ಔಷಧ ಉದ್ಯಮಿ ಹುಕುಂ ಚಂದ್ ಅಪ್ರಾಪ್ತ ವಯಸ್ಸಿನ ಮಗ ಪಬ್‌ಜಿ, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ಗಳಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸಿದ್ದಾನೆ. ಅಲ್ಲದೇ ಈ ಗೇಮ್‌ಗಳಲ್ಲಿ ಐಡಿ ಖರೀದಿಸಲು ₹17ಲಕ್ಷ ಮೊತ್ತವನ್ನು ಮನೆಯಿಂದಲೇ ಕದ್ದಿದ್ದಾನೆ ಎಂದು ಪೋಲಿಸರ ತಿಳಿಸಿದ್ದಾರೆ.
ಚಂಡೀಗಢ (ಜ. 16): ಚಂಡೀಗಢದ ಪೀಪ್ಲಿವಾಲಾ (Pipliwala) ಟೌನ್‌ನ ನಿವಾಸಿ, ಔಷದಿ ಕಂಪನಿ ಮಾಲೀಕರೊಬ್ಬರು ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಿಸಿದ್ದರು. ಜನವರಿ 12 ರಂದು ಉದ್ಯಮಿ ಹುಕುಂ ಚಂದ್ ಪೋಲಿಸ್ ಠಾಣೆಯಲ್ಲಿ ಕಳ್ಳತನ ಪ್ರಕರಣವನ್ನು ದಾಖಲಿಸಿ ಮನೆಯೊಳಗಿನ ಹಾಸಿಗೆಯ ಬಾಕ್ಸ್‌ನಲ್ಲಿ 19 ಲಕ್ಷ ರೂ.ಗಳನ್ನು ಇಡಲಾಗಿತ್ತು ಅದರಲ್ಲಿ ರೂ.17 ಲಕ್ಷ ಕಳ್ಳತನವಾಗಿದೆ ಎಂದು ತಿಳಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೋಲಿಸರು ಮೇಲ್ವಿಚಾರಣೆ ನಡೆಸಿದ್ದರು. ಆದರೆ ಪ್ರಕರಣ ಭೇದಿಸಲು ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು. ಆನ್‌ಲೈನ್ ಆಟಗಳನ್ನು ಆಡುವ ಚಟ ಹೊಂದಿದ್ದ ದೂರುದಾರರ ಮಗನೇ ಈ ಹಣ ಕದ್ದಿರುವುದು ತಿಳಿದು ಪೊಲೀಸರಿಗೂ ಶಾಕ್ ಆಗಿತ್ತು.
ಹುಕುಂ ಚಂದ್ ಅಪ್ರಾಪ್ತ ವಯಸ್ಸಿನ ಮಗ ಪಬ್‌ಜಿ, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ಗಳಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸಿದ್ದಾನೆ. ಅಲ್ಲದೇ ಈ ಗೇಮ್‌ಗಳಲ್ಲಿ ಐಡಿ ಖರೀದಿಸಲು ₹17ಲಕ್ಷ ಮೊತ್ತವನ್ನು ಮನೆಯಿಂದಲೇ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಗ ಹಣ ಕದ್ದಿದ್ದು ಅರಿಯದೆ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಇನ್ನು ಈ ಪ್ರಕರಣದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಯ ಜತೆಗೆ ಆತನ ಸೋದರ ಸಂಬಂಧಿ ಹಾಗೂ ಸ್ನೇಹಿತ ಸೇರಿದ್ದಾರೆ. ಉದ್ಯಮಿ ಹುಕುಂ ಚಂದ್ ಮನೆಯ ನವೀಕರಣಕ್ಕಾಗಿ ಹಣವನ್ನು ಮನೆಯಲ್ಲಿಟ್ಟಿದ್ದರು ಎಂದು ತಿಳಿದು ಬಂದಿದೆ.
undefined
ಇದನ್ನೂ ಓದಿ: PubG Couple: ಪಬ್‌ಜಿ ಲವರ್ಸ್ ಪ್ರೇಮ್ ಕಹಾನಿ: ಬಂಗಾಳದ ಯುವಕನನ್ನು ವರಿಸಿದ ಕರ್ನಾಟಕದ ಕುವರಿ!
