
ಚಿತ್ರದುರ್ಗ(ಜ.16): ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಕೆಲವೊಂದು ಪ್ರೀತಿಗೆ ಹೃದಯ, ಮನಸ್ಸೂ ಇರುವುದಿಲ್ಲ, ಹೀಗಾದಾಗಲೇ ಪ್ರೀತಿಯಲ್ಲಿಮೋಸ, ವಂಚನೆ, ಒಡಕು ಮೂಡುವುದು. ಇದೀಗ ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದಲ್ಲಿ ಇದೇ ರೀತಿ ಪ್ರೀತಿಯಲ್ಲಿ ವಂಚನೆ ನಡೆದಿದೆ. ಇದೇ ಊರಿನ ಉಮೇಶ, ಈ ಪ್ರೀತಿ ಕಹಾನಿಯ ವಿಲನ್. ಚೌಳಕೆರೆ ಗ್ರಾಮದ ಕಂಟ್ರಾಕ್ಟರ್ ಬಸಣ್ಣ ಎಂಬುವವರ ಪುತ್ರ ಉಮೇಶ್, ಚಿತ್ರದುರ್ಗದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಡಿಪ್ಲೋಮೊ ಮಾಡ್ತಿದ್ದ ನೇತ್ರ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದು, ಮಾತಿನ ಮೋಡಿಯ ಮೂಲಕ ಆಕೆಯ ಮನಸೆಳೆದು ಪ್ರೀತಿ ಎಂಬ ಹಳ್ಳಕ್ಕೆ ಬೀಳಿಸಿದ್ದನು.
ಇದನ್ನೂ ಓದಿ: ಇಂಜೆಕ್ಷನ್ ಕೊಟ್ಟು ಕೊಂದ ಗಂಡ : ಕಣ್ಮುಂದೆಯೇ ನರಳಿ ಪ್ರಾಣ ಬಿಟ್ಲು ಹೆಂಡ್ತಿ
ಅಲ್ಲದೇ ಇಬ್ಬರು ಸಹ ಒಂದೇ ಸಮುದಾಯದವರಾಗಿದ್ರಿಂದ, ಇಬ್ಬರ ನಡುವೆ ಗಟ್ಟಿಯಾದ ಲವ್ ನಿಂದಾಗಿ ಯಾವಾಗಲೂ ಯುವತಿಯ ಮನೆಯಲ್ಲಿ ಡ್ರಾಮ ಮಾಡುವ ಮೂಲಕ, ಎರಡು ಕುಟುಂಬದ ನಡುವೆ ಮಾತುಕಥೆ ನಡೆಸಿ ಮದುವೆಗೂ ಒಪ್ಪಿಸಿದ್ದನು. ಹೀಗಾಗಿ ಈ ಆಸಾಮಿಯನ್ನು ತುಂಬಾ ನಂಬಿದ್ದ, ನೇತ್ರಗೆ ಉಮೇಶ ಪಂಗನಾಮ ಹಾಕಿ ಅವರಿಂದ 15 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾನೆ. ತನ್ನ ಉನ್ನತ ವ್ಯಾಸಂಗಕ್ಕಾಗಿ ಸಂಗ್ರಹಿಸಿಟ್ಟಿದ್ದ ಹಣವನ್ನು ವಂಚಕನಿಗೆ ಕೊಟ್ಟು ನೇತ್ರಗೆ ಇದೀಗ ದಿಕ್ಕು ತೋಚದ ಪರಿಸ್ಥಿತಿ ಎದುರಾಗಿದೆ. ನೇತ್ರಗೆ ವಂಚಿಸಿರೋ ಆಸಾಮಿ ಇನ್ನು ಅನೇಕ ಯುವತಿಯರು ಹಾಗೂ ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆಂಬ ಆರೋಪ ಸಹ ಕೇಳಿಬಂದಿದೆ.
