2ನೇ ಮದ್ವೆಯಾಗಿದ್ಕೆ ಸತ್ತ ಮೇಲೂ ಸವತಿ ಕಾಡಿದ ಮೊದಲ ಹೆಂಡ್ತಿ: ‘ಆತ್ಮ’ದ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ

By BK Ashwin  |  First Published Aug 3, 2023, 8:30 PM IST

ಮೊದಲ ಹೆಂಡ್ತಿಯ ಆತ್ಮ ಪತಿಯ ದೇಹದಲ್ಲಿ ಬರುತ್ತಿತ್ತು ಮತ್ತು ಎರಡನೇ ಹೆಂಡತಿಗೆ ಕಿರುಕುಳ ನೀಡುತ್ತಿದ್ದಳು. ಈ ಹಿನ್ನೆಲೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. 


ರಾಜ್‌ಕೋಟ್ (ಆಗಸ್ಟ್‌ 3, 2023): ಮದುವೆಯಾದ ಆರು ತಿಂಗಳ ನಂತರ 40 ವರ್ಷದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜುಲೈ 28 ರಂದು ಡ ರಾಜ್‌ಕೋಟ್‌ನಲ್ಲಿ ನಡೆದಿದೆ. ಆದರೆ, ಈ ಆತ್ಮಹತ್ಯೆಗೆ ಕಾರಣವೇ ವಿಚಿತ್ರ ನೋಡಿ.. ಅದೇನಪ್ಪಾ ಕಾರಣ ಅಂತೀರಾ.. ಮುಂದೆ ಓದಿ..

ತನ್ನ ಪತಿಯ ಮೊದಲ ಹೆಂಡತಿಯ ‘ಅತ್ಮ' ದಿಂದ ಆಕೆ ಬೇಸತ್ತಿದ್ದಳಂತೆ! ಮೊದಲ ಹೆಂಡ್ತಿಯ ಆತ್ಮ ಪತಿಯ ದೇಹದಲ್ಲಿ ಬರುತ್ತಿತ್ತು ಮತ್ತು ಎರಡನೇ ಹೆಂಡತಿಗೆ ಕಿರುಕುಳ ನೀಡುತ್ತಿದ್ದಳು. ಈ ಹಿನ್ನೆಲೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತ ಮಹಿಳೆಯನ್ನು ಜಲ್ಪಾ ಬಗ್ತಾರಿಯಾ ಎಂದು ಗುರುತಿಸಲಾಗಿದೆ.

Tap to resize

Latest Videos

ಇದನ್ನು ಓದಿ: ಬಾಲಕಿ ರೇಪ್‌ ಮಾಡಿ ಸಾಕ್ಷ್ಯ ನಾಶ ಮಾಡಲು ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಕೊಂದ ಪಾಪಿಗಳು!

ಇನ್ನು,  ಜಲ್ಪಾ ಬಗ್ತಾರಿಯಾ ಅವರ ತಂದೆ ಭಗವಾನ್ ಅವರು ತಮ್ಮ ಪತಿ ಲಕ್ಷ್ಮಣ್ ಕೋಲಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಗಾಗಿ ಆಜಿ ಅಣೆಕಟ್ಟು ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ಜಲ್ಪಾ 2ನೇ ಮದುವೆಯಾಗುವ ಮುನ್ನ ಮೊದಲ ಪತಿಯ ಬಳಿ ವಿಚ್ಛೇದನ ಪಡೆದಿದ್ದಳು ಹಾಗೂ ಇಬ್ಬರು ಗಂಡು ಮಕ್ಕಳ ತಾಯಿಯಾಗಿದ್ದ ಈಕೆ ವಿಧುರ ಮತ್ತು ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದ ಲಕ್ಷ್ಮಣ್ ಕೋಲಿಯನ್ನು ಮದುವೆಯಾಗಿದ್ದಾರೆ. 

 ಅವರಿಬ್ಬರೂ 6 ತಿಂಗಳ ಹಿಂದೆ ವಿವಾಹವಾದರು ಮತ್ತು ಆಕೆ ತನ್ನ ಪತಿ ಮತ್ತು ಅವರ ಇಬ್ಬರು ಪುತ್ರರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಆದರೆ ಆಕೆಯ ಸ್ವಂತ ಪುತ್ರರು ಹೆತ್ತವರೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Bengaluru Crime: ಯುವತಿ ಜತೆ ಲವ್ವಿಡವ್ವಿ: ಫ್ರೆಂಡ್ಸ್‌ ಜತೆ ಡ್ಯಾನ್ಸ್‌ ಟೀಚರ್‌ನಿಂದ ಗ್ಯಾಂಗ್‌ರೇಪ್‌!

