Murugha Shri Arrest: ಮುರುಘಾ ಶ್ರೀಗಳಿಗೆ ಜೈಲಾಧಿಕಾರಿಗಳು 'ವಿಚಾರಣಾಧೀನ ಖೈದಿ ನಂಬರ್ 2261' ನೀಡಿದ್ದಾರೆ.
ಚಿತ್ರದುರ್ಗ (ಸೆ. 02): ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು (Shivamurthy Sharanaru) ಬಾಲಕಿಯರಿಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪೋಕ್ಸೋ ಕಾಯ್ದೆಯಡಿ ಬಂಧಿಸಿಲಾಗಿದೆ. ಮುರುಘಾ ಶ್ರೀಗಳಿಗೆ ಜೈಲಾಧಿಕಾರಿಗಳು ವಿಚಾರಣಾಧೀನ ಖೈದಿ (Under Trial Prisoners) ನಂಬರ್ 2261 ನೀಡಿದ್ದಾರೆ. ಇನ್ನು ನಿರೀಕ್ಷಣಾ ಜಾಮೀನು ಅರ್ಜಿ ಅಸ್ಥಿತ್ವ ಕಳೆದುಕೊಂಡ ಹಿನ್ನೆಲೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಶ್ರೀಗಳ ಪರ ವಕೀಲ ಉಮೇಶ್ ಹೇಳಿದ್ದಾರೆ.
"ನಿನ್ನೆ ಪೊಲೀಸರು ಅರೆಸ್ಟ್ ಮಾಡಿಲ್ಲ, ಶ್ರೀಗಳೇ ಪೊಲೀಸರ ಮುಂದೆ ಹಾಜರಾಗುವ ನಿರ್ಧಾರ ಮಾಡಿದ್ದರು. ಶ್ರೀಗಳು ಕಾನೂನು ಗೌರವಿಸುವ ವ್ಯಕ್ತಿ ಹೀಗಾಗಿ ಪೊಲೀಸರ ಮುಂದೆ ಹಾಜರಾಗುವ ಬಗ್ಗೆ ನಿರ್ಧಾರ ಮಾಡಿದ್ದರು. ಪೊಲೀಸರು ಕೇವಲ ಅರೆಸ್ಟ್ ಪ್ರೋಸಿಜರ್ ಮಾತ್ರ ಮಾಡಿದ್ದಾರೆ. ಪೊಲೀಸರು ಯಾವ ಕಾರಣ ನೀಡಿ ಕಸ್ಟಡಿಗೆ ಕೇಳ್ತಾರೆ ಅನ್ನುವ ಅಂಶದ ಮೇಲೆ ನಾವು ಆಕ್ಷೇಪಣೆ ಸಲ್ಲಿಸುತ್ತೇವೆ. ರಶ್ಮಿ ಅವರ ಹೇಳಿಕೆಗೂ ಶ್ರೀಗಳ ಬಂಧನಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ವಕೀಲ ಉಮೇಶ್ ಹೇಳಿದ್ದಾರೆ.
undefined
"ಇನ್ನು ಜೈಲಿನಲ್ಲಿ ಶ್ರೀಗಳ ಭೇಟಿಗೆ ಜೈಲಿನ ಅಧಿಕಾರಿಗಳ ಅವಕಾಶ ಮಾಡಿಕೊಟ್ಟಿಲ್ಲ. ನಾವು ಇಂದು ಹೊಸದಾಗಿ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತೆವೆ. ದಾಖಲೆಗಳ ಆಧರಿಸಿ ಜಾಮೀನು ಅರ್ಜಿ ಸಲ್ಲಿಸುತ್ತೇವೆ. ಸಾಕ್ಷಿ ನಾಶಬಾರದು, ಊರು ಬಿಟ್ಟುಹೋಗಬಾರದು. ಅಲ್ಲದೇ ಕೇಸಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಮೇಲೆ ಜಾಮೀನು ಸಲ್ಲಿಸುತ್ತೇವೆ. ಭಕ್ತರು ಹಾಗೂ ಆಪ್ತರು ಶಾಂತಿಯುತವಾಗಿ ಇರಿ ಎಂದು ಮನವಿ ಮಾಡುತ್ತೇವೆ" ಎಂದು ಜೈಲಿನ ಬಳಿ ಶ್ರೀಗಳ ಪರ ವಕೀಲ ಉಮೇಶ್ ಹೇಳಿದ್ದಾರೆ
Murugha Mutt: ಜೈಲಿನಲ್ಲಿ ಎದೆ ನೋವಿನಿಂದ ಕುಸಿದು ಬಿದ್ದ ಶ್ರೀಗಳು: ಆಸ್ಪತ್ರೆಗೆ ಶಿಫ್ಟ್
ಏನಿದು ಪ್ರಕರಣ?: ಮುರುಘಾಮಠದ ಆವರಣದಲ್ಲಿದ್ದ ಅಕ್ಕಮಹಾದೇವಿ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ಬಾಲಕಿಯರು ತಮ್ಮ ಮೇಲೆ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಒಡನಾಡಿ ಸಂಸ್ಥೆಯ ನೆರವಿನಿಂದ ಮೈಸೂರಿನ ನಜರ್‌ಬಾದ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಶ್ರೀಗಳು, ಅಕ್ಕಮಹಾದೇವಿ ಹಾಸ್ಟೆಲ್‌ನ ವಾರ್ಡನ್, ಕಿರಿಯ ಶ್ರೀಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೃತ್ಯ ನಡೆದ ಸ್ಥಳ, ಆರೋಪಿಗಳು ಮತ್ತು ಬಾಲಕಿಯರು ಚಿತ್ರದುರ್ಗ ಜಿಲ್ಲೆಗೆ ಸೇರಿದವರಾಗಿದ್ದರಿಂದ ಈ ಪ್ರಕರಣವನ್ನು ಚಿತ್ರದುರ್ಗ ಜಿಲ್ಲೆಗೆ ವರ್ಗಾಯಿಸಲಾಗಿತ್ತು.