Belagavi: ಗಂಡನನ್ನೇ ಕೊಂದ ಪಾಪಿ ಹೆಂಡ್ತಿ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

By Kannadaprabha NewsFirst Published Jan 16, 2022, 12:39 PM IST
Highlights

*   ಅಪರಿಚಿತ ವ್ಯಕ್ತಿಯ ಹತ್ಯೆ ಪ್ರಕರಣ
*   ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
*   ರಮೇಶ ಮಾದಿಗರನನ್ನ ಹತ್ಯೆ ಮಾಡಿ ಚರಂಡಿ ಬಳಿ ಎಸೆದು ಹೋಗಿದ್ದ ಆರೋಪಿಗಳು 
 

ಬೆಳಗಾವಿ(ಜ.15): ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಪರಿಚಿತ ವ್ಯಕ್ತಿಯ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು(Police) ಶನಿವಾರ ಇಬ್ಬರು ಆರೋಪಿಗಳನ್ನು(Accused) ಬಂಧಿಸಿದ್ದು(Arrest), ಪತಿಯನ್ನೇ ಪತ್ನಿ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಬೈಲಹೊಂಗಲ ತಾಲೂಕಿನ ಮರಕಟ್ಟಿ ಗ್ರಾಮದ ಶ್ರೀದೇವಿ ರಮೇಶ ಮಾದಿಗರ ಮತ್ತು ಧಾರವಾಡ(Dharwad) ಜಿಲ್ಲೆಯ ಹೋಗೂರ ಗ್ರಾಮದ ಬಸವರಾಜ ಯಲ್ಲಪ್ಪ ಹರಿಜನ ಬಂಧಿತ ಆರೋಪಿಗಳು. ಶ್ರೀದೇವಿ ಇನ್ನೊಬ್ಬ ಆರೋಪಿ ಜತೆ ಸೇರಿ ತನ್ನ ಪತಿ ರಮೇಶ ನಾಗಪ್ಪ ಮಾದಿಗರ (36) ನನ್ನು ಹತ್ಯೆ(Murder) ಮಾಡಿ, ಶವವನ್ನು(Deadbody) ತಿಮ್ಮಾಪುರ ಹದ್ದಿಯ ಬಚ್ಚನಕೇರಿ ಕ್ರಾಸ್‌ ಹತ್ತಿರುವ ಧಾರವಾಡ- ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಬದಿಯ ಸರ್ವಿಸ್‌ ರಸ್ತೆಯ ನಡುವಿನ ಚರಂಡಿ ಬಳಿ ಎಸೆದು ಹೋಗಿದ್ದರು.

Suvarna FIR : ಕಾರು ಅಡ್ಡಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ.. ಆನೇಕಲ್‌ನಲ್ಲಿ ತಲೆ ಎತ್ತಿದ ಭೂ ಮಾಫಿಯಾ!

ನಂತರ ಈ ಕುರಿತು ದೂರು(Complaint) ದಾಖಲಿಸಿಕೊಂಡಿದ್ದ ಕಿತ್ತೂರು ಪೊಲೀಸ್‌ ಠಾಣೆಯ ಪೊಲೀಸರು ತೀವ್ರ ತನಿಖೆಗೆ ಮುಂದಾಗಿದ್ದರು. ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಕಿತ್ತೂರು ಸಿಪಿಐ ಮಂಜುನಾಥ ಕುಸುಗಲ್‌, ಪಿಎಸ್‌ಐ ದೇವರಾಜ ಉಳ್ಳಾಗಡ್ಡಿ, ಎಸ್‌.ಬಿ.ಮಾವಿನಕಟ್ಟಿ ನೇತೃತ್ವದ ಪೊಲೀಸರ ತಂಡ ಈ ಹತ್ಯೆ ಪ್ರಕರಣವನ್ನು ಬೇಧಿಸಿದೆ. ಅಲ್ಲದೆ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಈ ಕೊಲೆ ಹತ್ಯೆ ಪ್ರಕರಣ ಭೇದಿಸಿ, ಆರೋಪಿಗಳನ್ನು ಬಂಧಿಸಿರುವ ಕಿತ್ತೂರು ಠಾಣೆ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಂಡತಿ ಜೊತೆ ಅನೈತಿಕ ಸಂಬಂಧ, ಫೈನಾನ್ಸ್‌ ಮಾಲೀಕನ ಹತ್ಯೆ

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ-ಅಂದಲಗಿ ಮಾರ್ಗ ಮಧ್ಯದ ಕಲ್ಲೊಳ್ಳಿ ಸೇತುವೆ ಕೆಳಗಿನ ಹಳ್ಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ(Death) ಫೈನಾನ್ಸ್‌ ಮಾಲೀಕ ಮೆಹಬೂಬ್‌ಅಲಿ ಜಮಖಂಡಿ ಕೊಲೆ ರಹಸ್ಯವನ್ನು ಭೇದಿಸಿದ ಮುಂಡಗೋಡ ಪೊಲೀಸರು(Police) ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಕಳೆದ ವರ್ಷದ ಡಿ. 2 ರಂದು ನಡೆದಿತ್ತು.

ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಇಬ್ರಾಹಿಂ ಮಹ್ಮದಸಾಬ್‌ ಶಿಗ್ಗಾಂವಿ (31) ಶರೀಫ್‌ ಮಹ್ಮದಸಾಬ್‌ ಶಿಗ್ಗಾಂವಿ (38) ಹಾಗೂ ನಾಜೀಯಾಬಾನು ಇಬ್ರಾಹಿಂ ಶಿಗ್ಗಾಂವಿ (26) ಈ ಮೂವರು ಬಂಧಿತ ಆರೋಪಿಗಳು(Accused).

Asianet Suvarna FIR ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟು ಸಮಾಧಿ ಮೇಲೆ ಮಂಚ ಹಾಕಿಕೊಂಡಿದ್ದ ಪತಿ

ಕಲ್ಲೊಳ್ಳಿ ಹಳ್ಳದ ದಡದಲ್ಲಿ ಬೈಕ್‌ನೊಂದಿಗೆ ಮೆಹಬೂಬ್‌ಅಲಿ ಜಮಖಂಡಿ ಮೃತದೇಹ(Deadbody) ಪತ್ತೆಯಾಗಿತ್ತು. ಮೃತದೇಹವನ್ನು ಪರಿಶೀಲಿಸಿದಾಗ ಕೊಲೆ(Murder) ಸಂಶಯ ಮೂಡಿತ್ತು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ(Investigation) ಕೈಗೊಂಡಿದ್ದರು. ಮೃತನ ಹಿನ್ನೆಲೆ ಹಾಗೂ ಆತ ಸಾಯುವ ಕೊನೆಯಲ್ಲಿ ಬಂದ ಕರೆಯನ್ನು ಆಧರಿಸಿ ಕೆಲವರ ವಿಚಾರಣೆ ಆರಂಭಿಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬಂದಿದೆ.

ಕೊಲೆಯ ಹಿನ್ನೆಲೆ ವಿವರ:

ಆರೋಪಿ ಇಬ್ರಾಹಿಂ ಶಿಗ್ಗಾಂವಿ ಫೈನಾನ್ಸ್‌ ಮಾಲೀಕ ಜಮಖಂಡಿ ಜತೆ ಸೇರಿ ವ್ಯವಹಾರ(Business) ನಡೆಸುತ್ತಿದ್ದ ಎನ್ನಲಾಗಿದ್ದು, ವ್ಯವಹಾರದ ಲಕ್ಷಾಂತರ ರು. ಸ್ವಂತಕ್ಕೆ ಬಳಸಿಕೊಂಡಿದ್ದ. ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡದ ಕಾರಣ ಫೈನಾನ್ಸ್‌ ಮಾಲೀಕ ಮೆಹಬೂಬ್‌ಅಲಿ ಫೋನ್‌ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಮೂರು ತಿಂಗಳು ಹಿಂದೆ ಹಣ ಕೇಳಲು ಪೋನ್‌ ಮಾಡಿದಾಗ ಇಬ್ರಾಹಿಂನ ಪತ್ನಿ ಕರೆ ಸ್ವೀಕರಿಸಿದ್ದು, ನಿಮ್ಮ ಪತಿ ಕರೆಯನ್ನು ಸ್ವೀಕರಿಸುವುದಿಲ್ಲ, ಹಣ ಪಾವತಿ ಮಾಡುವಂತೆ ನಿಮ್ಮ ಪತಿಗೆ ಹೇಳಿ ಎಂದು ಕೋರಿದ್ದ. ಅಲ್ಲದೆ ಆಕೆಯ ಫೋನ್‌ ನಂಬರ್‌ ಪಡೆದು, ಸಾಲ ಕೇಳುವ ನೆಪದಲ್ಲಿ ಸ್ನೇಹ ಬೆಳೆಸಿಕೊಂಡು, ಮನೆಯಲ್ಲಿ ಯಾರು ಇಲ್ಲದಾಗ ಮನೆಗೆ ಹೋಗಿ ಬರುತ್ತಿದ್ದ. ಈ ವಿಷಯ ತಿಳಿದ ಇಬ್ರಾಹಿಂ, ಪತ್ನಿ ಹಾಗೂ ಮೆಹಬೂಬ್‌ಅಲಿಗೆ ಎಚ್ಚರಿಕೆ ನೀಡಿದ್ದ. ಆದರೂ ಅವರಿಬ್ಬರ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ. ಹೀಗಾಗಿ ಮೆಹಬೂಬ್‌ಅಲಿ ಕೊಲೆಗೆ ಇಬ್ರಾಹಿಂ ಸಂಚು ರೂಪಿಸಿದ. ತನ್ನ ಪತ್ನಿ ಮೂಲಕ ಮೆಹಬೂಬ್‌ಅಲಿಗೆ ಗುರುವಾರ ರಾತ್ರಿ ಪೋನ್‌ ಮಾಡಿಸಿ, ಮನೆಗೆ ಕರೆಯಿಸಿ ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ಆನಂತರ ತನ್ನ ಅಣ್ಣ ಶರೀಫ್‌ ಶಿಗ್ಗಾಂವಿ ಸಹಾಯದೊಂದಿಗೆ ಮೃತನ ಬುಲೆಟ್‌ ಮೇಲೆ ಮೃತದೇಹ ತೆಗೆದುಕೊಂಡು ಹೋಗಿ ಹನುಮಾಪುರ-ಅಂದಲಗಿ ಮಾರ್ಗ ಮಧ್ಯದ ಕಳ್ಳೊಳ್ಳಿ ಹಳ್ಳದಲ್ಲಿ ಎಸೆದು ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. 
 

click me!