ಬಳ್ಳಾರಿ: ಅಂಧ ಯುವತಿಗೆ ಮೋಸ ಮಾಡಿದ ದುರುಳರು, ನಾಟಿ ಔಷಧಿ ಹೆಸರಲ್ಲಿ ವಂಚನೆ..!

By Girish GoudarFirst Published Oct 10, 2023, 10:03 AM IST
Highlights

ದೇವರ ಹೆಸರಲ್ಲಿ ನಾಟಿ ಔಷಧಿ ನೀಡೋ ಮೂಲಕ ಮೋಸ. ಕಣ್ಣಿಲ್ಲದೇ ಇದ್ರೂ ಅದನ್ನೆಲ್ಲವನ್ನು ಮೆಟ್ಟಿ ನಿಲ್ಲೋ ಮೂಲಕ ಡಿಗ್ರಿ ಮಾಡಿಕೊಂಡು ಕೆಲಸ ಗಿಟ್ಟಿಸಿಕೊಂಡಿದ್ದ ಗಟ್ಟಿಗಿತ್ತಿ. ಮತ್ತೊಬ್ಬರಿಗೆ ಸ್ಪೂರ್ತಿಯಾಗಿದ್ದ ಯುವತಿಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಖದೀಮರು.

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಅ.10): ಆಕೆಯ ಹೆಸರು ನೇತ್ರಾ ಆದ್ರೇ, ಆಕೆ ಮಾತ್ರ ಹುಟ್ಟು ಕುರುಡಿ. ಅಂಗವಿಕಲರ ಕೋಟಾದಡಿ ಸರ್ಕಾರಿ ಹುದ್ದೇಯನ್ನು ಪಡೆದಿದ್ಧಾಳೆ. ಆದ್ರೇ ಕಣ್ಣು ಕಾಣದಿರೋ ನೋವು ಮಾತ್ರ ಆಕೆಯನ್ನು ನಿರಂತರವಾಗಿ ಕಾಡುತ್ತಿತ್ತು. ಹೇಗಾದ್ರೂ ಮಾಡಿ ಈ ಲೋಕವನ್ನು ನೋಡಬೆಕು. ತನಗೆ ಕಣ್ಣು ಬರಬೇಕೆನ್ನು ಹಂಬಲದಿಂದ ಕಂಡ ಕಂಡ ದೇವರಲ್ಲಿ ಹರಕೆ ಹೊತ್ತಿರೋದ್ರ ಜೊತೆ ಯಾರು ಏನು ಹೇಳಿದ್ರು, ಆ ಔಷಧಿ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಳು. ಇದನ್ನೇ  ನೆಪ ಮಾಡಿಕೊಂಡ ಕೆಲ ಖದೀಮರು ಔಷಧಿ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ವಂಚನೆ ಮಾಡಿದ್ದಾರೆ. ಸಂಡೂರಿನ ಅಂಗವಿಕಲೇ ಕಣ್ಣಿರಿನ ಕತೆ ಇಲ್ಲಿದೆ

ದೇವರ ಹೆಸರಲ್ಲಿ ನಾಟಿ ಔಷಧಿ ನೀಡೋ ಮೂಲಕ ಮೋಸ ಮಾಡಿದ್ದಾರೆ. ಕಣ್ಣಿಲ್ಲದೇ ಇದ್ರೂ ಅದನ್ನೆಲ್ಲವನ್ನು ಮೆಟ್ಟಿ ನಿಲ್ಲೋ ಮೂಲಕ ಡಿಗ್ರಿ ಮಾಡಿಕೊಂಡು ಕೆಲಸ ಗಿಟ್ಟಿಸಿಕೊಂಡಿದ್ದ ಗಟ್ಟಿಗಿತ್ತಿ. ಮತ್ತೊಬ್ಬರಿಗೆ ಸ್ಪೂರ್ತಿಯಾಗಿದ್ದ ಯುವತಿಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಖದೀಮರು.

