
ಬರೇಲಿ(ಆ.03) ಭಾರತದ ಹಲವು ಭಾಗದಲ್ಲಿ ಈಗಲೂ ದಲಿತರ ಮೇಲೆ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ. ಗಂಡು ಮಗು ಹುಟ್ಟಿದ ಸಂತಸದಲ್ಲಿ 25ರ ಹರೆಯದ ದಲಿತ ಊರಿಗೆಲ್ಲಾ ಸಿಹಿ ಹಂಚಿದ್ದಾನೆ. ಆದರೆ ಊರಿನ ಮುಖಂಡನ ನಾಲ್ವರು ಪುತ್ರರಿಗೆ ಎಣ್ಣೆ ಪಾರ್ಟಿ ಕೊಟ್ಟಿಲ್ಲ ಎಂದು ದಲಿತನ ಮರಕ್ಕೆ ಕಟ್ಟಿ ಬಡಿದು ಕೊಂದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
25ರ ಹರೆಯದ ದಲಿತ ಸಚಿನ್ ಕುಮಾರ್ ಸಣ್ಣ ರೈತನಾಗಿ ಗುರುತಿಸಿಕೊಂಡಿದ್ದಾನೆ. ಈತನ ಪತ್ನಿ ಶಿವಾನಿ ಗಂಡು ಮಗುವಿಗೆ ಜನ್ಮನೀಡಿದ್ದಾಳೆ. ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಸಹಜವಾಗಿ ಮಗು ಹುಟ್ಟಿದ ಖುಷಿ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ. ಈ ಖುಷಿಯಲ್ಲಿ ಸಚಿನ್ ಕುಮಾರ್ ಊರಿಗೆ ಸಿಹಿ ಹಂಚಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸ್ಥಳೀಯ ನಿವಾಸಿಗಳಿಗೆ ಸಿಹಿ ಹಂಚಿ ಸಂಭ್ರಮಪಟ್ಟಿದ್ದಾನೆ. ಈ ವಿಚಾರ ತಿಳಿದ ಊರಿನ ಮುಖಂಡನ ನಾಲ್ವರು ಮಕ್ಕಳು ಕೆಂಡಾಮಂಡಲರಾಗಿದ್ದಾರೆ.
ಅನ್ಯ ಜಾತಿ ಯುವಕನೊಂದಿಗೆ ಪ್ರೀತಿ: ಮರಕ್ಕೆ ಕಟ್ಟಿ ಯುವತಿಗೆ ಥಳಿತ
ಸರಿಸುಮಾರು 20 ವರ್ಷದ ಆಸುಪಾಸಿನಲ್ಲಿರುವ ಈ ನಾಲ್ವರು ಸಚಿನ್ ಕುಮಾರ್ ಮನೆಗೆ ಆಗಮಿಸಿ ಏಕಾಏಕಿ ಮನೆಗೆ ನುಗಿದ್ದಾರೆ. ಮನೆಯಲ್ಲಿದ್ದ ಶಿವಾನಿ ಬಳಿ ತಮಗೂ ಸ್ವೀಟ್ ನೀಡುವಂತೆ ಸೂಚಿಸಿದ್ದಾರೆ. ಸ್ವೀಟ್ ಖರೀದಿಸಿ ನೀಡುವುದಾಗಿ ಶಿವಾನಿ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನಾಲ್ವರು ಎಣ್ಣೆ ಪಾರ್ಟಿ ನೀಡಲು ಹಣ ನೀಡಲು ಸೂಚಿಸಿದ್ದಾರೆ. ಇದನ್ನು ನಿರಾಕರಿಸಿದ ಶಿವಾನಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಇತ್ತ ಸಚಿನ್ ಕುಮಾರ್ ಹಾಗೂ ಆತನ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯರು ಈ ಮಾಹಿತಿ ನೀಡಿದ ಬೆನ್ನಲ್ಲೇ ಮನೆಗೆ ಓಡೋಡಿ ಬಂದಿದ್ದಾರೆ. ಬಳಿಕ ಪರಿ ಪರಿಯಾಗಿ ನಾಲ್ವರ ಬಳಿ ಮನವಿ ಮಾಡಿದ್ದಾರೆ. ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಎಣ್ಣೆ ಪಾರ್ಟಿ ಕೊಡಿಸುವಷ್ಟು ಹಣ ನಮ್ಮಲ್ಲಿಲ್ಲ. ಸ್ವೀಟ್ ತಂದುಕೊಡುವುದಾಗಿ ಹೇಳಿದ್ದಾರೆ. ಆದರೆ ಈ ಮಾತನ್ನು ಕೇಳದ ನಾಲ್ವರು, ಸಚಿನ್ ಕುಮಾರ್‌ನನ್ನು ಧರಧರನೆ ಏಳೆದುಕೊಂಡು ಹೋಗಿದ್ದಾರೆ.
ಸಚಿನ್ ಕುಮಾರ್‌ನನ್ನು ಮರಕ್ಕೆ ಕಟ್ಟಿ ಹಾಕಿ ಪಾರ್ಟಿಗೆ ಹಣ ಕೊಡುವಂತೆ ಪೀಡಿಸಿದ್ದಾರೆ. ಬಳಿಕ ಬಡಿಗೆಯಿಂದ ಹೊಡೆದಿದ್ದಾರೆ. ನಾಲ್ವರು ಒಂದೇ ಸಮನೆ ದಾಳಿ ಆರಂಭಿಸಿದ್ದಾರೆ. ಮುಖಂಡರ ಪುತ್ರರಾಗಿರುವ ಕಾರಣ ಇವರ ವಿರುದ್ಧ ಯಾರೂ ಕೂಡ ಧ್ವನಿ ಎತ್ತಿಲ್ಲ. ತೀವ್ರ ರಕ್ತಸ್ರಾವವಾಗುತ್ತಿದ್ದಂತೆ ನಾಲ್ವರು ಸಚಿನ್ ಕುಮಾರ್‌ನನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.
ಕಾಟ ತಡೆಯಲಾಗದೇ ಪ್ರಯಾಣಿಕನ ಸೀಟಿಗೆ ಕಟ್ಟಿ ಹಾಕಿದ ಏರ್ ಇಂಡಿಯಾ ಗಗನಸಖಿಯರು
ಕುಟುಂಬಸ್ಥರು ಹರಸಾಹಸ ಪಟ್ಟು ಆಸ್ಪತ್ರೆ ದಾಖಲಿಸಿದ್ದಾರೆ. ಆಧರೆ ತೀವ್ರಗಾಯಗಳಿಂದ ಸಚಿನ್ ಕುಮಾರ್ ಮೃತಪಟ್ಟಿದ್ದಾರೆ. ಇತ್ತ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿದ ಪೊಲೀಸರು ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೊಬ್ಬನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