ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನಿರಂತರ ಅತ್ಯಾಚಾರ ಕೇಸ್‌

By Kannadaprabha News  |  First Published May 11, 2024, 7:51 AM IST

ತಮ್ಮ ನಿವಾಸದಲ್ಲಿ ಮನೆಗೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತ ಮಹಿಳೆ ದೂರು ಆಧರಿಸಿ ಪ್ರಜ್ವಲ್ ವಿರುದ್ಧ ಮೇ. 5ರಂದು ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿ ದಾಖಲಿಸಿತ್ತು. ಈ ಎಫ್‌ಐಆರ್‌ನಲ್ಲಿ ಆರೋಪಿತ ಸಂಸದನ ವಿರುದ್ಧ ಸಾರ್ವಜನಿಕ ಸೇವಕನೊಬ್ಬ ಸಂತ್ರಸ್ತೆಯನ್ನು ವಶದಲ್ಲಿಟ್ಟು ನಿರಂತರ ಅತ್ಯಾಚಾರ ನಡೆಸಿರುವುದೂ ಸೇರಿದಂತೆ ಅತ್ಯಂತ ಕಠಿಣ ರೂಪದ ಪರಿಚ್ಛೇದಗಳಡಿ ಆರೋಪಗಳು ಉಲ್ಲೇಖವಾಗಿವೆ. 
 


ಬೆಂಗಳೂರು(ಮೇ.11):  ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಾರ್ವಜನಿಕ ಸೇವಕನೊಬ್ಬ (ಪಬ್ಲಿಕ್ ಸರ್ವೆಂಟ್) ಸಂತ್ರಸ್ತೆಯನ್ನು ವತದಲ್ಲಿಟ್ಟುಕೊಂಡು ನಿರಂತರ ಅತ್ಯಾಚಾರ ನಡೆಸಿದ ಆರೋಪ ಹೊರಿಸಿ ಗಂಭೀರ ಸ್ವರೂಪದ ಐಪಿಸಿ ಸೆಕ್ಷನ್‌ನಡಿ ಕೇಸ್ ದಾಖಲಾಗಿದೆ.

ತಮ್ಮ ನಿವಾಸದಲ್ಲಿ ಮನೆಗೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತ ಮಹಿಳೆ ದೂರು ಆಧರಿಸಿ ಪ್ರಜ್ವಲ್ ವಿರುದ್ಧ ಮೇ. 5ರಂದು ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿ ದಾಖಲಿಸಿತ್ತು. ಈ ಎಫ್‌ಐಆರ್‌ನಲ್ಲಿ ಆರೋಪಿತ ಸಂಸದನ ವಿರುದ್ಧ ಸಾರ್ವಜನಿಕ ಸೇವಕನೊಬ್ಬ ಸಂತ್ರಸ್ತೆಯನ್ನು ವಶದಲ್ಲಿಟ್ಟು ನಿರಂತರ ಅತ್ಯಾಚಾರ ನಡೆಸಿರುವುದೂ ಸೇರಿದಂತೆ ಅತ್ಯಂತ ಕಠಿಣ ರೂಪದ ಪರಿಚ್ಛೇದಗಳಡಿ ಆರೋಪಗಳು ಉಲ್ಲೇಖವಾಗಿವೆ. ಈ ಹಿಂದೆ ಹಾಸನ ಜಿಲ್ಲೆಯ ಮಾಜಿ ಜಿ.ಪಂ. ಸದಸ್ಯೆ ದೂರು ಆಧರಿಸಿ, ಐಪಿಸಿ 376ರಡಿ ಅತ್ಯಾಚಾರ ಪ್ರಕರಣದಾಖಲಾಗಿತ್ತು. ಈಗ ಮನೆಗೆಲಸ ಮಹಿಳೆ ದೂರು ಆಧರಿಸಿದ ಎರಡನೆ ಅತ್ಯಾಚಾರ ಪ್ರಕರಣ ಇದಾಗಿದೆ.