ಇದನ್ನೂ ಓದಿ: ಮಹಿಳೆಯರಿಗೆ ನಿದ್ರೆ ಮಾತ್ರೆ ಕೊಡುವ ಮಾಜಿ ಡಿಸಿಎಂ ಆಪ್ತ ಸ್ವಾಮೀಜಿ 'ಲೀಲೆ' ಸ್ಫೋಟ.
ಇದರಿಂದಾಗಿ ಈತನ ಅಸಲಿ ಬಂಡವಾಳ ಅರಿತ ನೇತ್ರ ತಾನು ಕೊಟ್ಟ ಲಕ್ಷಾಂತರ ರೂಪಾಯಿ ಹಣವನ್ನು ವಾಪಾಸ್ ಹಿಂತಿರುಗಿಸುವಂತೆ ಕೇಳಿದ್ರೆ, ಆಸಾಮಿ ಸೊಪ್ಪು ಹಾಕದೇ, ನಾನು ನಿನ್ನ ಮದುವೆಯಾಗ್ತಿನಿ. ಹಾಗೆಯೇ ಇನ್ನುಳಿದ ಲವರ್ಸ್‍ಗಳ ಜೊತೆಯೂ ಚೆನ್ನಾಗಿರುತ್ತೇನೆಂದು ದೌಜನ್ಯವೆಸಗಿದ್ದಾನೆ. ಹೀಗಾಗಿ ಮನನೊಂದ ನೇತ್ರ ಚಿತ್ರದುರ್ಗದ ಮಹಿಳಾ ಠಾಣೆ ಪೋಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ರೆಡ್ ಲೈಟ್ ಏರಿಯಾಗೆ ಬರಲ್ಲ ಎಂದ ಕ್ಯಾಬ್ ಚಾಲಕನನ್ನೇ ರೇಪ್ ಮಾಡಿದ ಬರಗೆಟ್ಟ ಪೊಲೀಸಪ್ಪ
ತಮ್ಮ ಮಗಳಿಗಾದಂತಹ ಅನ್ಯಾಯ ಬೇರೊಬ್ಬರಿಗೆ ಆಗಬಾರದೆಂದು ತಾಯಿ ಎಸ್ಪಿ ಮೊರೆ ಹೋಗಿದ್ದು, ಚಿತ್ರದುರ್ಗ ಎಸ್ಪಿ ಡಾ,ಅರುಣ್ ಅವರಿಗೆ ದೂರು ನೀಡಿದ್ದಾರೆ. ಆತನಿಂದ ಹಣ ವಾಪಾಸ್ ಕೊಡಿಸಿ, ಆದ ವಂಚನೆಗೆ ನ್ಯಾಯಕೊಡಸಿಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರೋ ಪೊಲೀಸರು ನೊಂದವರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಮಗಳ ಬದುಕು ಚೆನ್ನಾಗಿರಲಿ ಅಂತ ಸಾಲಸೂಲ ಮಾಡಿ ಈತನಿಗೆ ಕೊಟ್ಟ ಹಣ ನಿಷ್ಪ್ರಯೋಜಕವಾಗಿದೆ. ಹೀಗಾಗಿ ಮದುವೆಗೂ ಮುನ್ನವೇ ಎಚ್ಚೆತ್ತ ಯುವತಿ ಅವನ ಸಹವಾಸ ಬೇಡವೆಂದು ತೀರ್ಮಾನಿಸಿದ್ದೂ, ಅವನಿಗೆ ನೀಡಿದ ಹಣ ವಾಪಾಸ್ ಬರಬೇಕು ಹಾಗು ತನಗಾದಂತೆ ವಂಚನೆ ಇನ್ಯಾವ ಮಹಿಳೆಗೂ ಆಗದಿರುವಂತೆ ಈ ವಂಚಕ ಉಮೇಶನಿಗೆ ಕಾನೂನು ತಕ್ಕಶಿಕ್ಷೆ ನೀಡಲಿ ಅಂತ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