ಶೃಂಗೇರಿ ಶ್ರೀ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅಜರ್‌ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

By Suvarna News  |  First Published Jul 19, 2022, 11:24 PM IST

ಭಾರತೀತೀರ್ಥ ಮಹಾಸ್ವಾಮಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. 2015 ನವೆಂಬರ್‌ನಲ್ಲಿ ಈ ಪ್ರಕರಣ ನಡೆದಿತ್ತು.


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು, (ಜುಲೈ.19) :
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶ್ರೀಗಳಿಗೆ ಅವಮಾನ ಮಾಡಿದವನಿಗೆ ಜೈಲು ಶಿಕ್ಷೆಯಾಗಿದೆ. ಶೃಂಗೇರಿಯ ಶಾರದಾ ಪೀಠದ ಭಾರತೀತೀರ್ಥ ಶ್ರೀಗಳ ವಿರುದ್ಧ ಅವಹೇಳನಕಾರಿ ಕಮೆಂಟ್ ಹಾಕಿದ್ದ ಮುನ್ನ ಅಜರ್ ಎಂಬಾತನಿಗೆ ಇಂದು (ಮಂಗಳವಾರ) ಶೃಂಗೇರಿಯ ನ್ಯಾಯಾಲಯ ದಂಡದ ಜೊತೆಗೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

 ಹುಬ್ಬಳ್ಳಿ ಮೂಲದ ಮುನ್ನಾ ಅಜರ್‌ಗೆ ಶಿಕ್ಷೆ 
ಶೃಂಗೇರಿ ಶಾರದಾಪೀಠದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವಿರುದ್ಧವಾಗಿ ಅವಹೇಳನಕಾರಿಯಾಗಿ ಫೇಸ್ಬುಕ್ ಪೇಜ್ ಒಂದರಲ್ಲಿ ಪೋಸ್ಟ್ ಹಾಕಿದ್ದ ಮುನ್ನಾ ಅಜರ್ ಎಂಬುವವನಿಗೆ ಶೃಂಗೇರಿಯ ಜೆ.ಎಂ.ಎಫ್.ಸಿ ನ್ಯಾಯಾಲಯವು ಮೂರುವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 3300 ರೂಪಾಯಿಗಳ ದಂಡವನ್ನು ವಿಧಿಸಿ ಆದೇಶಿಸಿದೆ. 2015 ರ ನವೆಂಬರ್ 19 ರಂದು ಫೇಸ್ಬುಕ್ ನಲ್ಲಿ ಜಗದ್ಗುರುಗಳ ಕುರಿತಾಗಿ ಮುನ್ನಾ ಅಜರ್ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ, ಈ ಕುರಿತಾಗಿ ಶೃಂಗೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶೃಂಗೇರಿ ಮಠದ ಹಾಗೂ ಶ್ರೀಗಳ ಭಕ್ತರು ಅನೇಕ ಸಂಖ್ಯೆಯಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು. ಆರೋಪಿಯನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದರು. 

Latest Videos

undefined

ಶಿವಮೊಗ್ಗದಲ್ಲಿ ಹಂದಿ ಅಣ್ಣಿ ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು SP ಮುಂದೆ ಶರಣು

ಪ್ರಕರಣದ ಹಿನ್ನೆಲೆ 
ಶೃಂಗೇರಿ ಹಿಂದೂಸ್ (ಕರ್ನಾಟಕ ಹಿಂದೂಸ್) ಎಂಬ ಫೇಸ್ಬುಕ್ ಪೇಜ್ ನಲ್ಲಿ ಶೃಂಗೇರಿ ಶ್ರೀ ಮಠದ ಗುರುಪರಂಪರೆ ಕುರಿತು ಮಾಹಿತಿ ನೀಡುವ ಪೋಸ್ಟ್ ಒಂದನ್ನು ಹಾಕಲಾಗಿತ್ತು. ಅದರಲ್ಲಿ ಶೃಂಗೇರಿ ಶ್ರೀಗಳ ಫೋಟೋ ಸಹ ಇತ್ತು. ಮುನ್ನ ಅಜರ್ ಎಂಬ ಕಿಡಿಗೇಡಿ ಆ ಪೋಸ್ಟ್ ಗೆ ಅವ್ಯಾಚ್ಯ ಪದಗಳನ್ನು ಬಳಸಿ ಆಕ್ಷೇಪಾರ್ಹ ಕಮೆಂಟ್ ಗಳನ್ನು ಹಾಕಿದ್ದನ್ನು, ಈ ಕುರಿತು ಭಕ್ತ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಶೃಂಗೇರಿಯಲ್ಲಿ ಪ್ರತಿಭಟನೆ ಸಹ ನಡೆದಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕೆಲವೇ ದಿನಗಳಲ್ಲಿ ಹುಬ್ಬಳ್ಳಿ ಮೂಲಕ ಆರೋಪಿ ಮುನ್ನ ಅಜರ್ ಎಂಬುವವನನ್ನು ಹೆಡೆಮುರಿ ಕಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಧೀರ್ ಹೆಗ್ಡೆ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.ಪ್ರಸ್ತುತ ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂದಂಡವನ್ನು ವಿಧಿಸಿ ಶೃಂಗೇರಿಯ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ತೀರ್ಪು ಪ್ರಕಟಿಸಿದ್ದಾರೆ. 

ಈ ಪ್ರಕರಣದ ತನಿಖೆಯನ್ನು 2015 ರಲ್ಲಿ ಶೃಂಗೇರಿ ಠಾಣೆಯ ವೃತ್ತನಿರೀಕ್ಷಕರಾಗಿದ್ದ ಸುಧೀರ್ ಎಂ. ಹೆಗ್ಡೆ ನಡೆಸಿ ಆರೋಪಿಯನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದ್ದರು. ಆರೋಪಿಯ ವಿರುದ್ಧವಾಗಿ ವಕೀಲೆ ಹರೀಣಾಕ್ಷಿವಾದ ಮಂಡನೆ ನಡೆಸಿದ್ದರು.

click me!