ಕೊಲೆಯಾದವನೇ ಬೇರೊಂದು ಹತ್ಯೆ ಕೇಸಿನ ಆರೋಪಿ, ಪೊಲೀಸ್ ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ

By Suvarna News  |  First Published Jul 19, 2022, 10:57 PM IST

ಮುಳಬಾಗಿಲು ನಗರಸಭೆ ಸದಸ್ಯ ಕೊಲೆ ಪ್ರಕರಣ ಈಗ ಮತ್ತೊಂದು‌ ತಿರುವು ಪಡೆದಿದೆ. ಕೊಲೆಯ ನಂತರ ಮಣ್ಣಾಗಿದ್ದ ಅಮಾಯಕನ ಕೊಲೆ ಪ್ರಕರಣಕ್ಕೆ ಬೆಳಕಿಗೆ ಬಂದಿದೆ. ತನಿಖೆಯ ವೇಳೆ ಬಯಲಾದ ಈ ಪ್ರಕರಣ ಸುಮಾರು 7 ವರ್ಷಗಳ ನಂತರ ಕೊಲೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅಷ್ಟಕ್ಕೂ ಆ ಅಮಾಯಕ ಯಾರು,ಕೊಲೆ ಮಾಡಿವರ್ಯಾರು.ಇಲ್ಲಿದೆ ಕಂಪ್ಲೀಟ್ ಸ್ಟೋರಿ.
 


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕೋಲಾರ.

ಕೋಲಾರ, (ಜುಲೈ.19):
ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಪೇಂಟರ್ ರಮೇಶ್ ಅವರ ಕೊಲೆ ನಡೆದು ಸುಮಾರು 7 ವರ್ಷಗಳು ಕಳೆದಿವೆ.‌ ಸದ್ಯ ಪ್ರಕರಣ ಮರುಜೀವ ಪಡೆದುಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ‌. 

ಅಷ್ಟಕ್ಕೂ ಪ್ರಕರಣ ಬಯಲಿಗೆ ಬಂದಿದ್ದರೂ ಹೇಗೆ ಅನ್ನುವುದಾದರೆ, ಜೂ. 7 ರಂದು ಮುಳಬಾಗಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನಮೋಹನ್ ರೆಡ್ಡಿ ಅವರನ್ನು ಅವರ ಮನೆಯ ಕೂಗಳತ್ತೆ ದೂರದಲ್ಲಿ ಕೊಲೆ ಮಾಡಲಾಗಿತ್ತು.ಕೇಸ್ ನ್ನು ತನಿಖೆ ನಡೆಸಿದ ಸಂದರ್ಭದಲ್ಲಿ ಮೊತ್ತೊಂದು ಕೊಲೆ ಪ್ರಕರಣ ಈಗ ಬಯಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರದಾರಿ ಮೃತ ಜಗನ್ ಮೋಹನ್ ರೆಡ್ಡಿ ಎಂಬುದು ವಿಶೇಷ. 

Tap to resize

Latest Videos

2015 ರ ಏಪ್ರಿಲ್ 30 ರಂದು ಮುಳಬಾಗಿಲು ತಾಲೂಕಿನ ಲಿಂಗಾಪುರದ ನಿರ್ಜನ ಪ್ರದೇಶದ ಪೊದೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಸಿಕ್ಕಿತ್ತು. ಶವ ಗುರುತು ಸಿಗದ ಹಿನ್ನಲೆ, ದೇಹ 'ಡಿ' ಕಂಪೋಸ್ ಆಗಿದೆಯೆಂದು ಮುಳಬಾಗಿಲು ಗ್ರಾಮಾಂತರ ಪೊಲೀಸರೇ, ನೂಗಲಕುಂಟೆ ಕೆರೆ ಬಳಿಯೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.ಬಳಿಕ ಶರ್ಟ್ ಮೇಲಿನ ಧರ್ಮಸಿಂಗ್ ಟೈಲರ್ ಎಂಬ ಮಳಿಗೆಯ ಹೆಸರಿನ ಮೂಲಕ,ಅದು ಗಣೇಶಪಾಳ್ಯದ 31 ವರ್ಷದ ರಮೇಶ್ ಅಲಿಯಾಸ್ ಪೇಂಟರ್ ರಮೇಶ್ ಎಂದು ತಿಳಿದುಬಂದಿದೆ.

