
ಯಲ್ಲಾಪುರ (ಜು.22) : ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ . 25,100 ಡ್ರಾ ಮಾಡಿದ ಆರೋಪಿಯನ್ನು ಮೂರೇ ದಿನದಲ್ಲಿ ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಅಮುಲ್ ಭಗವಾನ ಶೆಂಡೆ (33) ಬಂಧಿತ ಆರೋಪಿ. ವಿಚಾರಣೆ ವೇಳೆ ಈತನು ಅಂತರರಾಜ್ಯ ಕಳ್ಳನೆಂದು ತಿಳಿದು ಬಂದಿದ್ದು ರಾಜ್ಯ ಹಾಗೂ ಅಂತರರಾಜ್ಯ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿರುವ ಮಾಹಿತಿ ದೊರಕಿದೆ.
ಪಟ್ಟಣದ ಎಸ್‌ಬಿಐ ಎಟಿಎಂನಲ್ಲಿ ಆರೋಪಿಯು ದೂರುದಾರರಿಗೆ ಎಟಿಎಂನಿಂದ ಹಣ ಡ್ರಾ ಮಾಡಲು ಸಹಾಯ ಮಾಡುವಂತೆ ಮಾಡಿ ಎಟಿಎಂ ಕಾರ್ಡ್ ಬದಲಿಸಿ ಅದೇ ದಿನ ಶಿರಸಿಯ ಎಟಿಎಂನಲ್ಲಿ ದೂರುದಾರರ ಖಾತೆಯಿಂದ . 25,100 ಡ್ರಾ ಮಾಡಿದ್ದರು. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಜು. 17ರಂದು ಪ್ರಕರಣ ದಾಖಲಾಗಿತ್ತು.
Cyber Crime: ಅಕೌಂಟ್‌ನಲ್ಲಿ ಹಣ ಇಲ್ದೇ ಇದ್ರು ಎಟಿಎಂನಿಂದ 9 ಕೋಟಿ ತೆಗೆದ.. ಮುಂದೆ..!?
ಎಟಿಎಂನಲ್ಲಿರುವ ಸಿಸಿ ಟಿವಿ ಮಾಹಿತಿಯನ್ನಾಧರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಿದ್ದಾಪುರ, ಅಂಕೋಲಾ, ಬೆಳಗಾವಿ ಎಪಿಎಂಸಿ, ಮಹಾರಾಷ್ಟ್ರದ ಚಂದಗಡ, ಕಾಗಲ್, ಮುರಗೋಡ, ಮಾಳಶಿರಸ, ಮಧ್ಯಪ್ರದೇಶದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಇದೇ ಮಾದರಿಯ ಕಳ್ಳತನದ ಪ್ರಕರಣಗಳು ದಾಖಲಾದ ಕುರಿತು ತಿಳಿದು ಬಂದಿದೆ. ಆರೋಪಿಯಿಂದ . 12,000 ನಗದು, ಕೃತ್ಯಕ್ಕೆ ಬಳಸಿದ 2 ಎಟಿಎಂ ಕಾರ್ಡ್ ಮತ್ತು . 75,000 ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸಿ.ಟಿ. ಜಯಕುಮಾರ, ಶಿರಸಿಯ ಪೊಲೀಸ್ ಉಪಾಧೀಕ್ಷಕ ಗಣೇಶ ಕೆ.ಎಲ್, ಮಾರ್ಗದರ್ಶನದಲ್ಲಿ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ಶ್ಯಾಮ ಪಾವಸ್ಕರ, ಎಎಸ್‌ಐ ಮಂಜುನಾಥ ಮನ್ನಂಗಿ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಫಿ, ಗಿರೀಶ ಲಮಾಣಿ, ಪ್ರವೀಣ ಪೂಜಾರ ಮುಂತಾದವರು ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Bengaluru crime: ಎಟಿಎಂನಿಂದ₹.24 ಲಕ್ಷ ದೋಚಿದ್ದವರ ಸೆರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