನಾಯ್ಕ 2021ರಲ್ಲಿ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದನು. ಎರಡು ವರ್ಷದ ತರಬೇತಿ ಬಳಿಕ ಕಳೆದೊಂದು ವರ್ಷದಿಂದ ಬಳ್ಳಾರಿಯ ಡಿಎಆರ್ ಪೇದೆಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದನು. ಮೊನ್ನೆ ಸಿಸಿಟಿ ತರಬೇತಿ. (ಸೆಂಟರ್ ಫಾರ್ ಕೌಂಟರ್ ಟ್ರೈನಿಂಗ್) ಕಳುಹಿಸುವ 15 ಜನರ ತಂಡದಲ್ಲಿ ಪ್ರಕಾಶ್ ನಾಯ್ಕ ಹೆಸರಿತ್ತು. ಆದ್ರೇ, ಈ ಟ್ರೈನಿಂಗ್ ಗೆ ತೆರಳಲು ಪ್ರಕಾಶ್ ನಾಯ್ಕನಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.  ಇನ್ನೂ ಈ ತರಬೇತಿಗೆ ಕಳುಹಿಸೋಕೆ ಮತ್ತು ರದ್ದು ಮಾಡೋಕೂ ಮೇಲಾಧಿಕಾರಿಗಳು ಹಣ ಕೇಳ್ತಿದ್ರು, ಎನ್ನುವುದು ಕುಟುಂಬಸ್ಥರ ವಾದವಾಗಿದೆ. ಅಲ್ಲದೇ ರಜೆ ಇಲ್ಲದ ಕೆಲಸ ಒತ್ತಡ ಮತ್ತು ರಜೆ ನೀಡಲು ಹಣಕ್ಕೆ ಪೀಡಿಸುವ ಕೆಲ ಇಲಾಖೆ ಅಧಿಕಾರಿಗಳ ಕಿರುಕುಳವೇ ಈ ಸಾವಿಗೆ ಕಾರಣ ಅಂತ ಮೃತ ಪೇದೆಯ ಕುಟುಂಬಸ್ಥರಾದ ಕುಮಾರ ನಾಯ್ಕ ಮತ್ತು ಪಂಪಾ ನಾಯ್ಕ ಎನ್ನುತ್ತಿದ್ದಾರೆ.   

ಒಂದು ಸಣ್ಣ ಆಸೆ ಬದುಕ ನುಂಗಿತೆ... ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ.. ಹುಡುಗಿ ಕೈಕೊಟ್ಲಂತ ಆತ್ಮಹತ್ಯೆ ಮಾಡ್ಕೊಂಡ

ಆರೋಪ‌ ಅಲ್ಲಗಳೆದ ಪೊಲೀಸರು

ಇನ್ನೂ ಇದೆನ್ನೆಲ್ಲವನ್ನು ಅಲ್ಲಗಳೆಯುತ್ತಿರೋ ಪೊಲೀಸರು ಇಲಾಖೆಯಲ್ಲಿ ಈ ರೀತಿಯ ತರಬೇತಿಗೆ ಕಳುಹಿಸೋದು ಸಾಮಾನ್ಯ. ಬೇಡವೆಂದ್ರೇ ಬಿಡಬಹುದು. ಆದ್ರೇ, ಅದನ್ನೆ ನೆಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ್ರೇ ನಂಬಲು ಸಾಧ್ಯವಿಲ್ಲ. ಇನ್ನೂ ಇವತ್ತು ಪ್ರಕಾಶ್ ನಾಯಕ್‌ನಿಗೆ ಮದುವೆಗೆ ಹೆಣ್ಣು ನೋಡಲು ಹೋಗುತ್ತಿದ್ದು, ಸಂಬಂಧಿಕರ ಯುವತಿ ಆಗಿದ್ದರಿಂದ ಅದನ್ನೇ ಖಾಯಂ ಮಾಡಲು ಮನೆಯವರು ನಿರ್ಧಾರ ಮಾಡಿದ್ರಂತೆ. ಆದ್ರೇ ಅದು  ಪ್ರಕಾಶ ನಾಯ್ಕನಿಗೆ ಇಷ್ಟವಿರಲಿಲ್ಲ ಎನ್ನುವುದಾಗಿದೆ. ಇದೇ ಸಮಯದಲ್ಲಿ ತರಬೇತಿ ವಿಚಾರವೂ ಮನಸಿಗೆ ಘಾಸಿಯಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ. ಸಾವಿಗೆ ಕಾರಣ ಏನೇ ಇರಲಿ ತನಿಖೆ ಮಾಡ್ತೇವೆ ಎನ್ನುತ್ತಿದ್ದಾರೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ರಂಜಿತ್ ಕುಮಾರ್ ಬಂಡಾರು.

ಸಮಸ್ಯೆಗೆ ಸಾವು ಒಂದೇ ಪರಿಹಾರವಲ್ಲ

ವಯಸ್ಸಿನ್ನು ಕೇವಲ 26 ವರ್ಷ.. ಸರ್ಕಾರಿ ನೌಕರಿ, ಇಲಾಖೆವಾರು ಹೆಚ್ಚುವರಿ ಪರೀಕ್ಷೆ ಬರೆದು ಇಲಾಖೆಯಲ್ಲಿ ಉನ್ನತ ಸ್ಥಾನಕ್ಕೆ ಹೋಗಬಹುದಾಗಿತ್ತು. ಆದ್ರೇ, ಸಣ್ಣಪುಟ್ಟ ಕಾರಣಕ್ಕೆ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರೋದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಲ್ಲದೆ ಎಲ್ಲಾ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಸಮಸ್ಯೆಗೆ ಸಾವೊಂದೇ ಪರಿಹಾರವಲ್ಲ.

click me!