Murugha Mutt Row: ಆಸ್ತಿ, ಅಧಿಕಾರಕ್ಕಾಗಿ ಷಡ್ಯಂತ್ರ: ಮಠದಲ್ಲಿ ಅನ್ನ ತಿಂದವರಿಂದಲೇ ಕುತಂತ್ರ: ಮುರುಘಾ ಶ್ರೀ ಆಪ್ತ

By Suvarna NewsFirst Published Sep 2, 2022, 11:01 AM IST
Highlights

Murugha Shree Arrest UIpdates: ಮುರುಘಾ ಮಠದಲ್ಲಿ ಅನ್ನ ತಿಂದವರೇ ಕುತಂತ್ರ ಮಾಡಿದ್ದಾರೆ ಎಂದು ಶ್ರೀಗಳ ಆಪ್ತ ಜೀತೆಂದ್ರ  ಆರೋಪಿಸಿದ್ದಾರೆ. ಮುರುಘಾ ಶರಣರ ವಿರುದ್ಧ ಪಿತೂರಿ ನಡೆಸಲಾಗಿದೆ, ಆಸ್ತಿ - ಅಧಿಕಾರಕ್ಕಾಗಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದವರು ಆರೋಪಿಸಿದ್ದಾರೆ.

ಚಿತ್ರದುರ್ಗ (ಸೆ. 02): ಬಾಲಕಿಯರಿಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಚಿತ್ರದುರ್ಗದ ಮುರುಘಾ ಮಠದ (Murugha Mutt) ಶರಣರನ್ನು (Shivamurthy Sharanaru) ಪೊಲೀಸರು ಬಂಧಿಸಿದ್ದಾರೆ. ಮುರುಘಾ ಶರಣಗರಿಗೆ ಜೈಲಿನಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಶರಣರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ಮಾತನಾಡಿರುವ  ಶ್ರೀಗಳ ಆಪ್ತ ಜೀತೆಂದ್ರ ಮುರುಘಾ ಮಠದಲ್ಲಿ ಅನ್ನ ತಿಂದವರೇ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಗುರುವಾರ ಶ್ರೀಗಳ ಬಂಧನದ ಬಳಿಕ ಮಾತನಾಡಿದ ಅವರು " ಕೇವಲ ಆಸ್ತಿ, ಅಧಿಕಾರಕ್ಕಾಗಿ ಷಡ್ಯಂತ್ರ ನಡೆಸಲಾಗಿದೆ.  ಮುರುಘಾ ಮಠದಲ್ಲಿ ಅನ್ನ ತಿಂದವರೇ ಕುತಂತ್ರ ಮಾಡಿದ್ದಾರೆ. ಪ್ರತಿ ಜನಾಂಗವನ್ನ ಮೂಲಕ್ಕೆ ಕರೆದೊಯ್ದವರು ಮುರುಘಾ ಶ್ರೀಗಳು. ಜಾತಿ ಭೇಧ ಮರೆತು ಎಲ್ಲಾ ಜನಾಂಗದ ಮಕ್ಕಳು ಬದುಕುತ್ತಿದ್ದಾರೆ. 65 ನೇ ವಯಸ್ಸಿನಲ್ಲಿ ಈ ಆರೋಪ ಕೇಳಬೇಕಿತ್ತೇ?" ಎಂದು ಹೇಳಿದ್ದಾರೆ. 

"ರಾಜಿ ಆಗಿದ್ರೆ ಈ ರೀತಿ ಆರೋಪ ಕೇಳಿಬರುತ್ತಿರಲಿಲ್ಲ, ಷಡ್ಯಂತ್ರ ಮಾಡಿದವರು ಹಣವಂತರು. ಷಡ್ಯಂತ್ರ ಮಾಡಿದವರ ವಿರುದ್ಧ ಹೋರಾಟ ಮಾಡ್ತೇನೆ. ಗೌರ್ನಿಂಗ್ ಕೌನ್ಸಿಲ್, ಆಡಳಿತ ವ್ಯವಸ್ಥೆ ಕ್ರಮ ತೆಗೆದುಕೊಳ್ತಾರೆ.  ಮುರುಘಾ ಮಠದ ಆಸ್ತಿಯನ್ನ ಷಡ್ಯಂತ್ರ ಮಾಡಿದವರಿಗೆ ನೀಡಲು ಶ್ರೀಗಳು ಸಿದ್ದರಿರಲಿಲ್ಲ" ಎಂದು ಜೀತೆಂದ್ರ ತಿಳಿಸಿದ್ದಾರೆ. 

