ಕಳ್ಳರು ತಮ್ಮ ಕೈ ಚಳಕ ತೋರಲು ಹಲವು ಚಾಣಾಕ್ಷ ನಡೆಗಳನ್ನು ಬಳಸುತ್ತಾರೆ. ಕಳ್ಳತನದ ಹಲವು ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು. ಕಳ್ಳರು ಎಷ್ಟು ಚಾಣಾಕ್ಯರಾಗಿರುತ್ತಾರೆಂದರೆ ನಿಮ್ಮ ಮೂಗಿನ ನೇರಕ್ಕೆ ನಿಮಗೂ ತಿಳಿಯದಂತೆ ಕಳ್ಳತನ ಮಾಡುತ್ತಾರೆ. ಯಾವುದೇ ಅನುಮಾನ ಬಾರದಂತೆ ಕ್ಷಣದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಹೊರ ನಡೆಯುತ್ತಾರೆ. ಕಳ್ಳರ ಕೃತ್ಯವನ್ನು ತೋರಿಸುವ ವೀಡಿಯೊಗಳು ಯಾವಾಗಲೂ ಇಂಟರ್ನೆಟ್‌ನಲ್ಲಿ ಸೂಪರ್ ಹಿಟ್ ಆಗಿರುತ್ತವೆ. ಹಾಗೆಯೇ ಈಗ ಅಂತಹುದೇ ವೀಡಿಯೊವೊಂದು ಇನ್ಸ್ಟಾಗ್ರಾಮ್‌ನಲ್ಲಿ (Instagram) ವೈರಲ್ ಆಗಿದೆ. ವೀಡಿಯೊದಲ್ಲಿ ಕಾಣಿಸುವಂತೆ ಮಧ್ಯವಯಸ್ಕ ಮಹಿಳೆ ಅಂಗಡಿಯಲ್ಲಿ ಇನ್ನೊಬ್ಬ ಮಹಿಳೆಯ ಬ್ಯಾಗ್‌ನಿಂದ ಮೊಬೈಲ್ ಫೋನ್ ಕದಿಯುತ್ತಿರುವುದನ್ನು ಕಾಣಬಹುದು.
ಮಹಿಳೆ ಅಂಗಡಿಯೊಂದಕ್ಕೆ ಪ್ರವೇಶಿಸಿ ತನ್ನ ಪಕ್ಕದಲ್ಲಿ ನಿಂತಿರುವ ಇನ್ನೊಬ್ಬ ಮಹಿಳೆಯ ಪರ್ಸ್‌ನಿಂದ ಮೊಬೈಲ್ ಕದಿಯುತ್ತಿರುವ ದೃಶ್ಯ ನೋಡಿ ಜನ ಗಾಬರಿಯಾಗಿದ್ದಾರೆ.
ವೀಡಿಯೊದಲ್ಲಿ ಕಾಣಿಸುವಂತೆ ಅಂಗಡಿಯಲ್ಲಿ ಸಾಕಷ್ಟು ಜನಸಂದಣಿ ಇದ್ದು ಈ ಕಳ್ಳಿ ಆಂಟಿಗೆ ಕದಿಯಲು ಸಾಕಷ್ಟು ಅವಕಾಶವ ನೀಡಿದೆ. ಜನಸಂದಣಿ ಮಧ್ಯೆ ಕ್ಯಾಶ್ ಕೌಂಟರ್ ಮುಂದೆ ದಂಪತಿ ಈಗಾಗಲೇ ನಿಂತಿರುತ್ತಾರೆ. ಅಲ್ಲಿಗೆ ಬರುವ ಕಳ್ಳಿ ಕೌಂಟರ್ ಹತ್ತಿರ ಇದ್ದ ಮಹಿಳೆಯ ಬಳಿ ಬಂದು ಅಂಗಡಿಯವರಿಂದ ಏನನ್ನೋ ಕೇಳುವಂತೆ ನಟಿಸುತ್ತಾಳೆ. ಇದೇ ಸಮಯದಲ್ಲಿ ಆಕೆ ಪಕ್ಕದಲ್ಲಿ ನಿಂತ ಮಹಿಳೆಯ ಬ್ಯಾಗ್‌ಗೇ ಕೈ ಹಾಕಿ ಫೋನ್ ಕದಿಯುತ್ತಾಳೆ. ಬಳಿಕ ಫೋನನ್ನು ತನ್ನ ಬ್ಯಾಗ್ ಒಳಗೆ ಹಾಕಿ ಅಂಗಡಿಯಿಂದ ಹೊರ ನಡೆಯುತ್ತಾಳೆ.
