* ಎರಡ್ಮೂರು ತಿಂಗಳಿಂದ ನಿರಂತರ ಕಳ್ಳತನ
* ಕೊನೆಗೆ ಚಲಾಕಿ ದಂಪತಿ ಸೆರೆ
* ಬಂಧಿತ ದಂಪತಿಯಿಂದ 230 ಬ್ಯಾಟರಿ ಜಪ್ತಿ
ಬೆಂಗಳೂರು(ಫೆ.16): ಇತ್ತೀಚಿಗೆ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ(Traffic Signals) ಬ್ಯಾಟರಿ ಕಳವು ಮೂಲಕ ಸಂಚಾರ ಪೊಲೀಸರಿಗೆ(Police) ತಲೆನೋವಾಗಿ ಪರಿಣಮಿಸಿದ್ದ ಕುಖ್ಯಾತ ದಂಪತಿ ಕೊನೆಗೂ ಅಶೋಕ ನಗರ ಠಾಣೆ ಪೊಲೀಸರ ಗಾಳಕ್ಕೆ ಸಿಕ್ಕಿದ್ದಾರೆ.
ಗೊರೆಗುಂಟೆಪಾಳ್ಯದ ಸಿಕಂದರ್ ಮತ್ತು ಆತನ ಪತ್ನಿ ನಜ್ಮಾ ಬಂಧಿತರು. ಆರೋಪಿಗಳಿಂದ(Accused) 230 ಬ್ಯಾಟರಿಗಳನ್ನು(Battery) ಜಪ್ತಿ ಮಾಡಲಾಗಿದೆ. ಖದೀಮ ದಂಪತಿಯಿಂದ ಬ್ಯಾಟರಿ ಖರೀದಿಸಿದ ಗುಜರಿ ವ್ಯಾಪಾರಿ ಧನಶೇಖರ್ ಕೂಡಾ ಪರಪ್ಪನ ಅಗ್ರಹಾರ ಸೇರಿದ್ದಾನೆ. ಎರಡ್ಮೂರು ತಿಂಗಳಿಂದ ನಗರದ ಕೇಂದ್ರ ಭಾಗದಲ್ಲಿ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಬ್ಯಾಟರಿಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದವು(Theft). ಈ ಸರಣಿ ಕಳ್ಳತನವನ್ನು ಗಂಭೀರವಾಗಿ ಪರಿಣಮಿಸಿದ ಪೊಲೀಸರು, ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru Crime: ಪ್ರಿಯಾಂಕ್ ಖರ್ಗೆ ಪತ್ನಿ ಮೊಬೈಲ್ ಕದ್ದಿದ್ದವರ ಸೆರೆ
ಹಣಕ್ಕಾಗಿ ಬ್ಯಾಟರಿಗಳ ಕಳ್ಳತನ
ಸಿಕಂದರ್ ಕ್ರಿಮಿನಲ್(Criminal) ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2017 ಮತ್ತು 18ರಲ್ಲಿ ದ್ವಿಚಕ್ರ ವಾಹನ(Bike Theft) ಕಳ್ಳತನ ಪ್ರಕರಣದಲ್ಲಿ ಆತ ಜೈಲು ಸೇರಿದ್ದ. ಜಾಮೀನು ಪಡೆದು ಜೈಲಿನಿಂದ ಹೊರಬಂದು ಆತ, ರಸ್ತೆ ಬದಿ ಬಟ್ಟೆವ್ಯಾಪಾರ ಶುರು ಮಾಡಿದ್ದ. ಇತ್ತ ಪೀಣ್ಯ ಸಮೀಪ ಗಾರ್ಮೆಂಟ್ಸ್‌ನಲ್ಲಿ ನಜ್ಮಾ ದುಡಿಯುತ್ತಿದ್ದಳು. ಸುಲಭವಾಗಿ ಹಣ ಸಂಪಾದನೆಗೆ ದಂಪತಿ ಕಳ್ಳ ಹಾದಿ ತುಳಿದಿದೆ.
ಕೆಲ ತಿಂಗಳ ಹಿಂದೆ ಅಶೋಕ್‌ನಗರ ಸಮೀಪ ಸಿಗ್ನಲ್‌ವೊಂದರ ಬ್ಯಾಟರಿ ಕದ್ದ ದಂಪತಿ, ಬಳಿಕ ಅದನ್ನು ಗುಜರಿ ವ್ಯಾಪಾರಿ ಧನಶೇಖರ್‌ಗೆ ಮಾರಿದ್ದರು. ಆಗ ಆತ, ಇದೇ ಮಾದರಿಯ ಬ್ಯಾಟರಿ ಇದ್ದರೆ ತಂದರೆ ತಲಾ ಒಂದಕ್ಕೆ 1500 ರು. ಕೊಡುವುದಾಗಿ ಹೇಳಿದ್ದ. ಈ ಮಾತಿನಿಂದ ಉತ್ತೇಜಿತರಾದ ದಂಪತಿ, ರಾತ್ರಿ ವೇಳೆ ಬ್ಯಾಟರಿ ಶಿಕಾರಿ ಶುರು ಮಾಡಿದ್ದರು. ಇತ್ತ ಆ ಬ್ಯಾಟರಿಗಳನ್ನು ತಲಾ ಒಂದಕ್ಕೆ 4-5 ಸಾವಿರಕ್ಕೆ ತನ್ನ ಪರಿಚಿತ ಕೈಗಾರಿಕೆಗೆ ಧನಶೇಖರ್ ವಿಕ್ರಯಿಸುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ತನಿಖಾ ತಂಡಕ್ಕೆ ಬಹುಮಾನ
ಬ್ಯಾಟರಿ ಕಳ್ಳರನ್ನು ಬಂಧಿಸಿದ ಅಶೋಕ ನಗರ ಠಾಣೆ ಇನ್ಸ್‌ಪೆಕ್ಟರ್ ಮಲ್ಲೇಶ್ ಬೋಳೆತ್ತಿನ್ ನೇತೃತ್ವದ ತಂಡಕ್ಕೆ 60 ಸಾವಿರ ರು. ನಗದು ಬಹುಮಾನವನ್ನು ಪೊಲೀಸ್ ಆಯುಕ್ತ ಕಮಲ್ ಪಂತ್ ಘೋಷಿಸಿದ್ದಾರೆ.
