
ಬೆಂಗಳೂರು(ಜ. 21) ಜನ್ಮದಿನಾಚರಣೆ ಸಂದರ್ಭ ತಲ್ವಾರ್ನಲ್ಲಿ ಕೇಕ್ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ನಟ ದುನಿಯಾ ವಿಜಯ್ ಗಿರಿನಗರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದರು.
ನನ್ನಿಂದ ತಪ್ಪಾಗಿದೆ, ಮತ್ತೆ ಈ ರೀತಿ ಆಗದಂತೆ ನೋಡ್ಕೋತಿನಿ. ಮತ್ತೆ ವಿಚಾರಣೆ ಕರೆದಿದ್ದಾರೆ ಬರ್ತಿನಿ. ಅಕ್ಕಪಕ್ಕದವರಿಗೆ ತೊಂದರೆ ಆಗಿದೆ ಅಂತಿದ್ದಾರೆ. ಇನ್ನು ಮೇಲೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬಹಿರಂಗ ಕ್ಷಮೆ ಯಾಚಿಸಿದ ದುನಿಯಾ ವಿಜಯ್
ಗಿರಿನಗರ ಪೊಲೀಸ್ ಠಾಣೆ ಬಳಿ ವಿಚಾರಣೆ ನಂತರ ಮಾತನಾಡಿದ ವಿಜಯ್, ನೋಟಿಸ್ ಗೆ ಪೊಲೀಸರಿಗೆ ವಿವರಣೆ ನೀಡಿದ್ದೇನೆ. ಬರ್ತಡೆ ವೇಳೆ ಯಾರೋ ಅಭಿಮಾನಿ ತಲ್ವಾರ್ ಕೊಟ್ಟ. ತಲ್ವಾರ್ ನಲ್ಲಿ ಕಟ್ ಮಾಡೋದು ತಪ್ಪು ಅಂತಾ ನಂಗೆ ಗೊತ್ತಿರಲಿಲ್ಲ. ಅದು ಯಾರು ತಂದು ಕೊಟ್ರು ಅಂತಾ ಕೂಡ ಗೊತ್ತಾಗಲಿಲ್ಲ,
ತುಂಬಾ ಜನ ಇದ್ರು. ತಲ್ವಾರ್ ಎಲ್ಲಿದೆ ಅಂತನೂ ಗೊತ್ತಿಲ್ಲ, ಎಲ್ಲಿದೆ ಅಂತಾ ಹುಡುಕಿ ತಂದು ಕೊಡ್ತೀನಿ ಎಂದಿ ತಿಳಿಸಿದರು.
ಅಂದಿನ ಸಿಸಿಟಿವಿ ವಿಷ್ಯೂಯಲ್ಸ್ ತಂದು ಕೊಡುತ್ತೇನೆ. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಸತತ ಎರಡು ಗಂಟೆಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿದ ನಂತರ ದುನಿಯಾ ವಿಜಯ್ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