ವೃದ್ಧೆಯನ್ನು ಕೊಂದು ಅರಣ್ಯದಲ್ಲಿ ಶವ ಸುಟ್ಟ ಪ್ರಕರಣ: ಬಳೆ, ಸರ ನೀಡಿತು ಸುಳಿವು!

By Kannadaprabha News  |  First Published Apr 15, 2023, 9:42 AM IST

ಜಯಮ್ಮಳ ಬಂಧುಗಳು ಕಳೆದ ಕೆಲವು ದಿನಗಳ ಹಿಂದೆ ಮೊಳಕಾಲ್ಮುರು ಪೊಲೀಸ್‌ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಕಾಣೆಯಾದ ಸಂದರ್ಭದಲ್ಲಿ ಜಯಮ್ಮಳ ಬಳೆ ಮತ್ತು ಸರದ ಬಗ್ಗೆಯೂ ಸಹ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಲೆ ಪ್ರಕರಣದ ಬಗ್ಗೆ ಪೊಲೀಸ್‌ ಠಾಣೆಗೆ ಮಾಹಿತಿ ಹೋದಾಗ ಮೊಳಕಾಲ್ಮುರು ಪಿಎಸ್‌ಐ ಬಳೆ ಹಾಗೂ ಸರ ಕಾಣೆಯಾದ ಜಯಮ್ಮಳದ್ದೆ ಎಂದು ಗುರುತಿಸಿದಾಗ ಈ ಪ್ರಕರಣ ಪತ್ತೆಯಾಗಿದೆ.


ಚಳ್ಳಕೆರೆ (ಏ.15) : ಕಳೆದ ಏ. 10ರ ರಾತ್ರಿ ನಾಯಕನಹಟ್ಟಿಪೊಲೀಸ್‌ ಠಾಣಾ ವ್ಯಾಪ್ತಿಯ ಮಲ್ಲೂರಹಳ್ಳಿ ಅರಣ್ಯ ಪ್ರದೇಶದಲ್ಲಿ ಸುಮಾರು 40ರಿಂದ 50 ವಯಸ್ಸಿನ ಮಹಿಳೆಯೊಬ್ಬಳ ಸುಟ್ಟು ಮೃತ ದೇಹ ದೊರಕಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಾಯಕನಹಟ್ಟಿಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ಕೆ. ಪರಶುರಾಮ್‌, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಕ್ಷಿಪ್ರಗತಿಯಲ್ಲಿ ಪತ್ತೆ ಮಾಡಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು ಪತ್ತೆ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟಮಹಿಳೆ ಕೊಂಡ್ಲಹಳ್ಳಿ ಗ್ರಾಮದ ಜಯಮ್ಮ(70) ಎಂದು ತಿಳಿದುಬಂದಿದ್ದು, ಅದೇ ಗ್ರಾಮದವರಾದ ರಾಧಮ್ಮ(40), ರಾಧಮ್ಮಳ ಪುತ್ರ ನವೀನ್‌(21) ಹಾಗೂ ಮತ್ತೊಬ್ಬ ವ್ಯಕ್ತಿ ಚಳ್ಳಕೆರೆಯ ಮಂಜುನಾಥ ಚಾರಿ ಎಂಬ ಮೂವರು ಸೇರಿ ಸಂಚುರೂಪಿಸಿ ವೃದ್ಧೆಯನ್ನು ಕೊಲೆ ಮಾಡಿ ಕಾರಿನಲ್ಲಿ ಮಲ್ಲೂರಹಟ್ಟಿಅರಣ್ಯ ಪ್ರದೇಶದಲ್ಲಿ ತಂದು ಸುಟ್ಟುಹಾಕಿದ್ದಾರೆ.

Latest Videos

undefined

ಹುಡುಗಿಯೊಂದಿಗೆ ಅನೈತಿಕ ಸಂಬಂಧ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ

ಮೃತ ಜಯಮ್ಮ ಹಣಕಾಸಿನ ವ್ಯವಹಾರ ಮಾಡುತ್ತಿದ್ದು, ಇವಳ ಬಳಿ ಸಾಕಷ್ಟುಬಂಗಾರದ ಆಭರಣ ಹಾಗೂ ಹಣವಿತ್ತು. ಇದನ್ನು ಪಡೆದುಕೊಳ್ಳಲು ಸಂಚುರೂಪಿಸಿದ ರಾಧಮ್ಮ, ನವೀನ್‌, ಮಂಜುನಾಥ ಚಾರಿ ಈ ಕೃತ್ಯವೆಸಗಿದ್ದಾರೆ. ಜೊತೆಗೆ ರಾಧಮ್ಮ ಜಯಮ್ಮನಿಂದ ಸಾಲ ಪಡೆದಿದ್ದು, ಸಾಲವನ್ನು ನೀಡಲು ಸಾಧ್ಯವಾಗದೇ ಇದ್ದಾಗ ಮಗ ಹಾಗೂ ಆತನ ಸ್ನೇಹಿತನೊಂದಿಗೆ ಸೇರಿ ಈ ಕೃತ್ಯ ನಡೆಸಿದ್ದಾರೆ. ಜಯಮ್ಮಗೆ ವಿಷ ಕುಡಿಸಿ ಸಾಯಿಸಿ ನಂತರ ಸುಟ್ಟು ಹಾಕಿದ್ದಾರೆ.

