ಶಿವಮೊಗ್ಗದಲ್ಲಿ ಹಂದಿ ಅಣ್ಣಿ ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು SP ಮುಂದೆ ಶರಣು

Published : Jul 19, 2022, 10:37 PM IST
ಶಿವಮೊಗ್ಗದಲ್ಲಿ ಹಂದಿ ಅಣ್ಣಿ ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು SP ಮುಂದೆ ಶರಣು

ಸಾರಾಂಶ

ಶಿವಮೊಗ್ಗದಲ್ಲಿ ಹಂದಿ ಅಣ್ಣಿಯನ್ನು ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ(SP) ಮುಂದೆ ಶರಣಾಗಿದ್ದು, ತಪ್ಪೊಪ್ಪಿಕೊಂಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಜುಲೈ.19) :
ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ರೌಡಿಶೀಟರ್ ಹಂದಿ ಅಣ್ಣಿಯನ್ನು ಮಾರಾಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು ಎಸ್‌ಪಿ ಮುಂದೆ ಶರಣಾಗಿದ್ದಾರೆ.

8 ಆರೋಪಿಗಳು ನಿನ್ನೆ(ಸೋಮವಾರ) ತಡರಾತ್ರಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಕಛೇರಿಗೆ ಆಗಮಿಸಿ ಎಸ್ಪಿಯವರ ಎದುರು ಶರಣಾಗಿದ್ದಾರೆ. ಬಳಿಕ ಅವರನ್ನ ಮೆಡಿಕಲ್ ಟೆಸ್ಟ್  ಮಾಡಿಸಿ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.

ಆರೋಪಿಗಳು ಶಿವಮೊಗ್ಗಕ್ಕೆ ರವಾನೆ
ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಕಚೇರಿಗೆ ಆಗಮಿಸಿದ ಎಂಟು ಮಂದಿ ಆರೋಪಿಗಳು,ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇವರುಗಳನ್ನು ನಗರಠಾಣೆಗೆ ಕರೆದೊಯ್ದು ಮಾಹಿತಿ ಪಡೆದುಕೊಳ್ಳಲಾಯಿತು. ಬಳಿಕ ಶಿವಮೊಗ್ಗ ಜಿಲ್ಲೆಯ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ಅವರಿಗೆ ಆರೋಪಿಗಳನ್ನು ಹಸ್ತಾಂತರಿಸಲಾಯಿತು.

ಲವ - ಕುಶರನ್ನು ಹತ್ಯೆ ಮಾಡಿದ್ದ ಹಂದಿ ಅಣ್ಣಿ ಬರ್ಬರ ಕೊಲೆ ಮತ್ತು ಮುನ್ನೆಲೆಗೆ ಬಂದ ಶಿವಮೊಗ್ಗ ಭೂಗತಲೋಕ

ಹಂದಿ ಅಣ್ಣಿಯ ಕೊಲೆಮಾಡಿರುವ 8 ಮಂದಿ ಆರೋಪಿಗಳು ಶರಣಾಗಿರುವುದನ್ನು ದೃಢಪಡಿಸಿದ ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಎಂ.ಎಚ್.ಅಕ್ಷಯ್, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದರು. ಶಿವಮೊಗ್ಗಕ್ಕೆ ಹೋದರೆ ಭಯ ಇರುವ ಕಾರಣಕ್ಕೆ, ಯಾರೂ ಸಹಾಯಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಕಾನೂನಿಗೆ ಬದ್ಧವಾಗಿ ನಡೆದುಕೊಳ್ಳುತ್ತಿರುವುದಾಗಿ  ಸ್ವ ಇಚ್ಚೆಯಿಂದ ಶರಣಾಗುತ್ತಿರುವುದಾಗಿ ಹೇಳಿದ್ದಾರೆಂದರು.

