
ಬೆಂಗಳೂರು(ಫೆ.16): ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ ಗೋವಿಂದಪುರ ಠಾಣೆ ಪೊಲೀಸರು(Police), ನಗರಕ್ಕೆ ಡ್ರಗ್ಸ್(Drugs) ಪೂರೈಸುತ್ತಿದ್ದ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ .2.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನೈಜೀರಿಯಾ(Nigeria) ಪ್ರಜೆ ಚಿಬ್ಯುಜೆ ಚಿನೊನ್ಸೊ ಹಾಗೂ ಮಹಾರಾಷ್ಟ್ರದ(Maharashtra) ಶ್ರೀಕಾಂತ್ ಬಂಧಿತರಾಗಿದ್ದು, ಆರೋಪಿಗಳಿಂದ(Accused) 1.21 ಕೋಟಿ ಮೌಲ್ಯದ 2.428 ಕೆ.ಜಿ. ಬ್ರೌನ್ ಶುಗರ್(Brown Sugar) ಹಾಗೂ .1.30 ಕೋಟಿ ಮೌಲ್ಯದ ಕೊಕೇನ್(Cocaine) ವಶಪಡಿಸಿಕೊಳ್ಳಲಾಗಿದೆ.
Drugs Case: ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಮೂವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ
ಇತ್ತೀಚೆಗೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಈ ಇಬ್ಬರು ಪೆಡ್ಲರ್‌ಗಳ ಸಹಚರರು ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಅವರು ನೀಡಿದ ಮೇರೆಗೆ ಪೆಡ್ಲರ್‌ಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ:
ಮಹಾರಾಷ್ಟ್ರದ ಅಂಕೋಲಾ ಮೂಲದ ಶ್ರೀಕಾಂತ್ ವೃತ್ತಿಪರ ಪೆಡ್ಲರ್(Drug Peddler) ಆಗಿದ್ದು, ಅಸ್ಸಾಂ ಗಡಿ ಪ್ರದೇಶದಿಂದ ಕಡಿಮೆ ಬೆಲೆಗೆ ಸಗಟು ರೂಪದಲ್ಲಿ ಬ್ರೌನ್ಸ್ ಶುಗರ್ ಖರೀದಿಸುತ್ತಿದ್ದ. ಬಳಿಕ ಬೆಂಗಳೂರು(Bengaluru) ಸೇರಿದಂತೆ ಇತರೆಡೆ ಬೇರೆ ಪೆಡ್ಲರ್‌ಗಳಿಗೆ ಪೂರೈಸುತ್ತಿದ್ದ. ಬೆಂಗಳೂರಿನಲ್ಲಿ ತನ್ನ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ರೂಪಿಸಿದ್ದ. ಇತ್ತೀಚಿಗೆ ಆತನ ದಂಧೆ ಬಗ್ಗೆ ಬಾತ್ಮೀದಾರರಿಂದ ಗೋವಿಂದಪುರ ಠಾಣೆ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಅಂತೆಯೇ ಕಾರ್ಯಾಚರಣೆ ನಡೆಸಿ ಫೆ.7ರಂದು ಗೋವಿಂದಪುರದ ಫಾತಿಮಾ ಲೇಔಟ್‌ನ ಕೆ.ನವಾಜ್ ಷರೀಫ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಶ್ರೀಕಾಂತ್ ಬಗ್ಗೆ ಬಾಯ್ಬಿಟ್ಟಿದ್ದ. ಈ ಮಾಹಿತಿ ಮೇರೆಗೆ ಮಹಾರಾಷ್ಟ್ರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ(Arrest) ಕರೆ ತಂದಿದ್ದಾರೆ. ಆತನಿಂದ 1.21 ಕೋಟಿ ಮೌಲ್ಯದ ಬ್ರೌನ್ ಶುಗರ್ ಸಹ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬ್ರೆಜಿಲ್‌ನಿಂದ ಕೊಕೇನ್:
ಬ್ರೆಜಿಲ್(Brazil) ದೇಶದಿಂದ ಕಳ್ಳ ದಾರಿಯಲ್ಲಿ ನಗರಕ್ಕೆ ಕೊಕೇನ್ ತಂದು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಚಿನ್ಸೊನೊನನ್ನು ಬಂಧಿಸಲಾಗಿದೆ. ಇತ್ತೀಚಿಗೆ ಎಚ್‌ಬಿಆರ್ ಲೇಔಟ್‌ನಲ್ಲಿ ಡ್ರಗ್ಸ್ ಪೂರೈಕೆಗೆ ಬಂದಾಗ ಆತನ ಇಬ್ಬರು ಸಹಚರರು ಸಿಕ್ಕಿಬಿದ್ದಿದ್ದರು. ಅವರು ನೀಡಿದ ಮಾಹಿತಿ ಮೇರೆಗೆ ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾದಿಂದ ಗಾಂಜಾ ತಂದು ಮಾರುತ್ತಿದ್ದ ಪೆಡ್ಲರ್‌ಗಳ ಸೆರೆ
ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಕೊಪ್ಪ ಮುಖ್ಯರಸ್ತೆಯ ಆಸೀಫ್ ಶೇಖ್(30) ಮತ್ತು ಉಲ್ಲಹಳ್ಳಿ ಗೇಟ್‌ನ ಶಿವರಾಜ್(26) ಬಂಧಿತರು. ಆರೋಪಿಗಳಿಂದ(Accused) 4 ಲಕ್ಷ ರು. ಮೌಲ್ಯದ 15 ಕೆ.ಜಿ. ಗಾಂಜಾ(Marijuana) ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
Bengaluru Drugs Racket: ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಸೆರೆ
ಇತ್ತೀಚೆಗೆ ಬಾಣಸವಾಡಿ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತರು ಚಿಕ್ಕ ಪೊಟ್ಟಣಗಳಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಒಡಿಶಾದಲ್ಲಿ ಕೆ.ಜಿ.ಗೆ 10 ಸಾವಿರ ರು. ನೀಡಿ ಗಾಂಜಾ ಖರೀದಿಸಿ ನಗರಕ್ಕೆ ತರುತ್ತಿದ್ದರು. ಬಳಿಕ ನಗರದ ವಿವಿಧೆಡೆ ಗ್ರಾಹಕರನ್ನು ಹುಡುಕಿ ಕೆ.ಜಿ.ಗೆ 25 ಸಾವಿರ ರು. ಪಡೆದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಚರಂಡಿಗಳಲ್ಲಿ ಡ್ರಗ್ಸ್ ಬಚ್ಚಿಡುತ್ತಿದ್ದ ಪೆಡ್ಲರ್ ಸೆರೆ
ಬೆಂಗಳೂರು(Bengaluru): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕವಸ್ತು(Drugs) ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳನ್ನು(Drugs Peddlers) ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 13.30 ಕೆ.ಜಿ.ತೂಕದ ಗಾಂಜಾ ಹಾಗೂ 2,100 ರು. ನಗದು ಜಪ್ತಿ ಮಾಡಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೇದೇವಿನಗರದ ಮೇಲ್ಸೇತುವೆ ಕೆಳಗೆ ಇತ್ತೀಚೆಗೆ ಮೂವರು ಅಪರಿಚಿತರು ಬ್ಯಾಗ್ ನೇತು ಹಾಕಿಕೊಂಡು ಚಿಕ್ಕ ಪೊಟ್ಟಣಗಳಲ್ಲಿ ಗಿರಾಕಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ಒಡಿಶಾ ಮೂಲದ ಶಿಬ್‌ರಾಜ್(24), ಜಾಲದ ರಾಘವೇಂದ್ರ(22) ಹಾಗೂ ನಾಗೇಶ್(23) ಎಂಬುವವರನ್ನು ಬಂಧಿಸಿದ್ದಾರೆ(Arrest). ಆರೋಪಿಗಳಿಂದ 10 ಕೆ.ಜಿ. ತೂಕದ ಗಾಂಜಾ ಹಾಗೂ 1,500 ರು. ನಗದು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