3 ಐಫೋನ್‌ಗಳು, ಬಟ್ಟೆ ಮತ್ತು ಶೂ ಖರೀದಿ: ಉದ್ಯಮಿಯ ಮಗ ಹಣ ಕದ್ದು ಸ್ನೇಹಿತರೊಂದಿಗೆ ಸೇರಿ ಮೂರು ಐಫೋನ್, ಬಟ್ಟೆ, ಶೂ ಖರೀದಿಸಿದ್ದಾನೆ. ಅಷ್ಟೇ ಅಲ್ಲದೆ, ವಿಮಾನದಲ್ಲಿಯೂ ಪ್ರಯಾಣಿಸಿದ್ದಾರೆ.ಇದಕ್ಕೆ ಕದ್ದ ಹಣದಲ್ಲಿ₹7 ಲಕ್ಷ ಖರ್ಚು ಮಾಡಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬನನ್ನು 27 ವರ್ಷದ ಸೂರಜ್ ಎಂದು ಗುರುತಿಸಲಾಗಿದೆ. ಮೂವರು ಅಪ್ರಾಪ್ತ ಆರೋಪಿಗಳನ್ನು ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಆದರೆ, ಪೊಲೀಸರು ಭಾನುವಾರ ಡ್ಯೂಟಿ ಮ್ಯಾಜಿಸ್ಟ್ರೇಟ್ ಮುಂದೆ ಸೂರಜ್‌ನನ್ನು ಹಾಜರುಪಡಿಸುವ ಮೂಲಕ ರಿಮಾಂಡ್ ಪಡೆಯಲು ಪ್ರಯತ್ನಿಸಿದ್ದಾರೆ.
ಪೊಲೀಸರು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿಗೆ ಹಣವನ್ನು ಮತ್ತು ಮೂರು ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸೂರಜ್ 12ನೇ ತರಗತಿ ತೇರ್ಗಡೆಯಾಗಿ ಖಾಸಗಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದಾನೆ. ಆತ ಅಪ್ರಾಪ್ತ ಯುವಕರನ್ನು ಆನ್‌ಲೈನ್ ಗೇಮ್‌ಗಳನ್ನು ಖರೀದಿಸುವಂತೆ ಪ್ರೇರೇಪಿಸುತ್ತಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: PUBG Game: ಪಬ್‌ಜಿ ಆಟದಲ್ಲಿ ಮುಳುಗಿದ ವಿದ್ಯಾರ್ಥಿಗಳಿಗೆ ರೈಲು ಡಿಕ್ಕಿ, ಇಬ್ಬರು ಸಾವು!
ಸಾಮಾಜಿಕ ಜಾಲತಾಣದಿಂದ ಬಹಿರಂಗ: ತನಿಖೆಯ ಸಂದರ್ಭದಲ್ಲಿ, ದೂರುದಾರರ ಮಗ ಮತ್ತು ಸಹೋದರ ವಿವಿಧ ಸ್ಥಳಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಆದರೆ, ಅವರು ತಮ್ಮ ಊರಿಗೆ ಹೋಗುವುದಾಗಿ ಪೋಷಕರಿಗೆ ಸುಳ್ಳು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಇಬ್ಬರೂ ವಿಮಾನದಲ್ಲಿ ಮನೆಗೆ ಮರಳಿದಾಗ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಕಳ್ಳತನದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಆನ್‌ಲೈನ್ ಆಟ ಆಡುವ ಚಟ: ದೂರುದಾರರ ಮಗನು "ಫ್ರೀ ಫೈರ್", "ಪಬ್-ಜಿ", ಕಾರ್ ರೇಸಿಂಗ್ ಮತ್ತು "ಡಾಸ್ಫಾಲ್ಟ್ -9" ನಂತಹ ಆನ್‌ಲೈನ್ ಆಟಗಳನ್ನು ಆಡುವ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಸೋದರಸಂಬಂಧಿ ಈ ಆಟಗಳಲ್ಲಿ ಪರಿಣತರಾಗಿದ್ದು, ಸೂರಜ್ ಅಲಿಯಾಸ್ ವಿಂಟರ್‌ನಿಂದ ಆನ್‌ಲೈನ್ ಗೇಮಿಂಗ್‌ಗಾಗಿ ಐಡಿಗಳನ್ನು ಖರೀದಿಸಲು ಹಣದ ವ್ಯವಸ್ಥೆ ಮಾಡುವಂತೆ ದೂರುದಾರರ ಮಗನಿಗೆ ಒತ್ತಡ ಹೇರಿದ್ದರು. ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 420 (ವಂಚನೆ) ಮತ್ತು 120 B (ಪಿತೂರಿ) ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಎಸ್‌ಎಸ್‌ಪಿ ಕುಲದೀಪ್ ಚಹಾಲ್ ಅವರ ಸೂಚನೆಯಂತೆ, ಡಿಎಸ್‌ಪಿ ಎಸ್‌ಪಿಎಸ್ ಸೋಂಧಿ ಅವರ ಮೇಲ್ವಿಚಾರಣೆಯಲ್ಲಿ, ಎಸ್‌ಎಚ್‌ಒ ನೀರಜ್ ಸರ್ನಾ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿದೆ.