ಕದಿಯಲು ಬಂದು ಗಡದ್ ನಿದ್ದೆಗೆ ಜಾರಿದ ಕಳ್ಳ, 2ನೇ ಎಡವಟ್ಟು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ!

By Suvarna News  |  First Published Nov 22, 2023, 4:17 PM IST

ರಾತ್ರಿ ವೇಳೆ ಕಳ್ಳತನಕ್ಕೆ ಮನೆಯೊಳಕ್ಕೆ ನುಗ್ಗಿದ ಕಳ್ಳನಿಗೆ ಆಪರೇಶನ್ ಆರಂಭಿಸಲು ಸಾಧ್ಯವಾಗಿಲ್ಲ. ಕಾರಣ ಮನೆಯವರು ಮಲಗೇ ಇರಲಿಲ್ಲ. ಆದರೆ ಮನೆಯವರು ಮಲಗುವಷ್ಟರಲ್ಲೇ ಕಳ್ಳನೂ ನಿದ್ದಿಗೆ ಜಾರಿದ್ದಾನೆ. ಆದರೆ ಈತ ಮಾಡಿದ ಎರಡನೇ ಎಡವಟ್ಟಿನಿಂದ ಅರೆಸ್ಟ್ ಆಗಿದ್ದಾನೆ.


ಯುನಾನ್(ನ.22) ಪ್ರತಿಯೊಂದು ದಿನ ಒಂದೊಂದು ಮನೆಯಲ್ಲಿ ಕಳ್ಳತನ ಮಾಡಲು ಈತ ಟಾರ್ಗೆಟ್ ಮಾಡುತ್ತಿದ್ದ.  ಪ್ಲಾನ್ ಪ್ರಕಾರ ಮಧ್ಯ ರಾತ್ರಿ ಕಳೆದ ಬಳಿಕ ಚಾಣಾಕ್ಷತನದಿಂದ ಮನೆಯೊಳಗ್ಗೆ ನುಗ್ಗುತ್ತಿದ್ದ. ಬಳಿಕ ಅಲ್ಲಿನ ಒಡವೆ, ಹಣ ಸೇರಿದಂತೆ ಬೆಲಬಾಳುವ ವಸ್ತು ದೋಚುತ್ತಿದ್ದ. ಕಳೆದ ಐದಾರು ವರ್ಷದಿಂದ ಇದೇ ಕೆಲಸ. ಹೀಗೆ ಬೆಳಗ್ಗೆ ಪ್ಲಾನ್ ಮಾಡಿ ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿದ್ದಾನೆ. ಕಳ್ಳತನ ಮಾಡಲು ಎಲ್ಲಾ ತಯಾರಿಯೊಂದಿಗೆ ಯಾರಿಗೂ ತಿಳಿಯದಂತೆ ಮನೆಯೊಳಗೆ ಪ್ರವೇಶಿಸಿದ್ದಾನೆ. ಆದರೆ ಅಷ್ಟರಲ್ಲೇ ಮನೆಯವರು ಮಲಿಗಿರಲಿಲ್ಲ. ಹೀಗಾಗಿ ಪಕ್ಕದ ಕೋಣೆಯಲ್ಲಿ ಮನೆಯ ಸದಸ್ಯರ ಮಲಗುವವರೆಗೆ ಕಾದು ಕುಳಿತು ಬಳಿಕ ಕಳ್ಳತನದ ಪ್ಲಾನ್ ಮಾಡಿದ್ದಾನೆ. ಮನೆಯವರು ಮಲಗಲು ತಡವಾಗಿದೆ. ಇತ್ತ ಸಿಗರೇಟು ಸೇದಿದ ಕಳ್ಳ ಅಲ್ಲೇ ನಿದ್ದೆಗೆ ಜಾರಿದ್ದಾನೆ. ಇಷ್ಟೇ ಆದರೆ ಈತ ಜೈಲು ಸೇರುತ್ತಿರಲಿಲ್ಲ. ನಿದ್ದೆಗೆ ಜಾರಿದ ಕಳ್ಳನ ಗೊರಕೆ ಶಬ್ದಕ್ಕೆ ಮನೆಯ ಒಡತಿ ಎಚ್ಚರಗೊಂಡು ಪೊಲೀಸರ ಕರೆಸಿದ್ದಾರೆ. ಇದೀಗ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರುವುದು ದಕ್ಷಿಣ ಚೀನಾದ ಯುನಾನ್ ಪ್ರಾಂತ್ಯದಲ್ಲಿ.

ಕಳ್ಳತನಕ್ಕೆ ತೆರಳಿ ಮದ್ಯ ಕುಡಿದು ಅಲ್ಲೇ ಮಲಗಿದ ಘಟನೆ, ಮನೆಯಲ್ಲಿದ್ದ ಆಹಾರ ತಿಂದು ನಿದ್ದೆ ಜಾರಿದ ಘಟನೆಗಳು ನಡೆದಿದೆ. ಇದು ಸ್ವಲ್ಪ ಭಿನ್ನ. ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದೆ. ಆದರೆ ಮನೆ ಸದಸ್ಯರು ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಮಲಗಲು ತಡ ಮಾಡಿದ್ದಾರೆ. ಹೇಗೂ ಮನೆಯೊಳಗೆ ಪ್ರವೇಶ ಮಾಡಿ ಆಗಿದೆ. ಖಾಲಿ ಕೈಯಲ್ಲಿ ಹೊರಬರುವ ಜಾಯಮಾನ ಚಾಲಕಿ ಕಳ್ಳನಿಗೆ ಇಲ್ಲ. ಹೀಗಾಗಿ ಮನೆ ಸದಸ್ಯರು ಮಲಗುವವರೆಗೆ ಪಕ್ಕದ ಕೋಣೆಯಲ್ಲಿ ಕುಳಿತು ಕಾಯಲು ನಿರ್ಧರಿಸಿದ್ದಾನೆ.

Tap to resize

Latest Videos

ಹಾಡಹಗಲೇ ಪೊಲೀಸರ ಮನೆಗೆ ನುಗ್ಗಿ ದರೋಡೆ ಮಾಡಿದ ಕಳ್ಳ: 12 ಗಂಟೆಯೊಳಗೆ ಜೈಲು ಸೇರಿದ

ಮನೆ ಸದಸ್ಯರ ಹರಟೆ ಮುಗಿಯುತ್ತಲೇ ಇಲ್ಲ. ಇತ್ತ ಕಾದು ಕಾದು ಸುಸ್ತಾದ ಕಳ್ಳ, ಸಿಗರೇಟು ಸೇದಿದ್ದಾನೆ. ಸಿಗರೇಟು ಸೇದಿ ಕೆಲ ಹೊತ್ತಲ್ಲೇ ಕಳ್ಳ ನಿದ್ದೆಗೆ ಜಾರಿದ್ದಾನೆ. ಕುಳಿತಲ್ಲೇ ನಿದ್ದೆ ಹತ್ತಿ ಬಿಟ್ಟಿದೆ. ಇತ್ತ ಮನೆ ಸದಸ್ಯರೂ ನಿದ್ದೆಗೆ ಜಾರಿದ್ದಾರೆ . ಮನೆಯ ಒಡತಿ ತನ್ನ ಕಿರಿಯ ಮಗುವಿನೊಂದಿಗೆ ಮಲಗಿದ್ದಾಳೆ. ಮಲಗಿದ ಕೆಲ ಹೊತ್ತಲ್ಲೇ ಭಾರಿ ಗೊರಕೆ ಶಬ್ದ ಕೇಳಿಸಲು ಆರಂಭಿಸಿದೆ. ಗೊರಕೆ ಶಬ್ದದ ಕಿರಿಕಿರಿಗೆ ಮನೆಯ ಒಡತಿಗೆ ಎಚ್ಚರವಾಗಿದೆ. ಎದ್ದು ಮಗುವಿನತ್ತ ನೋಡಿದ್ದಾಳೆ. ಮಗು ಗೊರಕೆ ಹೊಡೆಯುತ್ತಿಲ್ಲ. ಪಕ್ಕದ ಮನೆಯ ಗೊರಕೆ ಶಬ್ದ ಇರಬಹುದು ಎಂದು ಸುಮ್ಮನಾಗಿದ್ದಾಳೆ. ಆದರೆ ಗೊರಕೆ ಶಬ್ದ ಪಕ್ಕದಿಂದಲೇ ಕೇಳಿಸುವಂತೆ ಭಾಸವಾಗಿದೆ. ಈ ಪಾಟಿ ಗೊರಕೆ ಹೊಡೆಯುವ ಮಂದಿ ಮನೆಯಲ್ಲಿ ಇಲ್ಲ, ಇದು ಯಾರು ಅನ್ನೋ ಪರಿಶೀಲಿಸಲು ಬೆಡ್ ರೂಂನಿಂದ ಹೊರಬಂದಿದ್ದಾಳೆ.

ಸರಗಳ್ಳರ ವಿರುದ್ಧ ಹೋರಾಡಿ ಕಳ್ಳನನ್ನು ಬೈಕ್‌ನಿಂದ ಬೀಳಿಸಿದ ಗಟ್ಟಿಗಿತ್ತಿ ಮಹಿಳೆ: ವೀಡಿಯೋ

ಪಕ್ಕದ ಬೆಡ್‌ರೂಂ ಬಾಗಿಲು ಕೊಂಚ ತೆರಿದಿತ್ತು. ಇದೇ ಕೋಣೆಯಿಂದ ಗೊರಕೆ ಶಬ್ದ ಕೇಳಿಸುತ್ತಿದೆ. ಮೆಲ್ಲನೆ ಇಣುಕಿ ನೋಡಿದಾಗ ಅಪರಿಚಿತ ವ್ಯಕ್ತಿ ಗೊರಕೆ ಹೊಡೆಯುತ್ತಿರುವುದು  ಪತ್ತೆ ಹಚ್ಚಿದ್ದಾಳೆ. ತಕ್ಷಣವೇ ಮನೆಯ ಇತರ ಸದಸ್ಯರನ್ನು ಎಬ್ಬಿಸಿ ಮಾಹಿತಿ ನೀಡಿದ್ದಾಳೆ. ಇತ್ತ ಪೊಲೀಸರಿಗೆ ಕರೆ ಮಾಡಿದ್ದಾರೆ. ಕೆಲವೇ ಹೊತ್ತಲ್ಲಿ ಪೊಲೀಸರು ಆಗಮಿಸಿ ಮನೆ ಸುತ್ತುವರಿದಿದ್ದಾರೆ. ಪೊಲೀಸರು ಬಂದರೂ ಕಳ್ಳ ನಿದ್ದೆಯಿಂದ ಎಚ್ಚರಗೊಂಡಿಲ್ಲ.  ನಿದ್ದೆಯಿಂದ ಎಬ್ಬಿಸಿ ಕಳ್ಳನನ್ನು ಬಂಧಿಸಿದ್ದಾನೆ. ಈತ 2022ರಲ್ಲಿ ಇದೇ ರೀತಿ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ. ಬಿಡುಗಡೆಯಾಗಿ ಮತ್ತೆ ಕಳ್ಳತನಕ್ಕೆ ಇಲಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
 

click me!