Kolar News: ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ: ಎಸ್ಕೇಪ್ ಆಗ ಹೊರಟ ಆರೋಪಿ ಕಾಲಿಗೆ ಗುಂಡೇಟು!

ಇನ್ನು 2015 ಏಪ್ರಿಲ್ 28 ರಂದು ಮುತ್ಯಾಲಪೇಟೆಯಲ್ಲಿ ಗಂಗಮ್ಮನ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ವೇಳೆ ಸಕತ್ತಾಗಿಯೇ ಕುಡಿದಿದ್ದ ಪೇಂಟರ್ ರಮೇಶ್, ಡ್ಯಾನ್ಸ್ ಮಾಡುತ್ತಾ ನಗರಸಬೆ ಸದಸ್ಯ ಜಗನ್ ಮೋಹನ್ ರೆಡ್ಡಿ ಭುಜಕ್ಕೆ ಮೈ ತಾಕಿಸಿದ್ದಾನೆ. ಜೊತೆಗೆ ಕುಡಿದ ಅಮಲಲ್ಲಿ ಹಾಗೆ ಚೇಸ್ಟೆ ಮಾಡಿದ್ದಕ್ಕೆ ಕಪಾಳಕ್ಕೆ ಬಾರಿಸಿದ್ದ. ಇದರಿಂದ ಆಕ್ರೋಶಗೊಂಡ ಪೇಂಟರ್ ರಮೇಶ್ ಜಗಳಕ್ಕೆ ಹೋಗಿದ್ದನಂತೆ. ಅದೇ ಜಿದ್ದಿನಿಂದಲೇ ನಿನ್ನ ಒಂದು ಕೈ ನೋಡ್ಕೋತಿನಿ ಎಂದು ಜಗನ್ ಮೋಹನ್ ರೆಡ್ಡಿ ಸವಾಲು ಹಾಕಿದ್ದನಂತೆ. 

ಇನ್ನು ಪೇಂಟರ್ ರಮೇಶ್ ಹಾಗು ಜಗನ್ ಮೋಹನ್ ರೆಡ್ಡಿ ನಡುವೆ, ಆರ್ಕೆಸ್ಟ್ರಾ ಗಲಾಟೆಗೂ ಮೊದಲೇ,ಮೂರ್ನಾಲ್ಕು ಬಾರಿ ಸಣ್ಣ ಮಾತಿನ ಚಕಮಕಿ ಆಗಿ ಗಲಾಟೆಯು ಆಗಿತ್ತಂತೆ, ಇದೇ ಜಿದ್ದಿನ ಮೇಲೆ ತನ್ನ ಬಲಗೈ ಬಂಟನಾಗಿದ್ದ ಸೂರಿ ಹಾಗು ಅಪ್ಪಿ ಎನ್ನುವ ಇಬ್ಬರಿಗೆ ಪೇಂಟರ್ ರಮೇಶ್ ನನ್ನ ಮುಗಿಸುವಂತೆ ತಲಾ 1 ಲಕ್ಷ ಹಣ ನೀಡಿ ಸುಪಾರಿಯನ್ನು ಜಗನ ಮೋಹನ್‌ ರೆಡ್ಡಿ ನೀಡಿದ್ದಾರಂತೆ.ಇಬ್ಬರು 2015 ರ ಏಪ್ರಿಲ್ 30 ರಂದು ರಮೇಶನನ್ನ ಕರೆದಿಕೊಂಡು ಹೋಗಿ, ಮುಳಬಾಗಿಲು ನಗರ ಹೊರವಲಯದ ಲಿಂಗಾಪುರ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಜಗನ್ನಾಥ್ ಪೊಲೀಸರಿಗೆ ತಿಳಿಸಿದ್ದು, ಪೇಂಟರ್ ರಮೇಶ್ ಕೊಲೆಯನ್ನ ಜಗನ್ ಮೋಹನ್ ರೆಡ್ಡಿ ಸೂಚನೆ ಮೇರೆಗೆ, ಬೆಂಬಲಿಗರಾದ ಸೂರಿ, ಹಾಗು ಅಪ್ಪಿ ಇಬ್ಬರೇ ಮಾಡಿದ್ದಾರೆ. 

