Bengaluru Crime News: ಯುವತಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

By Suvarna News  |  First Published Sep 2, 2022, 10:24 AM IST

Bengaluru Crime News: ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಯುವತಿ ಮೇಲೆ ಸ್ನೇಹಿತರೇ ಗ್ಯಾಂಗ್ ರೇಪ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ


ಬೆಂಗಳೂರು (ಸೆ. 02): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಯುವತಿ ಮೇಲೆ ಸ್ನೇಹಿತರೇ ಗ್ಯಾಂಗ್ ರೇಪ್ (Gang- Rape) ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ದೀಪು, ಅಖಿಲೇಶ್ ಬಂಧಿತ ಆರೋಪಿಗಳು. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಇಬ್ಬರು ಸ್ನೇಹಿತರೇ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.  ಯುವತಿಗೆ ಮದ್ಯ ಕುಡಿಸಿ ಕರೆದೊಯ್ದು ಎಚ್‌ಎಎಲ್ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾರೆ. 

ಯುವಕರು‌ ಈಜೀಪುರ ಮುಖ್ಯ ರಸ್ತೆಯಿಂದ ಯುವತಿಯನ್ನ ಕರೆದೊಯ್ದಿದ್ದಾರೆ.  ಘಟನೆ ಬಳಿಕ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.  ಪ್ರಕರಣ ದಾಖಲಾದ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನ ವಿವೇಕ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡ್ರೈವಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.  ಸದ್ಯ ಆರೋಪಿಗಳ ವಿಚಾರಣೆ ನಡಯುತ್ತಿದ್ದು ತನಿಖೆ ಮುಂದುವರೆದಿದೆ. 

Tap to resize

Latest Videos

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಯುವತಿ ಅನುಮಾನಾಸ್ಪದ ಸಾವು!

ಹುಬ್ಬಳ್ಳಿ: ಅಪ್ರಾಪ್ತೆ ಅತ್ಯಾಚಾರ; ಆರೋಪಿ ಬಂಧನ: ಪ್ರೀತಿಸುವುದಾಗಿ ಪುಸಲಾಯಿಸಿ ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಐದಾರು ಬಾರಿ ಅತ್ಯಾಚಾರ ಎಸಗಿರುವ ಸಂಬಂಧ ಇಲ್ಲಿನ ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧಿಸಲಾಗಿದೆ.

ಕಾರವಾರ ಮೂಲದ ಶ್ರೀನಿಧಿ ದತ್ತಾನಂದ ಕೊಲ್ವೇಕರ ಆರೋಪಿ. ಈತ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ವಿದ್ಯಾರ್ಥಿನಿ ಆಗಿರುವ ಬಾಲಕಿಯ ಫೋಟೋ ಪಡೆದು ಪ್ರೀತಿಸುವುದಾಗಿ ನಾಟಕ ಮಾಡಿದ್ದಾನೆ. ಆರಂಭದಲ್ಲಿ ಸ್ನೇಹ ಪೂರ್ವಕವಾಗಿ ತಬ್ಬಿಕೊಂಡಿದ್ದ ಫೋಟೊ ತೋರಿಸಿ ಬೆದರಿಸಿ ಅಕ್ಷಯ ಪಾರ್ಕ್ ಬಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. 

ಅಲ್ಲದೆ, ಯಾರಿಗಾದರೂ ವಿಷಯ ತಿಳಿಸಿದರೆ ಫೋಟೋ ಬಹಿರಂಗ ಪಡಿಸುವುದಾಗಿ ಹೆದರಿಸಿ ಕುಟುಂಬಸ್ಥರಿಗೆ ಅವಾಚ್ಯವಾಗಿ ಬೈದಿದ್ದಾನೆ ಎಂದು ದೂರಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದೇವೆ ಎಂದು ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ತಿಳಿಸಿದರು.

click me!