ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಬೀದಿ ನಾಯಿಗಳ ದಾಳಿಗೆ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ.
ಕಾರವಾರ (ಜು.4): ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದು, ನಾಯಿಗಳ ದಾಳಿಗೆ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ನಾಯಿ ದಾಳಿಗೆ ಗಾಯಗೊಂಡ ಒಂದು ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಉಳಿದ ಆರು ಮಂದಿಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಟ್ಕಳದ ಗೊರ್ಟೆ, ಸೋಡಿಗದ್ದೆ, ಮೂಡ ಭಟ್ಕಳ, ಡೊಂಗರಪಲ್ಲಿ, ಹನುಮಾನ್ ನಗರ ಹಾಗೂ ನವಾಯತ್ ಕಾಲೋನಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನವಾಯತ್ ಕಾಲೋನಿಯ ಮದುವೆ ಮಂಟಪದ ಹೊರಗೆ ನಾಯಿಯೊಂದು ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಯುವಕ ಆಸಿಮ್ ಅಫಂದಿ ಮಗುವಿನ ರಕ್ಷಣೆಗೆ ಮಾಡಿದ್ದ. ಈ ವೇಳೆ ಆಸಿಮ್ ಮೇಲೂ ನಾಯಿ ದಾಳಿ ನಡೆಸಿತ್ತು. ಘಟನೆಯಲ್ಲಿ ಬಾಲಕ ಬಿಲಾಲ್ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಸದ್ಯ ಬಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Bengaluru; ಕಪಾಳಕ್ಕೆ ಹೊಡೆದ ಶಿಕ್ಷಕ, ವಿದ್ಯಾರ್ಥಿ ICUಗೆ ಅಡ್ಮಿಟ್!
ಡೊಂಗರ ಪಳಿಯಲ್ಲಿ 20 ತಿಂಗಳ ಮಗುವಿನ ಮೇಲೂ ನಾಯಿ ದಾಳಿ ನಡೆಸಿದ್ದು, ಇಸ್ಮಾಯಿಲ್ ತೇಮೂರು ಎಂಬ ಮಗುವಿನ ಮುಖ ಹಾಗೂ ಮೂಗಿಗೆ ತೀವ್ರ ಗಾಯವಾಗಿದೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಮಗುವನ್ನು ಉಡುಪಿ ಆಸ್ಪತ್ರೆಗೆ ಪೋಷಕರು ಕೊಂಡೊಯ್ದಿದ್ದಾರೆ.ಉಡುಪಿಯಲ್ಲಿ ಮಗುವಿನ ಮೂಗಿಗೆ ವೈದ್ಯರು ಆಪರೇಷನ್ ಮಾಡಿದ್ದಾರೆ.
ಬೀದಿ ನಾಯಿಗಳ ಕಾಟದಿಂದ ದೊಡ್ಡವರಿಗೂ ಮನೆಯಿಂದ ಹೊರಬರಲು ಭೀತಿ ಆರಂಭವಾಗಿದೆ. ಪುರಸಭೆ ಹಾಗೂ ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
Online Fraud; ಆನ್ಲೈನ್ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!
ನಾಯಿಯನ್ನು ಕೊಲ್ಲಲು ಮುಂದಾದ ದುರುಳರು: ರಕ್ಷಣೆ ಮಾಡಿದ ಶ್ವಾನ ಪ್ರಿಯ: ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನಲೆ ಅವುಗಳನ್ನ ಕೊಲ್ಲಲು ಮುಂದಾದ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು. ಬೀದಿ ನಾಯಿಯೊಂದು ಚಿಕ್ಕ ಮಗುವಿಗೆ ಕಚ್ಚಿದೆ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ನಾಯಿಗಳನ್ನ ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆಕಟ್ಟಿ ನಿರ್ಜಲ ಪ್ರದೇಶದಲ್ಲಿ ಎಸಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ನವಲೂರಿನ ಗ್ರಾಮ ಮತ್ತು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಬೀದಿನಾಯಿಯೊಂದು ಓರ್ವ ಬಾಲಕಿಗೆ ಕಚ್ಚಿದೆ ಎಂಬ ಕಾರಣಕ್ಕೆ ಪಾಲಿಕೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಸೇರಿಕ್ಕೊಂಡು ಸಿಕ್ಕ ಸಿಕ್ಕ ಶ್ವಾನಗಳನ್ನ ಕಟ್ಟಿ ಸಾಯಿಸೋ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಇನ್ನು ಅವುಗಳನ್ನು ಧಾರವಾಡ ತಾಲೂಕಿನ ದಡ್ಡಿ ಕಮಲಾಪೂರ ಗ್ರಾಮದ ಗುಡ್ಡು ಗಾಡು ಪ್ರದೇಶದಲ್ಲಿ 7 ಬೀದಿ ನಾಯಿಗಳನ್ನ ಎಸೆದು ಹೋಗಿದ್ದಾರೆ.