Bike Theft: ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಕದ್ದ ಕ್ಲಾಸಿಕ್ ಕಳ್ಳ.. ವಿಡಿಯೋ
ಜನರ ಸುತ್ತಾಟವಿಲ್ಲದ ಸಿಗ್ನಲ್‌ಗಳೇ ಟಾರ್ಗೆಟ್
ರಾತ್ರಿ ವೇಳೆ ಬೈಕ್‌ನಲ್ಲಿ ನಗರ ಸಂಚಾರ ನಡೆಸುತ್ತಿದ್ದ ದಂಪತಿ, ಜನರ ಸುತ್ತಾಟವಿಲ್ಲದ ಜಾಗದ ಸಿಗ್ನಲ್‌ಗಳನ್ನು ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದರು. ಅಲ್ಲದೆ ಬ್ಯಾಟರಿ ಕಳ್ಳತನ ಬಗ್ಗೆ ಪೊಲೀಸರ ಸಹ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಹುಂಬತನ ಬೇರೆ ಇತ್ತು. ಅಂತೆಯೇ ಎರಡು ತಿಂಗಳ ಅವಧಿಯಲ್ಲಿ ಅಶೋಕನಗರ, ಹೈಗ್ರೌಂಡ್, ಸದಾಶಿವನಗರ, ವಿಲ್ಸನ್‌ಗಾರ್ಡನ್, ವೈಯಾಲಿಕಾವಲ್, ಹಲಸೂರು, ಇಂದಿರಾನಗರ, ಮಾಗಡಿ ರಸ್ತೆ, ಯಶವಂತಪುರ, ರಾಜಾಜಿನಗರ, ಜೆ.ಪಿ.ನಗರ ಹಾಗೂ ಬಸವನಗುಡಿ ಸೇರಿ ಹಲವು ಕಡೆ ಸಿಗ್ನಲ್‌ನಲ್ಲಿ ಬ್ಯಾಟರಿ ಕದ್ದು ಸಂಚಾರ ಪೊಲೀಸರಿಗೆ ತಲೆಬಿಸಿ ತಂದಿದ್ದರು. ಈಗ ಆರೋಪಿಗಳಿಂದ 68 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು .20 ಲಕ್ಷ ಮೌಲ್ಯದ ಬ್ಯಾಟರಿಗಳು ಜಪ್ತಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ದಂಪತಿ ಸೆರೆ
ಈ ಬ್ಯಾಟರಿ ಕಳ್ಳರ ಬೆನ್ನಹತ್ತಿದ ಪೊಲೀಸರು, ಜೆ.ಪಿ.ನಗರದ ಸಿಗ್ನಲ್ ಹತ್ತಿರದ ಸ್ಥಳಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಆದರೆ, ಆ ದೃಶ್ಯದಲ್ಲಿ ಬೈಕ್‌ನ ಹಿಂಬದಿ ಬ್ರೇಕ್ ಲೈಟ್ ಇಲ್ಲದ ಕಾರಣ ಅದರ ನೊಂದಣಿ ಸಂಖ್ಯೆ ಅಸ್ಪಷ್ಟವಾಗಿತ್ತು. ಪ್ರತಿ ಬಾರಿ ಬ್ಯಾಟರಿ ಕಳ್ಳತನ ಬಳಿಕ ಗೊರಗುಂಟೆಪಾಳ್ಯದ ಕಡೆಗೆ ಹೋಗುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವಿಶ್ಲೇಷಣೆಯಲ್ಲಿ ಮಾಹಿತಿ ಲಭಿಸಿತ್ತು. ತಕ್ಷಣವೇ ಜಾಗ್ರತರಾದ ತನಿಖಾ ತಂಡವು, ಕೆಲ ದಿನಗಳಿಂದ ರಾತ್ರಿ ವೇಳೆ ಗೊರಗುಂಟೆಪಾಳ್ಯದ ಸರ್ಕಲ್‌ನಲ್ಲಿ ಶಂಕಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿತ್ತು. ಆಗ ಫೆ.3ರಂದು ಬ್ಯಾಟರಿ ಕದ್ದು ಮನೆಗೆ ಮರಳುವಾಗ ಗೊರಗೊಂಟೆಪಾಳ್ಯದಲ್ಲಿ ದಂಪತಿ ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.