2020ರಲ್ಲೇ ಪ್ರೇಯಸಿ ನಿಕ್ಕಿ ಯಾದವ್‌ನನ್ನು ಆರೋಪಿ ಸಾಹಿಲ್ ವಿವಾಹವಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಎರಡನೇ ಮದುವೆಗಾಗಿ ಪತ್ನಿಯನ್ನು ಕೊಂದಿದ್ದ ಸಾಹಿಲ್ ಎಂಬುದು ಸಹ ಗೊತ್ತಾಗಿದೆ. ಚಾರ್ಜಿಂಗ್ ಕೇಬಲ್‌ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದು, ಈ ಕೊಲೆಯಲ್ಲಿ ಸಾಹಿಲ್ ತಂದೆ, ಸ್ನೇಹಿತರು, ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.
ನವದೆಹಲಿ (ಫೆಬ್ರವರಿ 19, 2023): ದೆಹಲಿಯಲ್ಲಿ ಸಾಹಿಲ್ ಗೆಹ್ಲೋಟ್ ಎಂಬಾತ ತನ್ನ ಪ್ರೇಯಸಿ ನಿಕ್ಕಿ ಯಾದವ್ (23) ಳನ್ನು ಕೊಲೆ ಮಾಡಿ, ಬಳಿಕ ದೇಹವನ್ನು ಢಾಬಾದ ಫ್ರೀಜರ್‌ನಲ್ಲಿ ಮುಚ್ಚಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಹಿಲ್ ಹಾಗೂ ನಿಕ್ಕಿ 2020ರ ಅಕ್ಟೋಬರ್‌ನಲ್ಲೇ ಮದುವೆಯಾಗಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೇ ಇಬ್ಬರ ಮದುವೆಯ ಫೋಟೊಗಳೂ ಹೊರಬಿದ್ದಿದ್ದು ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಆರ್ಯ ಸಮಾಜ ದೇವಾಲಯದಲ್ಲಿ ನಿಕ್ಕಿ ಹಾಗೂ ಸಾಹಿಲ್ ಮದುವೆಯಾಗಿದ್ದರು ಎಂದು ಗೊತ್ತಾಗಿದೆ. ಮದುವೆ ಪ್ರಮಾಣಪತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಸಾಹಿಲ್ ಗೆಹ್ಲೋಟ್ (Sahil Gehlot) ಕುಟುಂಬಸ್ಥರಿಗೆ ಈ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ಆತನಿಗೆ ಬೇರೆ ಮದುವೆ ಮಾಡಲು ನಿರ್ಧರಿಸಿ ಸಾಹಿಲ್‌ಗೆ ಯುವತಿಯೊಬ್ಬಳೊಂದಿಗೆ ನಿಶ್ಚಿತಾರ್ಥವನ್ನೂ (Engagement) ಮಾಡಿದ್ದರು. ಫೆಬ್ರವರಿ 10 ರಂದು ಸಾಹಿಲ್ ಗೆಹ್ಲೋಟ್ ಮದುವೆ (Wedding) ನಿಶ್ಚಯವಾಗಿತ್ತು.
ಇದನ್ನು ಓದಿ: ಮದುವೆಯ ದಿನವೇ ಗರ್ಲ್‌ಫ್ರೆಂಡ್ ಕೊಲೆ ಮಾಡಿದ ಪಾತಕಿ: ಢಾಬಾದ ಫ್ರೀಜರ್‌ನಲ್ಲಿ ಮೃತದೇಹ..!
ಅದರ ಮುನ್ನಾ ದಿನ ರಾತ್ರಿ ನಿಕ್ಕಿಯನ್ನು (Nikki Yadav) ಭೇಟಿಗೆಂದು ಕರೆದಿದ್ದ ಸಾಹಿಲ್, ಕಾರಿನಲ್ಲಿದ್ದ ಚಾರ್ಜಿಂಗ್ ಕೇಬಲ್‌ನಿಂದ ನಿಕ್ಕಿ ಯಾದವ್ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಆಕೆಯನ್ನು ಕೊಲೆ (Murder) ಮಾಡಿದ್ದಾನೆ. ಬಳಿಕ ಆತನ ಸೋದರ ಸಂಬಂಧಿ ಹಾಗೂ ಸ್ನೇಹಿತ ನಿಕ್ಕಿ ಮೃತದೇಹವನ್ನು ಮರೆಮಾಡಲು ತಮ್ಮ ಕುಟುಂಬದ ಒಡೆತನದ ಢಾಬಾದ (Dhaba) ಫ್ರೀಜರ್‌ನಲ್ಲಿರಿಸಲು (Freezer) ಸಹಾಯ ಮಾಡಿದ್ದಾರೆ.