ದೂರಿನ ಪ್ರಕಾರ, ಜಲ್ಪಾ ಎರಡು ತಿಂಗಳ ಹಿಂದೆ ಭಗವಾನ್‌ಗೆ ಕರೆ ಮಾಡಿ, ತನ್ನ ಪತಿ ತನ್ನ ಮೃತ ಹೆಂಡತಿಯ ಫೋಟೋವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಅವಳನ್ನು ಪೂಜಿಸುತ್ತಾನೆ. ಮತ್ತು ನಂತರ ಅವನ ಮೃತ ಹೆಂಡತಿಯ 'ಆತ್ಮ' ಗಂಡನ ದೇಹದ ಮೇಲೆ ಬರುತ್ತಿತ್ತು ಮತ್ತು ಆತ  'ದುಷ್ಟಶಕ್ತಿ'ಯ ಪ್ರಭಾವದಿಂದ ತನಗೆ ಹಿಂಸೆ ಮಾಡುತ್ತಿದ್ದ. ಅಲ್ಲದೆ, ತನ್ನ ಮೇಲೆ ಕೋಪಗೊಂಡು ಪತಿಯ ದೇಹದಲ್ಲಿದ್ದ ಆತನ ಮೊದಲ ಹೆಂಡತಿ ತನಗೆ ಹೊಡೆಯುತ್ತಿದ್ದಳು’’ ಎಂದು ಹೇಳಿದ್ದಳಂತೆ. ಈ ಸಂಬಂಧ ನಾವು ಮಧ್ಯ ಪ್ರವೇಶಿಸಲು ಪ್ರಯತ್ನಿಸಿದೆವು ಮತ್ತು ಅಳಿಯನ ನಡವಳಿಕೆಗಾಗಿ ಕೆಲವು ತಜ್ಞರನ್ನು ಸಂಪರ್ಕಿಸಲು ಕೇಳಿಕೊಂಡಿದ್ದೆವು ಎಂದೂ ಮೃತ ಮಹಿಳೆಯ ತಂದೆ ಭಗವಾನ್ ಹೇಳಿಕೊಂಡಿದ್ದಾರೆ. 
 
ಜಲ್ಪಾ ತನ್ನ ಮದುವೆಯಾದ ಆರು ತಿಂಗಳಲ್ಲಿ ಎರಡು-ಮೂರು ಬಾರಿ ತನ್ನ ಪೋಷಕರ ಮನೆಗೆ ವಾಪಸ್‌ ಬಂದಿದ್ದಳು. ಆದರೆ ಅವಳ ಹೆತ್ತವರು ಮತ್ತು ಅವಳ ಪತಿ ಮನವೊಲಿಸಿದ ನಂತರ, ಅವಳು ತನ್ನ ಗಂಡನ ಮನೆಗೆ ಹಿಂದಿರುಗಿದ್ದಳು. ಕೊನೆಗೆ ಪತಿಯ ಹಿಂಸಾತ್ಮಕ ಕೃತ್ಯದಿಂದ ಬೇಸತ್ತ ಆಕೆ ಜುಲೈ 28 ರಂದು ತನ್ನ ಸಹೋದರಿ ನೀಲಂಗೆ ಕರೆ ಮಾಡಿ ತನ್ನ ಇಬ್ಬರು ಗಂಡು ಮಕ್ಕಳನ್ನು ನೋಡಿಕೊಳ್ಳುವಂತೆ ಹೇಳಿ ವಿಷ ಸೇವಿಸಿರುವುದಾಗಿ ತಿಳಿಸಿದ್ದಾಳೆ. ನಂತರ, ಅವಳು ಫೋನ್ ತೆಗೆಯಲಿಲ್ಲ, ಆಕೆಯ ಮನೆಯವರು ಮನೆಗೆ ತಲುಪಿದಾಗ ಅವಳು ಪ್ರಜ್ಞಾಹೀನಳಾಗಿ ಬಿದ್ದಿದ್ದಳು ಮತ್ತು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. 

ಇದನ್ನೂ ಓದಿ: ತಂದೆಯ ಸಹೋದ್ಯೋಗಿಗಳಿಂದ ಅಪ್ರಾಪ್ತ ಸೋದರಿಯರ ಗ್ಯಾಂಗ್‌ ರೇಪ್: ಗರ್ಭಿಣಿಯಾದ ಬಾಲಕಿಯರು

click me!