ಇದನ್ನೂ ಓದಿ: ಜೈಲಿನಲ್ಲಿ ಎದೆ ನೋವಿನಿಂದ ಕುಸಿದು ಬಿದ್ದ ಶ್ರೀ: ಆಸ್ಪತ್ರೆಗೆ ಶಿಫ್ಟ್

"ಶ್ರೀಗಳ ಜೊತೆ 10-12 ವರ್ಷಗಳಿಂದ ಜೊತೆಗೆ ಇದ್ದೇನೆ. ಶ್ರೀಗಳು ಜಾತಿ ವ್ಯವಸ್ಥೆ, ಮೂಢನಂಬಿಕೆ ವಿರುದ್ಧ ಹೋರಾಟ ನಡೆಸಿದರು.  ಈ ಷಡ್ಯಂತ್ರ ಮಾಡಿದವರು ರೋಡಲ್ಲಿ ಬಿದ್ದು ಸಾಯ್ತಾರೆ.  ಶ್ರೀಗಳ ವಿರುದ್ಧ ಬಂದಿರುವ ಆರೋಪ ಸುಳ್ಳು.  ಪೂಜೆ ಪುನಸ್ಕಾರ, ಕೈಂಕರ್ಯ ಮಾಡಲು ಹೆಬ್ಬಾಳು ಶ್ರೀ ಮಹಂತರುದ್ರ ಸ್ವಾಮಿಗೆ ಜವಾಬ್ದಾರಿ ನೀಡಲಾಗಿದೆ" ಎಂದು ಜೈಲಿನ ಬಳಿ ಶ್ರೀಗಳ ಆಪ್ತ ಜೀತೆಂದ್ರ ಹೇಳಿದ್ದಾರೆ.

ಪೂಜೆ ಪುನಸ್ಕಾರಕ್ಕೆ ಹೆಬ್ಬಾಳುಶ್ರೀ:  ಇನ್ನು ಮುರುಘಾ ಶ್ರೀ ಬಂಧನ ಬೆನ್ನಲ್ಲೇ  ಮುರುಘಾಮಠದ ಪೂಜೆ ಪುನಸ್ಕಾರ ನೋಡಿಕೊಳ್ಳಲು ಹೆಬ್ಬಾಳುಶ್ರೀಗೆ ಜವಬ್ದಾರಿ ನೀಡಲಾಗಿದೆ ಎಂದು ಮುರುಘಾಮಠದ ಮೂಲಗಳು ತಿಳಿಸಿವೆ.  ಮುರುಘಾಮಠದ ಶಾಖಾಮಠ ಹೆಬ್ಬಾಳು ಮಠದ ಮಹಾಂತರುದ್ರ ಶ್ರೀಗೆ ಜವಬ್ದಾರಿ ನೀಡಲಾಗಿದ್ದು  ಬಂಧನಕ್ಕೂ ಮುನ್ನ ಈ ಬಗ್ಗೆ ಮುರುಘಾಶ್ರೀ ಸೂಚಿಸಿದ್ದಾರೆ ಎನ್ನಲಾಗಿದೆ.  

ತಡರಾತ್ರಿ ಮುರುಘಾ ಶ್ರೀ ಬಂಧನ:  ಗುರುವಾರ (ಸೆ. 01) ರಾತ್ರಿ 9.45ರ ವೇಳೆಗೆ ಡಿವೈಎಸ್ಪಿ ಅನಿಲ್‌ಕುಮಾರ್‌ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡ ಮುರುಘಾಮಠಕ್ಕೆ ಆಗಮಿಸಿ, ಶರಣರ ಜೊತೆ ಕೆಲ ಹೊತ್ತು ಮಾತನಾಡಿ ನಂತರ ಬಂಧನದ ವಿಷಯ ತಿಳಿಸಿದ್ದಾರೆ. ಬಂಧನದ ಅನಿವಾರ್ಯತೆ ಮನವರಿಕೆ ಮಾಡಿಕೊಟ್ಟು ಸಹಕರಿಸುವಂತೆ ಕೋರಿದ್ದಾರೆ. 

ಇದನ್ನೂ ಓದಿ:ಮುರುಘಾ ಶ್ರೀ ವಿಚಾರಣಾಧೀನ ಖೈದಿ ನಂಬರ್ 2261

ನಂತರ ಅವರನ್ನು ಬಂಧಿಸಿ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಂಧನಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಡಿವೈಎಸ್ಪಿ ಕಚೇರಿ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾರಿಕೇಡ್‌ಗಳನ್ನು ತಂದಿರಿಸಲಾಗಿತ್ತು. ಜೊತೆಗೆ ಮುರುಘಾಮಠಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

click me!