ಅವರಿಬ್ಬರು ಕೊಲೆ ಮಾಡಲು ನನ್ನನ್ನ ಡ್ರೈವರ್ ಆಗಿ ವಾಹನಕ್ಕೆ ಬಳಿಸಿಕೊಂಡಿದ್ದರು ಎಂಬ ಹೇಳಿಕೆಯನ್ನ ಜಗನ್ ಮೋಹನ್ ರೆಡ್ಡಿ ಕೊಲೆ ಆರೋಪಿ ಜಗನ್ನಾಥ್ ತಿಳಿಸಿದ್ದು,ಇದರಿಂದ ಕಾರ್ಯಪ್ರವೃತ್ತಗೊಂಡ ಕೋಲಾರ ಎಸ್ಪಿ ದೇವರಾಜ್, ಕೂಡಲೇ ಸೂರಿ ಹಾಗು ಅಪ್ಪಿ ಎನ್ನುವ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ಕೇಸ್‍ನ ಮರು ತನಿಖೆಯನ್ನ ಆರಂಭಿಸಿದ್ದಾರೆ,ಪೇಂಟರ್ ರಮೇಶ್ ಕೊಲೆ ಕೇಸ್ ಇದೀಗ ಪ್ರಕರಣದ ವಿಚಾರಣೆ ನಡೆಸಲು ಮಾಸ್ತಿ ಸರ್ಕಲ್ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಪೊಲೀಸರು ರಮೇಶ್ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ, ಮರು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದ್ದಾರೆ.ಆದ್ರೆ ಕೆರೆಯಲ್ಲಿ ನೀರು ತುಂಬಿರುವುದರಿಂದ ನೀರನ್ನು ಹೊರ ಹಾಕುವುದು ಕಷ್ಟದ ಕಷ್ಟಕರವಾಗಿದೆ.ಇನ್ನು ಎರಡು ಮೂರು ದಿನ ಕಾಯಬೇಕಾಗಿದೆ.

ಒಟ್ಟಾರೆ ಉಪ್ಪು ತಿಂದವನ್ನು ನೀರು ಕುಡಿಯಲೇಬೇಕಾಗಿದ್ದು,ಪೇಂಟರ್ ರಮೇಶ್ ಕೊಲೆ ಪ್ರಕರಣದಲ್ಲಿ ಅಂದು‌ ಭಾಗಿಯದವರು ಮತ್ತು‌ ಕಡತವನ್ನು ಮರೆ ಮಾಚಿದ ಪೊಲೀಸ ಅಧಿಕಾರಿಗಳು ಕಂಬಿ ಎಣಿಸಲೇ‌ ಬೇಕಾಗಿದೆ.ಜಗನ್ ಕೊಲೆ ಪ್ರಕರಣ ಭೇದಿಸಲು ಹೋದ ಪೊಲೀಸರಿಗೆ ಮತ್ತೊಂದು‌ ಆಘಾತಕಾರಿ ಕೊಲೆ ಪ್ರಕರಣ‌ ಬೆಳಕಿಗೆ ಬಂದಿರುವುದು ಜಿಲ್ಲೆಯ‌ ಜನರನ್ನು‌ ಬೆಚ್ಚಿಬಿಳಿಸಿದೆ.ಸುಪಾರಿ ಹಿಂದೆ ಮತ್ತೊಂದು ಸುಪಾರಿ ಬೆಳಕಿಗೆ ಬಂತು.

click me!