Crime News: ಮಹಿಳೆಯೊಬ್ಬರು ತನ್ನ ಏಳು ತಿಂಗಳ ಮಗನನ್ನು ಕೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ ಅಮ್ರೇಲಿ ಪಟ್ಟಣದ ಸಮೀಪದ ಚಿತಾಲ್ ಗ್ರಾಮದಲ್ಲಿ ಶನಿವಾರ ನಡೆದಿದೆ
ಗುಜರಾತ್ (ಜು. 04): ಮಹಿಳೆಯೊಬ್ಬರು ತನ್ನ ಏಳು ತಿಂಗಳ ಮಗನನ್ನು ಕೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ (Gujarat) ಅಮ್ರೇಲಿ ಪಟ್ಟಣದ ಸಮೀಪದ ಚಿತಾಲ್ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತರನ್ನು ರೈತ ತುಷಾರ್ ಸಾವಲಿಯಾ ಅವರ ಪತ್ನಿ 30 ವರ್ಷದ ಕಾಜಲ್ ಸವಲಿಯಾ ಮತ್ತು ಅವರ ಮಗ ಜಯವೀರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಕಾಜಲ್ ಮೊದಲು ಮಗನಿಗೆ ವಿಷ ನೀಡಿ, ಬಳಿಕ ತಾನೂ ವಿಷ ಸೇವಿಸಿದ್ದಾಳೆ. ತುಷಾರ್ ಮತ್ತು ಆಕೆಯ ಅತ್ತೆಯಂದಿರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೊರಟಿದ್ದಾಗ ಮಹಿಳೆ ಈ ರೀತಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮ್ರೇಲಿ ಪೊಲೀಸ್ ಉಪ ಅಧೀಕ್ಷಕ (ಡಿಎಸ್ಪಿ) ಜೆ ಪಿ ಭಂಡಾರಿ ಮಾತನಾಡಿ, ಕಾಜಲ್ ತನ್ನ ಪತಿಯೊಂದಿಗೆ ಸಣ್ಣ ವಿವಾದದ ನಂತರ ತನ್ನ ಮತ್ತು ಮಗನ ಪ್ರಾಣವನ್ನು ತೆಗೆದುಕೊಂಡಿದ್ದಾಳೆ ಎಂದು ಬಹಿರಂಗಪಡಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಕಾಜಲ್ ಹಲ್ಲು ನೋವಿನಿಂದ ಬಳಲುತ್ತಿದ್ದರು. ಆದರೆ ಅವರ ಪತಿ ಬಿತ್ತನೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದರಿಂದ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ ”ಎಂದು ಡಿಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯಕರನೊಡನೆ ಸೇರಿ ಪತಿ ಕೊಲೆ ಮಾಡಿ ನಾಪತ್ತೆ ಕೇಸ್ ದಾಖಲಿಸಿದ್ದ ಪತ್ನಿ ಅಂದರ್!
"ಈ ವಿವಾದದ ಬೆನ್ನಲ್ಲೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಲ್ಲದೆ, ಮೃತ ಮಹಿಳೆಯ ಪೋಷಕರು ಇದುವರೆಗೆ ಆಕೆಯ ಅತ್ತೆಯ ವಿರುದ್ಧ ಯಾವುದೇ ಕೌಟುಂಬಿಕ ದೌರ್ಜನ್ಯ ಅಥವಾ ಕಿರುಕುಳದ ಆರೋಪಗಳನ್ನು ಮಾಡಿಲ್ಲ, ”ಎಂದು ಪೋಲಿಸರು ತಿಳಿಸಿದ್ದಾರೆ.
ಪತಿ ತುಷಾರ್ ಮತ್ತು ಅತ್ತೆ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋದ ನಂತರ ಕಾಜಲ್ ಕೋಣೆಗೆ ಬೀಗ ಹಾಕಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಂಡು ಹಿಂತಿರುಗಿದಾಗ, ಪದೇ ಪದೇ ಬಾಗಿಲು ತಟ್ಟಿದರೂ, ಕಾಜಲ್ ಬಾಗಿಲು ತೆರೆದಿರಲಿಲ್ಲ.
ಇದನ್ನೂ ಓದಿ: ಬೆಟ್ಟಿಂಗ್ ದಂಧೆಯ ಕರಾಳ ರೂಪ ದರ್ಶನ: ಹಣಕ್ಕಾಗಿ ಹೆಂಡತಿಯನ್ನೇ ಕೊಂದನಾ ಗಂಡ?
ಬಳಿಕ ತುಷಾರ್ ಮನೆಯ ಬಳಿಯ ಗೋಶಾಲೆಯಿಂದ ಕೆಲವು ಕಾರ್ಮಿಕರನ್ನು ಕರೆದು ಬಾಗಿಲು ಒಡೆದಾಗ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಜಲ್ ಮತ್ತು ಜೈವಿರ್ ಪತ್ತೆಯಾಗಿದ್ದಾರೆ. ಅಲ್ಲದೇ ಕೋಣೆಯಲ್ಲಿ ನೆಲದ ಮೇಲೆ ವಿಷದ ಬಾಟಲಿ ಕೂಡ ಪತ್ತೆಯಾಗಿದೆ. ಕಾಜಲ್ ಮತ್ತು ಆಕೆಯ ಮಗನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.