ತಾಲೂಕಿನ ಸಿಗಂದೂರು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಕರೆಂಟ್ ಶಾಕ್ ತಗುಲಿದ ಘಟನೆ ಬುಧವಾರ ನಡೆದಿದೆ.
ಸಾಗರ (ಆ.3): ತಾಲೂಕಿನ ಸಿಗಂದೂರು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಕರೆಂಟ್ ಶಾಕ್ ತಗುಲಿದ ಘಟನೆ ಬುಧವಾರ ನಡೆದಿದೆ.
ಹೊಳೆಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್ ಚಾಲಕ ಎದುರಿನಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ರಸ್ತೆ ಪಕ್ಕಕ್ಕೆ ಬಸ್ ಚಲಾಯಿಸಿದ್ದಾರೆ. ಈ ವೇಳೆ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ತಂತಿ ಬಸ್ ಮೇಲೆ ಬಿದ್ದು ಬಸ್‌ನಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಇಬ್ಬರು ವಿದ್ಯಾರ್ಥಿನಿಯರು ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ ಅಸ್ವಸ್ಥ ವಿದ್ಯಾರ್ಥಿನಿಯರಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿದೆ. ಬಸ್ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದ ತಕ್ಷಣ ಸ್ಥಳೀಯರು ಕಾರ್ಯಪ್ರವೃತ್ತರಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಜೊತೆಗೆ ರಕ್ಷಣಾ ಕಾರ್ಯ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಬಸ್ಸಿನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಯಾರಿಗೂ ಅಪಾಯ ಸಂಭವಿಸಿಲ್ಲ.
Raichur: ಬೈಕ್ ಮತ್ತು ಬಸ್ ಡಿಕ್ಕಿಯಾಗಿ ಜಮೀನಿನಲ್ಲಿ ಉರುಳಿ ಬಿದ್ದ ಬಸ್: 30 ಜನರಿಗೆ ಗಾಯ
ಡಗಾಪೂರದಲ್ಲಿ ರೈತ ಆತ್ಮಹತ್ಯೆ
ಔರಾದ್: ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿದೆ ಎಂದು ಆತಂಕಗೊಂಡು ತಾಲೂಕಿನ ಹೆಡಗಾಪೂರ ಗ್ರಾಮದ ರೈತ ಗುರುಲಿಂಗಯ್ಯ ಶಿವಕುಮಾರಯ್ಯ ಸ್ವಾಮಿ (60) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೊಪ್ಪಳ: ಹುಲಿಗೆಮ್ಮನ ದರ್ಶನ ಪಡೆದು ವಾಪಸ್ ಬರೋ ವೇಳೆ ಬೈಕ್‌ಗೆ ಬಸ್ ಡಿಕ್ಕಿ, ಇಬ್ಬರು ಭಕ್ತರ ದುರ್ಮರಣ
ಮೃತ ರೈತರಾದ ಗುರುಲಿಂಗಯ್ಯ ಕೆಲ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಉಳುಮೆ ಮಾಡಿದ್ದಾರೆ. ಮಳೆ ಹೆಚ್ಚಾಗಿದ್ದರಿಂದ ಬೆಳೆ ಹಾನಿಯಾಗಿದೆ ಎಂದು ಆತಂಕಗೊಂಡು ಮನೆ ಹಿತ್ತಲಿನ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಅವರನ್ನು ಅಗಲಿದ್ದಾರೆ. ಈ ಕುರಿತು ಠಾಣಾಕುಶನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.