* ಮಾರಕಾಸ್ತ್ರ ತೋರಿಸಿ ಕೃತ್ಯ
* 5 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ
* ಬಂಧಿತ ಆರೋಪಿಯಿಂದ 10 ಸಾವಿರ ಹಾಗೂ ದ್ವಿಚಕ್ರ ವಾಹನ ಜಪ್ತಿ
ಬೆಂಗಳೂರು(ಜ.15): ಅಂಗಡಿ-ಮುಂಗಟ್ಟುಗಳು, ಫೈನಾನ್ಸ್ ನೌಕರರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶೀಟರ್‌ನೊಬ್ಬನನ್ನು(Rowdysheeter) ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿ(Arrest) ಜೈಲಿಗಟ್ಟಿದ್ದಾರೆ. ಹೆಬ್ಬಾಳ ಕನಕನಗರದ ತಬ್ರೇಜ್ ಪಾಷಾ ಅಲಿಯಾಸ್ ಚೋಟಾ ಟೈಗರ್(44)(Chota Tiger) ಬಂಧಿತ(Arrest) ರೌಡಿ ಶೀಟರ್. ಕಳೆದ ತಿಂಗಳು ಅಂಗಡಿಗಳಲ್ಲಿ ಫೈನಾನ್ಸ್ ಹಣ ಸಂಗ್ರಹಿಸಿಕೊಂಡು ಜೆ.ಸಿ.ನಗರದ ಚರ್ಚ್ ರಸ್ತೆಯ ಶ್ರೀನಿವಾಸ ಬೇಕರಿ ಬಳಿ ಹೋಗುತ್ತಿದ್ದ ಫೈನಾನ್ಸ್ ಕಂಪನಿಯೊಂದರ(Finance Company) ನೌಕರರನ್ನು ಅಪರಿಚಿತ ವ್ಯಕ್ತಿಯೊಬ್ಬ ಅಡ್ಡಗಟ್ಟಿ ಬೆದರಿಸಿ ಆತನಿಂದ 28 ಸಾವಿರ ನಗದು ಸುಲಿಗೆ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಜೆ.ಸಿ.ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮುನಿಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 10 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್ ಕದ್ದಿದ್ದವ ಅರೆಸ್ಟ್
ಆರೋಪಿ ತಬ್ರೇಜ್ ಪಾಷಾ ಹಲವು ವರ್ಷಗಳಿಂದ ಅಪರಾಧ(Crime) ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಜೆ.ಸಿ.ನಗರ, ಆರ್.ಟಿ.ನಗರ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಯಶವಂತಪುರ ಸೇರಿದಂತೆ ವಿವಿಧ ಪೊಲೀಸ್(Police) ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ(Attempt to Murder), ಸುಲಿಗೆ, ದರೋಡೆ(Robbery) ಸೇರಿದಂತೆ 16ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆರ್.ಟಿ.ನಗರ ಪೊಲೀಸರು ಈತನ ವಿರುದ್ಧ ರೌಡಿ ಶೀಟ್ ತೆರೆದಿದ್ದರು. ಹಲವು ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು(Jail) ಸೇರಿದ್ದ ಆರೋಪಿ, ಜಾಮೀನು(Bail) ಪಡೆದು ಹೊರಬಂದ ಬಳಿಕವೂ ಸುಲಿಗೆ, ದರೋಡೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ ತಬ್ರೇಜ್ ಪಾಷಾ ಫೈನಾನ್ಸ್ ಕಂಪನಿಗಳು, ಅಂಗಡಿ-ಮುಂಗಟ್ಟುಗಳಿಗೆ ತನ್ನ ಹುಡುಗರನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದ. ಹಣ ಕೊಡಲು ನಿರಾಕರಿಸಿದರೆ ತಾನೇ ಬಂದು ಮಾರಕಾಸ್ತ್ರ ತೋರಿಸಿ, ಪ್ರಾಣ ಬೆದರಿಕೆ ಹಾಕಿ ದರೋಡೆ ಮಾಡಿಕೊಂಡು ಪರಾರಿಯಾಗುತ್ತಿದ್ದ. ಕಳೆದ ಐದು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇದೀಗ ಪತ್ತೆಹಚ್ಚಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Matrimony Website Fraud: ಮದುವೆ, ನೌಕರಿ ಆಮಿಷ ಒಡ್ಡಿ ಯುವತಿಯರ ಜತೆ ದೈಹಿಕ ಸಂಬಂಧ ಬೆಳಸಿದ್ದ ವಂಚಕ!
ಮುಂಬೈ ಬಿಲ್ಡರ್ ಬಳಿ 2 ಕೋಟಿ ಸುಲಿಗೆ ಯತ್ನ: ಬೆಂಗಳೂರಿನ ಬಂಧನ
ಮುಂಬೈ(Mumbai): ಬಿಲ್ಡರ್(Builder) ಒಬ್ಬರಿಂದ ಸುಮಾರು 2 ಕೋಟಿ ಸುಲಿಗೆಗೆ ಯತ್ನಿಸಿದ ಬೆಂಗಳೂರು(Bengaluru) ಮೂಲದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಬಂಧಿತನನ್ನು ಮಹೇಶ್ ಸಂಜೀವ್ ಪೂಜಾರಿ (35) ಎಂದು ಗುರುತಿಸಲಾಗಿದೆ.
2021ರ ಮೇನಲ್ಲಿ ಪೂಜಾರಿ ಮೊಬೈಲ್ ಕಾಲಿಂಗ್ ಆ್ಯಪ್(Mobile Calling App) ಮೂಲಕ ವಿದೇಶಿ ಕರೆ ಸೋಗಿನಲ್ಲಿ ಮುಂಬೈ ಮೂಲದ ಬಿಲ್ಡರ್‌ಗೆ ಕರೆ ಮಾಡಿ 2 ಕೋಟಿಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಪದೇ ಪದೇ ಕರೆಗಳು ಬಂದ ಹಿನ್ನೆಲೆ ಬಿಲ್ಡರ್ 2021ರ ಡಿಸೆಂಬರ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಕೇಸ್ ದಾಖಲಿಸಿದ್ದರು. ಸೈಬರ್ ಕ್ರೈಂ ಸಹಾಯ ಪಡೆದ ಮುಂಬೈ ಪೊಲೀಸರು, ಕರೆಯು ವಿದೇಶದಿಂದ ಬಂದಿದ್ದಲ್ಲ. ಬೆಂಗಳೂರಿಂದ ಬಂದಿದ್ದು ಎಂದು ಪತ್ತೆ ಮಾಡಿದ್ದರು. ಹೀಗಾಗಿ ಬೆಂಗಳೂರಿಗೆ ಆಗಮಿಸಿ ಬುಧವಾರ ಪೂಜಾರಿಯನ್ನು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.