ಮರುಘಾ ಶ್ರೀಗಳಿಗೆ ಮತ್ತೊಂದು ಶಾಕ್, ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್!

By Ramesh BFirst Published Sep 2, 2022, 4:26 PM IST
Highlights

ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಮುರುಘಾ ಮಠದ ಶ್ರೀಗಳಿಗೆ ಮತ್ತೊಂದು ಶಾಕ್. ಪೊಲೀಸ್ ಕಸ್ಟಡಿ ನೀಡಿ ಕೋರ್ಟ್ ಆದೇಶ ನೀಡಿದೆ.
 

ಚಿತ್ರದುರ್ಗ, (ಸೆಪ್ಟೆಂಬರ್.02): ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ  ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರನ್ನು ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.

ಸೆಪ್ಟೆಂಬರ್ 5ರ ವರೆಗೆ ಅಂದ್ರೆ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಇಂದು(ಸೆಪ್ಟೆಂಬರ್ 02) ಆದೇಶ ಹೊರಡಿಸಿದೆ. ಮುರುಘಾ ಶ್ರೀಯವರನ್ನು ಸೆಪ್ಟೆಂಬರ್ 5ರಂದು ಮತ್ತೆ ಕೋರ್ಟ್ ಮುಂದೆ ಹಾಜರು ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.  ಮತ್ತೊಂದೆಡೆ ಕೋರ್ಟ್ ಪೊಲೀಸ್ ಕಸ್ಟಡಿಗೆ ಕೊಡುತ್ತಿದ್ದಂತೆಯೇ ಮುರುಘಾ ಶ್ರೀಗಳು ಕಟಕಟೆಯಲ್ಲಿ ಕಣ್ಣೀರು ಹಾಕಿದರು. 

Murugha Mutt Shivacharya Case: ಮುರುಘಾ ಶ್ರೀಗಳ ಜಾಮೀನು ಅರ್ಜಿ ವಜಾ

ಗುರುವಾರ(ಸೆ.01) ರಾತ್ರಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದರು. ಆದ್ರೆ, ಇವತ್ತು(ಸೆ.02) ಬೆಳಗಾಗುವಂತೆಯೇ ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಎದೆ ನೋವು ಎಂದು ಸ್ವಾಮೀಜಿ ಜೈಲಿನಲ್ಲೇ ಕುಸಿದುಬಿದ್ದಿದ್ದಾರೆ. ಕೂಡಲೇ ಪೊಲೀಸರು ಅವರನ್ನು ಜೈಲಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹಲವು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಅಲ್ಲದೇ ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಯ ಇಬ್ಬರು ಹೈದ್ರೋಗ ತಜ್ಞರನ್ನು ಕರೆಯಿಸಿ ಪರೀಕ್ಷೆ ಮಾಡಿಸಿದ್ದಾರೆ.

ಪೊಲೀಸರ ಮೇಲೆ ಕೋರ್ಟ್ ಗರಂ
ಪೊಲೀಸರು ಕೋರ್ಟ್ ಮುಂದೆ ಹೋಗಿ ಆರೋಪಿಯನ್ನು ಐದು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಪೊಲೀಸರು ಮನವಿ ಮಾಡುತ್ತಿದ್ದಂತೆ  ಆರೋಪಿ ಎಲ್ಲಿ ಎಂದು ಕೋರ್ಟ್‌ ಪ್ರಶ್ನಿಸಿದೆ. ಈ ವೇಳೆ ಪೊಲೀಸರು ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಜಡ್ಜ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೋರ್ಟ್‌ಗೆ ಯಾವುದೇ ಮಾಹಿತಿ ನೀಡದೆ ಹೇಗೆ ಆಸ್ಪತ್ರೆಗೆ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದ್ದು,  ಖುದ್ದು ಆರೋಪಿಯನ್ನು ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು.

ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮೂಲಕ ಪೊಲೀಸ್ ವಾಹನದಲ್ಲೇ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. ಇದೀಗ ಕೋರ್ಟ್ ಶ್ರೀಗಳು ಆರೋಗ್ಯ ವರದಿ ಪರಿಶೀಲಿಸಿ ಬಳಿಕ ಪೊಲೀಸ್ ಕಸ್ಟಡಿಗೆ ನೀಡಿದೆ. 

ಮುರುಘಾ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ: ವಕೀಲ ಉಮೇಶ್ ಮಾಹಿತಿ

ಬೆಳಗ್ಗೆಯಿಂದ ನಡೆದಿದ್ದು ನಾಟಕೀಯವಾ? 
ಹೌದು....ಗುರುವಾರ(ಸೆ.01) ರಾತ್ರಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದರು. ಆದ್ರೆ, ಇವತ್ತು(ಸೆ.02) ಬೆಳಗಾಗುವಂತೆಯೇ ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಎದೆ ನೋವು ಎಂದು ಸ್ವಾಮೀಜಿ ಜೈಲಿನಲ್ಲೇ ಕುಸಿದುಬಿದ್ದಿದ್ದಾರೆ. ಕೂಡಲೇ ಪೊಲೀಸರು ಅವರನ್ನು ಜೈಲಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹಲವು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಅಲ್ಲದೇ ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಯ ಇಬ್ಬರು ಹೈದ್ರೋಗ ತಜ್ಞರನ್ನು ಕರೆಯಿಸಿ ಪರೀಕ್ಷೆ ಮಾಡಿಸಿದ್ದಾರೆ.

ಅಲ್ಲದೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಹೈದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆಗಳು ಸಹ ನಡೆದಿದ್ದವು. ಫುಲ್ ಲೋಡೆಡ್ ಆಂಬ್ಯುಲೆನ್ಸ್‌ ಮೂಲಕ ರವಾನಿಸಬೇಕೋ ಅಥವಾ ಹೆಲಿಕಾಪ್ಟರ್‌ ಮೂಲಕ ಏರ್ ಲಿಫ್ಟ್‌ ಮಾಡಬೇಕೋ ಎನ್ನುವ ಚರ್ಚೆಗಳು ನಡೆದಿದ್ದವು.

ಆದ್ರೆ, ಶ್ರೀಗಳು ಆರಾಮಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಡೆದುಕೊಂಡೇ ಮೊದಲ ಮಹಡಿಗೆ ಸ್ವಾಮೀಜಿ ಹೊಗಿದ್ದಾರೆ. ಇದರಿಂದ ಬೆಳಗ್ಗೆ ಎದೆನೋವು ಅಂತ ಐಸಿಯುಗೆ ದಾಖಲಾಗಿದ್ದು, ಇದೀಗ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಐಸಿಯುನಿಂದ ನೇರವಾಗಿ ಮೆಟ್ಟಿಲು ಹತ್ತಿಕೊಂಡು ಮೊದಲ ಮಹಡಿಗೆ ಹೇಗೆ ಹೋಗಲು ಸಾಧ್ಯವಾಯ್ತು ಅಂತೆಲ್ಲಾ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೇ ಪೊಲೀಸ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮುರುಘಾ ಶ್ರೀಗಳು ಆರೋಗ್ಯದ ನೆಪ ಹೇಳಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

click me!