ಚಿಕ್ಕಮಗಳೂರು: ಗಾಂಜಾ ಮತ್ತಿನಲ್ಲಿ ಗನ್ ಹಿಡಿದು ಹುಚ್ಚಾಟ ಮೆರೆಯುತ್ತಿದ್ದ ಯುವಕ ಅರೆಸ್ಟ್‌

By Girish Goudar  |  First Published Oct 10, 2023, 12:28 PM IST

ಲೋಡೆಡ್ ಗನ್ ಹಿಡಿದು ಹುಚ್ಚಾಟ ಮೆರೆಯುತ್ತಿದ್ದ ಯುವಕನ ಬಂಧನ, ಸ್ಥಳೀಯರ ಸಹಾಯದಿಂದ ಯುವಕನನ್ನ ಬಂದಿಸಿದ ಪೊಲೀಸರು, ಕಡೂರಿನ ಎಪಿಎಂಸಿ‌ ಮಾರುಕಟ್ಟೆ ಬಳಿ ಗನ್ ಹಿಡಿದು ಹೆದರಿಸುತ್ತಿದ್ದ ಯುವಕ, ಬೀರೂರು ಮೂಲದ ಸಮೀರ್ ಬಂಧನ, ಸಮೀರ್ ಬಳಿ ಒಂದು‌ಲೋಡೆಡ್ ಗನ್, 10 ಜೀವಂತ ಗುಂಡು, ಎರಡು ಚಾಕು, ಡ್ರ್ಯಾಗರ್ ಸೇರಿದಂತೆ 40 ಗ್ರಾಂ ಗಾಂಜಾ ವಶ. 


ವರದಿ: ಆಲ್ದೂರು ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.10): ಗಾಂಜಾ ಮತ್ತಿನಲ್ಲಿ ಲೋಡೆಡ್ ಗನ್ ಹಾಗೂ ಡ್ರ್ಯಾಗರ್ ಇಟ್ಟುಕೊಂಡು ಓಡಾಡ್ತಿದ್ದ ಯುವಕನನ್ನ ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ನಡೆದಿದೆ. ಕಡೂರಿನ ಎ.ಪಿ.ಎಂ.ಸಿ. ಯಾರ್ಡ್ ಬಳಿ ಲೋಡೇಡ್ ಗನ್ ಹಿಡಿದು ರಸ್ತೆಯಲ್ಲಿ ಹುಚ್ಚಾಟ ಮೆರೆಯುತ್ತಿದ್ದ ಮೂಲತಃ ಕಡೂರು ತಾಲೂಕಿನ ಬೀರೂರು ಮೂಲದ ಸಮೀರ್ ಬಂಧಿತ ಆರೋಪಿ. ಈತ ಕಡೂರು ಪಟ್ಟಣದಲ್ಲಿ ಒಂದು ಲೋಡೇಡ್ ಗನ್, 10 ಜೀವಂತ ಗುಂಡು, ಎರಡು ಚಾಕು, ಒಂದು ಡ್ರ್ಯಾಗರ್ ಸೇರಿದಂತೆ 40 ಗ್ರಾಂ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ. 