Latest Videos

undefined

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ: ತನಿಖೆ ಆಗೋವರೆಗೆ ಬಾಯ್ಮುಚ್ಚಿಕೊಂಡಿರಿ, ಸಭಾಪತಿ ಹೊರಟ್ಟಿ

ಹಲವು ವರ್ಷಗಳಿಂದ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ ಮನೆಯಲ್ಲಿ ಸಂತ್ರಸ್ತೆ ಮನೆ ಕೆಲಸ ಮಾಡುತ್ತಿದ್ದರು. ಈ ವೇಳೆ ಆಕೆಯನ್ನು ಲೈಂಗಿಕವಾಗಿ ಸಂಸದರು ಶೋಷಣೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಮತ ದಾನಕ್ಕೂ ಮುನ್ನ ಸಂಸದರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಸಾರ್ವಜನಿಕ ವಲಯದಲ್ಲಿ ಹಂಚಿಕೆ ಯಾಗಿತ್ತು. ಇದಾದ ಬಳಿಕ ಸಂಸದರ ವಿರುದ್ಧ ಜನಾ ಕ್ರೋಶ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತ ಸಂಸದರ ತಂದೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು, ತಮ್ಮ ಬೆಂಬಲಿಗರ ಮೂಲಕ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಆಕೆಯನ್ನು ಪತ್ತೆ ಹಚ್ಚಿದಎಸ್‌ಐಟಿ ಅಧಿಕಾರಿಗಳು, ಮನಃಶಾಸ್ತ್ರಜ್ಞರ ಮೂಲಕ ಆಪ್ತ ಸಮಾಲೋಚನೆ ನಡೆಸಿದ ನಂತರ ಸಂತ್ರಸ್ತೆ ದೂರು ಕೊಡಲು ಒಪ್ಪಿದರು. ಅಂತೆಯೇ ದೂರು ಆಧರಿಸಿ ಸಂಸದರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಎಸ್‌ಐಟಿ ನಿರ್ಧರಿಸಿತು. 

ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌: 2ನೇ ರೇಪ್‌ ಕೇಸಿನಲ್ಲೂ ಜಡ್ಜ್‌ ಮುಂದೆ ಸಂತ್ರಸ್ತೆಯ ಹೇಳಿಕೆ

ಪ್ರಜ್ವಲ್ ವಿರುದ್ಧ ಏನೇನು ಆರೋಪಗಳು?

* ಐಪಿಸಿ 376 (2) ಎನ್‌ ಸಂತ್ರಸ್ತೆ ಮೇಲೆ ನಿರಂತರ ಅತ್ಯಾಚಾರ
* ಐಪಿಸಿ  376 (2) ಕೆ- ಸೇವಕನೊಬ್ಬ ಮಹಿಳೆಯನ್ನು ವಶ ಅಥವಾ ಅಧೀನದಲ್ಲಿಟ್ಟುಕೊಂಡು ಅತ್ಯಾಚಾರ ನಡೆಸಿರುವುದು
* ಐಪಿಸಿ 354 (ಎ) (ಬಿ) (ಸಿ)- ಸಂತ್ರಸ್ತೆಯ ಮೈ ಮುಟ್ಟುವುದು, ಸೀರೆ ಎಳೆಯುವುದು ಹೀಗೆ ಲೈಂಗಿಕ ಕಿರುಕುಳ
* 506- ಜೀವಬೆದರಿಕೆ 

ಎಚ್.ಡಿ.ರೇವಣ್ಣ ಮನೆಯಲ್ಲಿ ಮತ್ತೆ ಮಹಜ‌ರ್

ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಮನೆಯಲ್ಲಿ ಮತ್ತೊಮ್ಮೆ ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ಮಹಜರ್ ನಡೆಸಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ರೇವಣ್ಣ ಹಾಗೂ ಅವರ ಪುತ್ರ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ಮನೆಗೆ ಸಂತ್ರಸ್ತೆಯನ್ನು ಕರೆತಂದು ಸರ್ಕಾರಿ ಅಧಿಕಾರಿಗಳ ಸಮಕ್ಷಮದಲ್ಲಿ ಮಹಜರ್‌ಪ್ರಕ್ರಿಯೆ ನಡೆಸಿದ್ದಾರೆ.

click me!