ಗಿಡ್ಡೆ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ವೀಡಿಯೋ ವೈರಲ್ ಆಗಿದ್ದು, ಮಹಿಳೆಯ ಕೈ ಚಳಕಕ್ಕೆ ಜನ ಬೆರಗಾಗಿದ್ದಾರೆ. ತಮಾಷೆಯ ಕಾಮೆಂಟ್‌ಗಳನ್ನು ನೋಡುಗರು ಮಾಡಿದ್ದು, (ಯಾದ್ ರಖನಾ ಹರ್ ಆಂಟಿ ಜೈಸಿ ದಿಖ್ನೆ ವಾಲಿ ಆಂಟಿ ನ್ಹಿ ಹೋತಿ ಚೋರ್ನಿ ಭಿ ಹೋ ಸಕ್ತಿ ಹೆಚ್) ನೆನಪಿಡಿ ಅಂಟಿ ತರ ಕಾಣಿಸುವವರೆಲ್ಲಾ ಬರೀ ಅಂಟಿಗಳು ಆಗಿರಲ್ಲ. ಅವರು ಕಳ್ಳಿಯರು ಕೂಡ ಆಗಿರುತ್ತಾರೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ.
ಯ್ಯೂಟೂಬ್ ನೋಡಿ ಸಲಕರಣೆ ಖರೀದಿಸಿ ಸಿಲಿಕಾನ್ ಸಿಟಿಯಲ್ಲಿ 22 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಬೆಂಗಳೂರಿನ ಸಂಜಯನಗರ ಪೊಲೀಸರು ಕಳೆದ ತಿಂಗಳು ಬಂದಿಸಿದ್ದರು. ಕಳ್ಳತನಕ್ಕೆ ಬೇಕಾದ ಸಾಮಗ್ರಿಗಳನ್ನು ಇವರು ಯೂಟ್ಯೂಬ್ ನೋಡಿ ಖರೀದಿ ಮಾಡುತ್ತಿದ್ದರು. ಬಳಿಕ ಕದ್ದ ಬೈಕಿನಲ್ಲಿ ಹಗಲಿನಲ್ಲಿ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದರು. ತೆಲಂಗಾಣ (Telangana) ಮೂಲದ ವಿನೋದ್ ಕುಮಾರ್ (Vinod Kumar) ಹಾಗೂ ಪಶ್ಚಿಮ ಬಂಗಾಳದ (West Bengal) ರೋಹಿತ್ ಮಂಡಲ್ (Rohit Mondal) ಬಂಧಿತ ಆರೋಪಿಗಳು.
Udupi: ಇವನೆಂಥಾ ಕಳ್ಳ ಮಾರಾಯ್ರೇ: ಎಂಟು ಲಕ್ಷ ಕದ್ದವ ಒಂದು ಲಕ್ಷ ಯಾಕೆ ಬಿಟ್ಟು ಹೋದ?
ಈ ಪೈಕಿ ಪ್ರಮುಖ ಆರೋಪಿ ವಿನೋದ್ ಹೈದರಾಬಾದ್ ನಿವಾಸಿಯಾಗಿದ್ದು 2015ರಲ್ಲಿ ಈತನ ವಿರುದ್ಧ ಆರು ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಮನೆಯವರು ಈತನನ್ನು ಮನೆಗೆ ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಕೋಲ್ಕತ್ತಾಕ್ಕೆ ಹೋಗಿ ಮೂರು ವರ್ಷಗಳ ಕಾಲ ವಾಸವಾಗಿದ್ದ. ಈ ವೇಳೆ ಬಾಂಗ್ಲಾ ಮೂಲದ ಯುವತಿ ಪರಿಚಯವಾಗಿ ಪ್ರೇಮಾಂಕುರವಾಗಿ ಮದುವೆ ಮಾಡಿಕೊಂಡಿದ್ದ. ಜೊತೆಗೆ ರೋಹಿತ್ ಮಂಡಲ್ ನ ಪರಿಚಯವಾಗಿತ್ತು. ಈ ಮೂವರು ಜೊತೆಗೊಡಿ ಹೆಸರು ಬದಲಾಯಿಸಿಕೊಂಡು ಬಾಂಗ್ಲಾಕ್ಕೂ ಹೋಗಿ ಕೆಲ ಕಾಲ ಜೀವನ ಸಾಗಿಸಿದ್ದರು.
Ballari: ಬಂಗಾರದ ಅಂಗಡಿಯಲ್ಲಿ ಕಳ್ಳತನ: ಕ್ಷಣಾರ್ಧದಲ್ಲಿ ನಡೆದ ಘಟನೆಗೆ ಕಂಗಾಲಾದ ಮಾಲೀಕ!
ಆದರೆ ಅಲ್ಲಿ ಜೀವನ ನಡೆಸಲು ಕಷ್ಟವಾಗಿದ್ದರಿಂದ ಮತ್ತೆ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು. ಕಳ್ಳತನ ಮಾಡಲು ಬೇಕಾದ ಸಲಕರಣೆಗಳನ್ನ ಯ್ಯೂಟೂಬ್ ನಲ್ಲಿ ನೋಡಿ ಖರೀದಿಸಿದ್ದರು. ಕೃತ್ಯ ಎಸಗಲು ನಗರದಲ್ಲಿ ಬೈಕ್ ಕದ್ದು ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