ಕಾಂಗ್ರೆಸ್‌ಗೆ ಎಲ್ಲ ಜಾತಿಯವರು ಮತ ಹಾಕಿದ್ದಾರೆ: ಶಾಮನೂರಿಗೆ ಉಗ್ರಪ್ಪ ಪರೋಕ್ಷ ಟಾಂಗ್‌

ಹೌದು, ಈ ಯುವತಿಯನ್ನೊಮ್ಮೆ ನೋಡಿ. ಹೀಗೆ ಕಣ್ಣು ಕಾಣದೇ ಇದ್ರೂ ತನ್ನ ಎಲ್ಲ ಕೆಲಸವನ್ನು ಮಾಡಿಕೊಳ್ಳೊದ್ರ ಜೊತೆಗೆ ಸರ್ಕಾರಿ ಸಾಮ್ಯದ ಎನ್ಎಂಡಿಸಿಯಲ್ಲಿ ಮೈನಿಂಗ್ ಕಂಪನಿಯಲ್ಲಿ ಸರ್ಕಾರಿ ಕೆಲಸವನ್ನು ಮಾಡುತ್ತಿದ್ದಳು. ಆದ್ರೇ, ಅಸ್ಪಷ್ಟವಾಗಿ ಕಾಣುತ್ತಿದ್ದ ತನ್ನ ಕಣ್ಣು ಸಂಪುರ್ಣವಾಗಿ ಕಾಣುವಂತಾಗಬೇಕೆಂದು ನಿತ್ಯ ದೇವಸ್ಥಾನಕ್ಕೆ ಹೋಗೋದು, ಕಂಡ ಕಂಡ ದೇವರಿಗೆ ಹರಕೆ ಹೊರೋದು ಅದರಿಂದಾದ್ರೂ ಕಣ್ಣು ಬರುತ್ತದೆ ಎನ್ನುವ ನಿರೀಕ್ಷೆ ಇತ್ತು. ಹೀಗೆ ಹರಕೆ ಹೊತ್ತು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋದಾಗ ಮುದೋಳ ಮೂಲದ ಯುವಕನೊಬ್ಬ ಪರಿಚಯವಾಗಿದ್ದಾನೆ. ತನ್ನ ತಂಗಿ ಮತ್ತು ತಮ್ಮನಿಗೂ ನಾಟಿ ಔಷಧಿ ತೆಗೆದುಕೊಂಡಿದ್ದಕ್ಕೆ ಕಣ್ಣು ಬಂದಿದೆ ಎಂದು ಹೇಳಿ ನೇತ್ರಾ ಮತ್ತವರ ಕುಟುಂಬ ದವರನ್ನು ನಂಬಿಸಿದ್ದಾರೆ. ಔಷಧಿ ನೀಡೋದಾಗಿ ಹೇಳಿ ಸಾವಿರಾರು ರೂಪಾಯಿ ಪೋನ್ ಪೇ ಮಾಡಿಸಿಕೊಂಡಿದ್ದಾನೆ. ಒಮ್ಮೆಯೂ ಯಾವ ಔಷಧಿ ಕಳುಹಿಸಿಲ್ಲವೆಂದು ಗಲಾಟೆ ಮಾಡಿದ ಹಿನ್ನೆಲೆ ಮುದೋಳಕ್ಕೆ ಬನ್ನಿ ಎಂದು ಹೇಳಿ ಅಲ್ಲಿಯೂ 80 ಸಾವಿರದ ನಾಟಿ ಔಷಧಿ ಕೊಟ್ಟು ಹಣ ಪಡೆದಿದ್ದಾನೆ. ಇದೀಗ ಕಳೆದ ಆರು ತಿಂಗಳಿಂದ ಔಷಧಿ ತೆಗೆದುಕೊಂಡ್ರು ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಹಣ ಪಡೆದವನ ಫೋನ್ ರಿಸಿವ್ ಮಾಡ್ತಿಲ್ಲ ಹೀಗಾಗಿ ಇದೀಗ ಮೋಸ ಹೋಗಿರೋದು ಗೊತ್ತಾಗಿದೆ.

ಬಳ್ಳಾರಿ: ಅವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಆಕ್ರೋಶ, ಅಧಿಕಾರಿಗಳ ಎಡವಟ್ಟಿಗೆ ಹೈರಾಣಾದ ಜನ..!

ಕಣ್ಣು ಕಾಣದೇ ಇರೋದನ್ನು ಬಂಡವಾಳ ಮಾಡಿಕೊಂಡ ಖದೀಮರು

ಮನುಷ್ಯನ ಅಂಗವೈಕಲ್ಯವನ್ನೇ ಬಂಡವಾಳ ಮಾಡಿಕೊಂಡ ಧುರಳು ನಂಬಿಕೆ ಮತ್ತು ಭಾವನಾತ್ಮಕವಾಗಿ ಮಾತನಾಡೋ ಮೂಲಕ ಯುವತಿ ನೇತ್ರಾ ಮತ್ತವರ ಕುಟುಂಬವನ್ನು ಹಂತ ಹಂತವಾಗಿ ಮೋಸ ಮಾಡೋ ಮೂಲಕ ಹಣವನ್ನು ಲಪಟಾಯಿಸಿದ್ದಾರೆ. ಮೋಸ ಮಾಡಿದ ಮುದೋಳದ ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತ ಔಷಧಿ ಕೊಡಿಸಿದ್ದ ಅಂಗಡಿ ಕೇವಲ ಆಯುರ್ವೇದ ಅಂಗಡಿಯಾಗಿದ್ದು, ಅಲ್ಲಿ ಆ ಯುವಕ ಹೇಳಿದ್ದ ಔಷಧಿ ಮಾತ್ರ ಕೊಟ್ಟಿದ್ದಾರೆ. ಇದರಲ್ಲಿ ಅಂಗಡಿಯವರ ಪಾತ್ರವೇನಿಲ್ಲ ಎನ್ನಲಾಗುತ್ತಿದೆ.  ಇದೀಗ ಫೋನ್ ಸ್ವೀಚ್ ಆಫ್ ಮಾಡಿರೋ ಯುವಕನ ಮೋಸಕ್ಕೆ ಕಣ್ಣು ಕಾಣದ ಯುವತಿ ನೋವನ್ನು ಅನುಭವಿಸುತ್ತಿದ್ದಾಳೆ.

ಮೋಸ ಹೋಗೋರು ಇರೋವರೆಗೂ ಮೋಸ ಮಾಡೋರು ಇರುತ್ತಾರೆ

ಹೌದು, ಮೋಸ ಹೋಗೊರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ ಎನ್ನುವದಕ್ಕೆ ಈ ಪ್ರಕರಣ ಮತ್ತೊಂದು ಸಾಕ್ಷಿಯಾಗಿದೆ. ಆದ್ರೇ, ಅಂಗಾಂಗ ವೈಫಲ್ಯ ಇರೋರನ್ನು ಈ ರೀತಿ ಮೋಸ ಮಾಡಿರೋದು ಮಾತ್ರ ಅಕ್ಷಮ್ಯ ಅಪರಾದವಾಗಿದೆ. ಸದ್ಯ ಈ ಬಗ್ಗೆ ಸೈಬರ್ ಕ್ರೈಮ್ ನವರಿಗೆ ದೂರು ನೀಡಲು ಯುವತಿ ಮುಂದಾಗಿದ್ದಾರೆ.

click me!