ಸುಳಿವು ನೀಡಿದ ಬಳೆ, ಸರ:

ಜಯಮ್ಮಳ ಬಂಧುಗಳು ಕಳೆದ ಕೆಲವು ದಿನಗಳ ಹಿಂದೆ ಮೊಳಕಾಲ್ಮುರು ಪೊಲೀಸ್‌ ಠಾಣೆ(Molakalmuru police station)ಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಕಾಣೆಯಾದ ಸಂದರ್ಭದಲ್ಲಿ ಜಯಮ್ಮಳ ಬಳೆ ಮತ್ತು ಸರದ ಬಗ್ಗೆಯೂ ಸಹ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಲೆ ಪ್ರಕರಣದ ಬಗ್ಗೆ ಪೊಲೀಸ್‌ ಠಾಣೆಗೆ ಮಾಹಿತಿ ಹೋದಾಗ ಮೊಳಕಾಲ್ಮುರು ಪಿಎಸ್‌ಐ ಬಳೆ ಹಾಗೂ ಸರ ಕಾಣೆಯಾದ ಜಯಮ್ಮಳದ್ದೆ ಎಂದು ಗುರುತಿಸಿದಾಗ ಈ ಪ್ರಕರಣ ಪತ್ತೆಯಾಗಿದೆ.

ಕೋಲ ನಡೆಯುವಾಗ್ಲೇ ಬಿತ್ತು ಹೆಣ..ಕೊಲೆಗಾರನ ಬಗ್ಗೆ ದೈವವೇ ಕೊಟ್ತು ಸುಳಿವು..!

 

ತಳಕು ವೃತ್ತ ನಿರೀಕ್ಷಕ ಕೆ. ಸಮೀವುಲ್ಲಾ ಮಾರ್ಗದರ್ಶನದಲ್ಲಿ ನಾಯಕನಹಟ್ಟಿಪಿಎಸ್‌ಐ ಜಿ. ಶಿವರಾಜ್‌ ಮತ್ತು ತಂಡ ಈ ಪ್ರಕರಣವನ್ನು ಕೇವಲ ಎರಡು ದಿನಗಳಲ್ಲಿ ಬೇಧಿಸಿದ್ದು, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೊಟ್ಟಿಗೆಗೆ ಬಿದ್ದ ಬೆಂಕಿ; ಎತ್ತು ಸಾವು

ಚಳ್ಳಕೆರೆ: ತಾಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಜೋಗಿಹಳ್ಳಿ ಗ್ರಾಮದಲ್ಲಿ ತಾಡೂರ ಪ್ರಕಾಶ್‌ ಎಂಬುವವರ ಜಮೀನಿನಲ್ಲಿ ಎತ್ತಿನಕೊಟ್ಟಿಗೆ ಇದ್ದು, ಶುಕ್ರವಾರ ಮಧ್ಯಾಹ್ನ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎರಡು ಎತ್ತುಗಳನ್ನು ಅಲ್ಲಿ ಕಟ್ಟಿಹಾಕಲಾಗಿತ್ತು. ಒಂದು ಎತ್ತು ಬೆಂಕಿಯ ಕೆನ್ನಾಲಿಗೆ ಚಾಚುವ ಮುನ್ನವೆ ಹಗ್ಗವನ್ನು ಹರಿದುಕೊಂಡು ಹೊರ ಬಂದಿದೆ. ಬೆಂಕಿಗೆ ಸಮೀಪದಲ್ಲಿದ್ದ ಮತ್ತೊಂದು ಎತ್ತು ಪೂರ್ಣ ಸುಟ್ಟಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದೆ. ಕೊಟ್ಟಿಗೆಯಲ್ಲಿದ್ದ ವ್ಯವಸಾಯಕ್ಕೆ ಸಂಬಂಧಪಟ್ಟವಸ್ತುಗಳು ಸುಟ್ಟು 1.50 ಲಕ್ಷ ನಷ್ಟಸಂಭವಿಸಿರುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಪಡೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಪಶುವೈದ್ಯಾಧಿಕಾರಿಗಳು, ಪೊಲೀಸ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

click me!