Tap to resize

Latest Videos

undefined

ಬೀರೂರು ಟು ಮುಂಬೈ ಗನ್ ಲಿಂಕ್ 

ಕಡೂರು-ಬೀರೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಹಾಗೂ ಬೈಕ್ ವ್ಯಾಪಾರದ ವೃತ್ತಿ ಮಾಡುತ್ತಿದ್ದ ಸಮೀರ್ ಗೆ ಗನ್ ಹಾಗೂ ಜೀವಂತ ಗುಂಡುಗಳು ಎಲ್ಲಿ ಸಿಕ್ಕಿದ್ವು ಎಂಬ ಪ್ರಶ್ನೆ ಮೂಡಿದೆ. ಕಡೂರು ಪಟ್ಟಣದಲ್ಲಿ ರಸ್ತೆ ಮಧ್ಯೆ ಗನ್, ಡ್ರ್ಯಾಗರ್, ಚಾಕು ಹಿಡಿದು ಓಡಾಡ್ತಿದ್ದ ಈತನನ್ನ ಕಂಡು ಸ್ಥಳಿಯರು ಕೂಡ ಆತಂಕಕ್ಕೀಡಾಗಿದ್ದಾರೆ. ಗಾಬರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ರು ಆತ ಸಿಕ್ಕಿಲ್ಲ. ಬಳಿಕ ಕಡೂರು ಹಾಗೂ ಬೀರೂರು ಪೊಲೀಸರು ಆತನಿಗಾಗಿ ಹುಡುಕಾಡಿದ್ದಾರೆ. ಆದರೆ, ಆತನ ಸುಳಿವು ಸಿಕ್ಕಿಲ್ಲ. ಬಳಿಕ ಸ್ಥಳಿಯರ ಸಹಕಾರ ಹಾಗೂ ಮಾಹಿತಿ ಮೇರೆಗೆ ಕಡೂರು ಪೊಲೀಸರು ಆತನನ್ನ ಬಂಧಿಸಿದ್ದಾರೆ. ಗಾಂಜಾ ಮತ್ತಿನಲ್ಲಿ ಲೋಡೇಡ್ ಗನ್ ಹಿಡಿದು ಸ್ಥಳಿಯರಿಗೂ ಹೆದರಿಸುತ್ತಿದ್ದ. ಇದೀಗ ಬಂಧನವಾಗಿರೋ ಸಮೀರ್ ವಿರುದ್ಧ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ: ಅಂಧ ಯುವತಿಗೆ ಮೋಸ ಮಾಡಿದ ದುರುಳರು, ನಾಟಿ ಔಷಧಿ ಹೆಸರಲ್ಲಿ ವಂಚನೆ..!

ವಿಚಾರಣೆಯ ವೇಳೆಯಲ್ಲಿ ಇಬ್ಬರ ಹೆಸರು : 

ಇನ್ನೂ ಅತನನ್ನ ಕರ್ಕೊಂಡು ಹೋಗಿ ಎನಿದೂ ಎಲ್ಲಿಂದ ಬಂತು ಅಂತಾ ವಿಚಾರಿಸಿದಾಗ್ಲೇ ಅತ ಇಬ್ರ ಹೆಸ್ರನ್ನ ಹೇಳಿದ್ದಾನೆ.ಅವ್ರಿಬ್ರು ಮಹಾರಾಷ್ಟ್ರ ಮೂಲದವ್ರರು ಗಾಂಜಾನೂ ಸಪ್ಲೈ ಮಾಡ್ತಾರೆ.ಗನ್ ಖರೀದಿನೂ ಅವ್ರಿಂದಲೇ ಮಾಡಿದೆ ಅಂತಾ ಹೇಳಿದ್ದಾನೆ.ಸಮೀರ್ ಹಿಂದೇ ಯಾವುದಾದ್ರೂ ಪ್ರಕರಣ ಇದ್ದೀಯಾ ಕೆದಕಿದಾಗ ಸಿಕ್ಕಿದ್ದು ಅಜ್ಜಂಪುದಲ್ಲಿ ಗಾಂಜಾ ಕೇಸ್.ಇನ್ನೂ ಅರಣ್ಯ ಇಲಾಖೆಗೂ ಇತನ ಬಗ್ಗೆ ಮಾಹಿತಿ ಕಲೆಹಾಕುವಂತೆ ಸೂಚಿಸಲಾಗಿದೆ. ಇದಲ್ಲದೆ ಎರಡು ಪೊಲೀಸ್ ತಂಡ ನಿಯೋಜನೆ ಮಾಡಿದ್ದು ಪೊಲೀಸ್ರು ಇನ್ನಷ್ಟು ತನಿಖೆ ಚುರುಕುಗೊಳಿಸಿದ್ದಾರೆ.ಒಟ್ಟಾರೆ ಯುವಕನ ಕೈಯಲ್ಲಿ ಅಕ್ರಮ ಗನ್ ಪತ್ತೆಯಾಗಿರೊ ಪ್ರಕರಣವಂತೂ ಪೊಲೀಸ್ರ ನಿದ್ದೆಗೆಡಿಸಿದೆ. ಗಾಂಜಾವೆನೂ ಒಂದು ಕಡೆಯಾದ್ರೆ ಮತ್ತೊಂದು ಕಡೆ ಗನ್ ಯಾಕೆ ಇಟ್ಕೊಂಡಿದ್ದ.ಹತ್ತು ಹಲವು ಅನುಮಾನಗಳನ್ನ ಇಟ್ಕೊಂಡು ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.

click me!