ಶಿವಮೊಗ್ಗದ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರುಗಳನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಕೊಲೆಮಾಡಿದ ಬಳಿಕ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಹೊರಗೆ ತಿರುಗಾಡಲಾಗದೆ ಸ್ಥಿತಿಯಲ್ಲಿ ಹಾಗೂ ಹಣದ ಮುಗ್ಗಟ್ಟು ಎದುರಾಗಿರುವ ಸಾಧ್ಯತೆಗಳನ್ನು ತಳ್ಳುಹಾಕುವಂತಿಲ್ಲ, ಎಲ್ಲಾ ರೀತಿಯ ಆಯಾಮಗಳನ್ನು ಪರಿಶೀಲಿಸಿದಾಗ ಕೊಲೆಮಾಡಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಕೊಲೆಯಾಗಿದ್ದು ಶಿವಮೊಗ್ಗದಲ್ಲಿ
ಶಿವಮೊಗ್ಗ ನಗರದಲ್ಲಿ ಜುಲೈ 14 ರಂದು ವಿನೋಬನಗರದ ಪೊಲೀಸ್ ಚೌಕಿಯ ಬಳಿ ಪೊಲೀಸ್ ಠಾಣೆಯ ಸಮೀಪವೇ ರೌಡಿಶೀಟರ್ ಹಂದಿಅಣ್ಣಿಯ ಬರ್ಬರ ಹತ್ಯೆಯಾಗಿದ್ದು, ಇಡೀ ನಗರವನ್ನೆ ಬೆಚ್ಚಿಬೀಳಿಸಿತ್ತು. ದುಷ್ಕರ್ಮಿಗಳು ಇನ್ನೋವ ಕಾರಿನಲ್ಲಿ ಬಂದು ಆಣ್ಣಿಯನ್ನು ಬೆನ್ನಟ್ಟಿ ಅಟ್ಟಾಡಿಸಿ ಲಾಂಗ್ನಿಂದ ತಲೆಗೆ ಬಲವಾಗಿ ಹೊಡೆದಿದ್ದರು. 

ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಣ್ಣಿ ಮೃತಪಟ್ಟಿದ್ದ. ಘಟನೆ ನಡೆದ ತಕ್ಷಣ ಆರೋಪಿಗಳು ಪರಾರಿಯಾಗಿದ್ದರು. ಈ  ಕೊಲೆ ಪ್ರಕರಣ ಭೇದಿಸಲು ತಂಡರಚಿಸಲಾಗಿತ್ತು.ಹಂದಿ ಅಣ್ಣಿ ಈ ಹಿಂದೆ ಅನೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನಟೋರಿಯಸ್ ರೌಡಿ ಸೋದರರಾಗಿದ್ದ ಲವ-ಕುಶನ ಹತ್ಯೆಯಲ್ಲಿ ಹಂದಿ ಅಣ್ಣಿ ಪ್ರಮುಖ ಆರೋಪಿಯಾಗಿದ್ದ. ಬಳಿಕ ಹಲವು ಹತ್ಯೆ ಪ್ರಕರಣಗಳಲ್ಲಿ ಹಂದಿ ಅಣ್ಣಿ ಭಾಗಿಯಾಗಿದ್ದ ಎನ್ನಲಾಗಿದೆ. ಕೊಲೆಗೆ ಇದೇ ಕಾರಣವೋ ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ಕಾರಣವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ತಿಂಗಳ ಹಿಂದೆಯೇ ಕೊಲೆಗೆ ಸ್ಕೆಚ್:
ಹಂದಿ ಅಣ್ಣಿಯ ಕೊಲೆಯ ಹಿಂದೆ ಲೇಔಟ್ ವಿಚಾರ ಇದೆ ಎನ್ನಲಾಗುತ್ತಿದೆಯಾದರೂ, ಕೊಲೆ ಮಾಡುವ ಸಂಬಂಧ ತಿಂಗಳ ಹಿಂದೇ ಅಣ್ಣಿಗೆ ವಿಚಾರ ಗೊತ್ತಾಗಿತ್ತು ಎನ್ನಲಾಗಿದೆ. ತಿಂಗಳ ಹಿಂದೆಯೇ ಆತನ ಮನೆ ಬಳಿಯೇ ಆತನ ಮೇಲೆ ದಾಳಿ ಮಾಡುವ ಪ್ರಯತ್ನ ನಡೆದಿತ್ತು. ಹಂದಿ ಅಣ್ಣಿ ಹತ್ಯೆಯ ಬಳಿಕ ತಲೆಮರೆಸಿಕೊಂಡು ತಿರುಗಾಡುತ್ತಿದ್ದ 8 ಜನರು ಕೊಲೆಯಾದ ನಾಲ್ಕು ದಿನಗಳ ನಂತರ ಚಿಕ್ಕಮಗಳೂರು ನಗರಕ್ಕೆ ಆಗಮಿಸಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಎದುರು ಶರಣಾಗಿದ್ದಾರೆ.ಆರೋಪಿಗಳಾದ ನಿತಿನ್, ಕಾರ್ತಿಕ್, ಮಧು, ಫಾರೂಕ್, ಚಂದನ್, ಆಂಜನೇಯ, ಮಧುಸೂದನ್, ಮದನ್ ಎಂಬುವರನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡುಮೆಡಿಕಲ್ ಟೆಸ್ಟ್ಗೆ ಒಳಡಿಸಿ ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