ನಿಕ್ಕಿ ಕಾಣೆಯಾಗಿದ್ದಾಳೆಂದು ನೆರೆಹೊರೆಯವರು ದೂರಿದ ಬಳಿಕ ಸಾಹಿಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತಪ್ಪೊಪ್ಪಿಕೊಂಡು ಆತ ಸತ್ಯ ಬಾಯ್ಬಿಟ್ಟಿದ್ದಾನೆ.
ಬೇರೊಂದು ವಿವಾಹವಾದರೆ ಕೇಸು ದಾಖಲಿಸುವುದಾಗಿ ಸಾಹಿಲ್‌ಗೆ ನಿಕ್ಕಿ ಬೆದರಿಕೆ ಹಾಕಿದ್ದಳು, ಗೋವಾಕ್ಕೆ ಟಿಕೆಟ್ ಬುಕ್ ಮಾಡಿ ತನ್ನೊಂದಿಗೆ ಬರುವಂತೆ ಸಾಹಿಲ್‌ನನ್ನು ಒತ್ತಾಯಿಸುತ್ತಿದ್ದಳು ಎಂದು ಕೆಲ ವರದಿಗಳು ತಿಳಿಸಿವೆ. ನಿಕ್ಕಿ ಕುಟುಂಬ ಹರ್ಯಾಣದ ಝಜ್ಜರ್‌ನಲ್ಲಿ ನೆಲೆಸಿದೆ. ತನ್ನ ಎರಡನೇ ಮದುವೆಗಾಗಿ ಸಾಹಿಲ್, ಮೊದಲ ಪತ್ನಿ ನಿಕ್ಕಿಯನ್ನು ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ.
ಇದನ್ನೂ ಓದಿ; ದೆಹಲಿಯಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ: ಢಾಬಾದ ಫ್ರೀಜರ್‌ನೊಳಗೆ ಪತ್ತೆಯಾದ ಮಹಿಳೆಯ ಮೃತದೇಹ..!
ಕೊಲೆಯಲ್ಲಿ ಭಾಗಿಯಾದ ಸಾಹಿಲ್ ತಂದೆಯೂ ಅರೆಸ್ಟ್:
ನಿಕ್ಕಿ ಕೊಲೆಯಲ್ಲಿ ಸಾಹಿಲ್ ಹಾಗೂ ಆತನ ಕುಟುಂಬ ಮತ್ತು ಸ್ನೇಹಿತರು ಭಾಗಿಯಾಗಿದ್ದಾರೆಂಬ ಆಘಾತಕಾರಿ ವಿಷಯ ತಿಳಿದ ಬಳಿಕ ದೆಹಲಿಯ ಅಪರಾಧ ವಿಭಾಗದ ಪೊಲೀಸರು ಸಾಹಿಲ್ ತಂದೆ ವೀರೇಂದ್ರ ಸಿಂಗ್ ಹಾಗೂ ಸಹೋದರರಾದ ಅನೀಶ್ ಮತ್ತು ನವೀನ್, ಸ್ನೇಹಿತರಾದ ಲೋಕೇಶ್, ಅಮರ್ ಎಂಬುವವರನ್ನು ಬಂಧಿಸಿದ್ದಾರೆ.
ಕೊಲೆಗೆ ಪೊಲೀಸ್ ಪೇದೆಯಿಂದಲೂ ಸಹಾಯ..!
ಕಳೆದ ವಾರ ದೆಹಲಿಯ ಢಾಬಾದ ಫ್ರಿಡ್ಜ್‌ನಲ್ಲಿ ಶವ ಪತ್ತೆಯಾದ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲಾದ ಐವರ ಪೈಕಿ ದೆಹಲಿ ಪೊಲೀಸ್ ಪೇದೆಯೂ ಸೇರಿದ್ದಾರೆ. ನಿಕ್ಕಿ ಯಾದವ್ ಅವರನ್ನು ಆಕೆಯ ಪತಿ ಸಾಹಿಲ್ ಗೆಹ್ಲೋಟ್ ಚಾರ್ಜಿಂಗ್ ಕೇಬಲ್‌ನಿಂದ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸಾಹಿಲ್‌ನ ತಂದೆ, ಇಬ್ಬರು ಸೋದರಸಂಬಂಧಿಗಳು ಮತ್ತು ಇಬ್ಬರು ಸ್ನೇಹಿತರು ಸಂಚು ರೂಪಿಸಲು ಸಹಾಯ ಮಾಡಿದರು ಮತ್ತು ನಂತರ ಶವವನ್ನು ಕುಟುಂಬದ ಢಾಬಾದಲ್ಲಿರುವ ಫ್ರಿಜ್‌ನಲ್ಲಿ ಮರೆಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಸಾಹಿಲ್‌ನ ಸೋದರ ಸಂಬಂಧಿ ನವೀನ್ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾನೆ.
ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆಯ ಅಸಲಿ ಸತ್ಯ ಬಹಿರಂಗ..! ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದೇನು..?