ಈ ಕುರಿತು ಮಹಾನಗರ ಪಾಲಿಕೆಯ ಕಮಿಷನರ್ ಗೋಪಾಲಕೃಷ್ಣ ಅವರು ಕೂಡಾ ಆ ದಾಳಿಗೊಳಗಾದ ಮಗುವಿನ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಆರೋಗ್ಯ ವಿಚಾರಣೆ ಮಾಡಿದ್ದು ಓಕೆ, ಆದರೆ ಆ ಬೀದಿನಾಯಿಗಳಿಗೆ ಕೊಟ್ಟಿರುವ ಶಿಕ್ಷ ಅಮಾನವೀಯವಾದದು, ಯಾವ ಬೀದಿನಾಯಿಗಳಿವೆ ಅವುಗಳಿಗೆ ಪಾಲಿಕೆ ಸಿಬ್ಬಂದಿಗಳು ಇಂಜೆಕ್ಷನ್ ಕೊಡಬಹುದು. ಆದರೆ ಅವನ್ನೆಲ್ಲ ಬಿಟ್ಟು ಕೊಲ್ಲಲು ಮುಂದಾಗಿದ್ದು ನಿಜಕ್ಕೂ ನಾಯಿ ಪ್ರಿಯರನ್ನ ಕೆರಳಿಸಿದೆ.
ಬೀದಿನಾಯಿಗಳನ್ನು ರಕ್ಷಣೆ ಮಾಡಿದ ಶ್ವಾನ ಪ್ರಿಯ: ಇನ್ನು ವಿಷಯ ತಿಳಿದ ಸೋಮಶೇಖರ್ ಚನಶೆಟ್ಟಿ ಸ್ಥಳಕ್ಕೆ ಬೇಟಿ ನೀಡಿದಾಗ 7 ನಾಯಿಗಳು ನಿರ್ಜಲ ಪ್ರದೇಶಗಳಲ್ಲಿ ಸಾವು ಬದುಕಿನ ಮದ್ಯ ಹೋರಾಡ್ತಾ ಇದ್ದವು. ಅವುಗಳನ್ನ ಅವರು ನೋಡಿ ಮಲಮಲ ಮರಗಿದ್ದಾರೆ. ಬಳಿಕ ಇವರು ಆ ನಾಯಿಗಳ ಬಾಯಿಗೆ ಕಟ್ಟಿದ್ದ ಬಟ್ಡೆಯನ್ನ ಬಿಚ್ಚಿ, ಕಾಲಿಗೆ ಕಟ್ಟಿದ ಹಗ್ಗವನ್ನ ತೆಗೆದು ಅವುಗಳಿಗೆ ಆಹಾರ ಕೊಟ್ಟು ಚಿಕಿತ್ಸೆಯನ್ನ ಸ್ಥಳದಲ್ಲೆ ಕೊಟ್ಟು ಒಟ್ಟು ಐದು ಬೀದಿನಾಯಿಗಳನ್ನು ರಕ್ಷಣೆ ಮಾಡಿದ್ದಾರೆ. ಒಂದು ನಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಆದರೆ ಇನ್ನೊಂದು ನಾಯಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದೆ. ನಿಜಕ್ಕೂ ಇಂತಹ ಘಟನೆಯನ್ನ ಕಂಡು ಸೋಮಶೇಖರ್ ಕಣ್ಣೀರು ಹಾಕಿದ್ದಾರೆ.