Bengaluru: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬೃಹತ್ ಕಾರ್ಯಾಚರಣೆ

By Govindaraj S  |  First Published Jul 8, 2022, 3:44 PM IST

ಸಿಲಿಕಾನ್ ಸಿಟಿಯಲ್ಲಿ ಹೈ ಎಂಡ್ ಪಾರ್ಟಿ ಅಂದಾಗ ಅಲ್ಲಿ ಮದ್ಯದ ಅಮಲಿನ ಜೊತೆ ಮಾದಕ ದ್ರವ್ಯದ ಚಟಕ್ಕೆ ಸೆಲೆಬ್ರೆಟಿಗಳು ದಾಸರಾಗಿದ್ದಾರೆ. ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪೊಲೀಸ್ ಇಲಾಖೆ ಎಷ್ಟೇ ಪ್ರಯತ್ನ ಪಟ್ಟರೂ ಸಹ ಮಾದಕ ದವ್ಯ ವ್ಯಸನಿಗಳನ್ನ ನಿಯಂತ್ರಣ ಮಾಡಲು ಅಸಾಧ್ಯವಾಗುತ್ತಿದೆ.


ಬೆಂಗಳೂರು (ಜು.08): ಸಿಲಿಕಾನ್ ಸಿಟಿಯಲ್ಲಿ ಹೈ ಎಂಡ್ ಪಾರ್ಟಿ ಅಂದಾಗ ಅಲ್ಲಿ ಮದ್ಯದ ಅಮಲಿನ ಜೊತೆ ಮಾದಕ ದ್ರವ್ಯದ ಚಟಕ್ಕೆ ಸೆಲೆಬ್ರೆಟಿಗಳು ದಾಸರಾಗಿದ್ದಾರೆ. ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪೊಲೀಸ್ ಇಲಾಖೆ ಎಷ್ಟೇ ಪ್ರಯತ್ನ ಪಟ್ಟರೂ ಸಹ ಮಾದಕ ದವ್ಯ ವ್ಯಸನಿಗಳನ್ನ ನಿಯಂತ್ರಣ ಮಾಡಲು ಅಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಆಕ್ಟಿವ್ ಆಗಿರುವ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಪ್ರತಿ ನಿತ್ಯ ಡ್ರಗ್ ಪೆಡ್ಲರ್‌ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. 

ಅಷ್ಟಕ್ಕೂ ವ್ಯಸನಿಗಳನ್ನ ನಿಯಂತ್ರಿಸುವ ಬದಲು ಮೂಲವನ್ನ ಹುಡುಕಿ ಅಂದ್ರೆ ಡ್ರಗ್ ಎಲ್ಲಿಂದ ಸಪ್ಲೈ ಆಗುತ್ತಿದೆ ಅಂತವರನ್ನೇ ಹುಡುಕಿ ಪ್ರಕರಣ ದಾಖಲಿಸುತ್ತಿದ್ದಾರೆ. ಅದರಲ್ಲೂ ವಿದೇಶಿ ಡ್ರಗ್ ಪೆಡ್ಲರ್‌ಗಳ ಮೇಲೆ ಸಮರ ಸಾರಿರುವ ಸಿಸಿಬಿ ಅಧಿಕಾರಿಗಳು ದಾಳಿಗಳನ್ನ ನಡೆಸಿ ಬಂಧನವನ್ನ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳಾದ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ, ಡಿಸಿಪಿ ಶರಣಪ್ಪ, ಡಿಸಿಪಿ ಬಸವರಾಜ ಅಂಗಡಿ ಎಸಿಪಿ ರಾಮಚಂದ್ರ ಹಾಗೂ ಇನ್ಸ್‌ಪೆಕ್ಟರ್ ಅಶೋಕ್, ದೀಪಕ್ ಸೇರಿಂದತೆ ಹಲವು ಡ್ರಗ್ ಪೆಡ್ಲರ್‌ಗಳನ್ನ ಬಂಧಿಸಿದ್ದಾರೆ. ಜನವರಿಯಿಂದ ಜುಲೈವರೆಗೆ (ಇಲ್ಲಿವರೆಗೂ) 32 ಪ್ರಕರಣಗಳನ್ನ ದಾಖಲಿಸಿದ್ದು ಅದರಲ್ಲಿ 96 ಜನ ಡ್ರಗ್ ಪೆಡ್ಲರ್‌ಗಳನ್ನ ಬಂಧನ ಮಾಡಲಾಗಿದೆ. 

Tap to resize

Latest Videos

Bengaluru: ಜೈಲಿನಿಂದಲೇ ಹಣಕ್ಕಾಗಿ ರೌಡಿ ಬೆದರಿಕೆ: ಇನ್‌ಸ್ಪೆಕ್ಟರ್‌ ಅಮಾನತು

ಇದರಲ್ಲಿ 13 ನೈಜೀರಿಯನ್ನ ಪೆಡ್ಲರ್‌ಗಳನ್ನ ಬಂಧನ ಮಾಡಲಾಗಿದ್ದು ಜೈಲಿನಲ್ಲಿಟ್ಟಿದ್ದಾರೆ. ಇದರ ಒಟ್ಟು ಮೊತ್ತ 5,61,23000 (ಐದು ಕೋಟಿ ಅರವತ್ತು ಲಕ್ಷಕ್ಕೂ ಅಧಿಕ) ಇನ್ನೂ ಕಳೆದ ವರ್ಷ 2021 ಜನವರಿಯಿಂದ ಜುಲೈವರೆಗೆ 27 ಕೇಸ್ ದಾಖಲಿಸಿದ್ದು 75 ಡ್ರಗ್ ಪೆಡ್ಲರ್‌ಗಳನ್ನ ಬಂಧಿಸಿದ್ದಾರೆ. ಇದರಲ್ಲಿ 25 ನೈಜೀರಿಯನ್ ಪೆಡ್ಲರ್‌ಗಳ ಬಂಧನವಾಗಿದೆ ಒಟ್ಟು ಮೌಲ್ಯ 4,92,35000 ಬೆಲೆಬಾಳುವ ಡ್ರಗ್‌ಗಳನ್ನ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷದ 6 ತಿಂಗಳಲ್ಲಿ ಡ್ರಗ್ ಪೆಡ್ಲರ್‌ಗಳ ಮೇಲೆ ಅಧಿಕವಾಗಿ ಸಮರ ಸಾರಿದ್ದಾರೆ ಅಂತಲೇ ಹೇಳಬಹುದಾಗಿದೆ.

ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದವನ ಸೆರೆ: ಇಂದಿರಾ ನಗರ ಸಮೀಪ ಮತ್ತೊಂದು ಬೀದಿ ನಾಯಿ ದಾರುಣವಾಗಿ ಹತ್ಯೆಗೀಡಾಗಿದೆ. ರಸ್ತೆಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದ ಆರೋಪದ ಮೇರೆಗೆ ಖಾಸಗಿ ಕಂಪನಿ ಕಾರು ಚಾಲಕನೊಬ್ಬನ್ನು ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಕ್ಕೂರು ನಿವಾಸಿ ಅಮುಲ್‌ ರಾಜ್‌ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ಇಂದಿರಾ ನಗರ 2ನೇ ಹಂತದಲ್ಲಿ ಕೆ.ಜಿ.ರಸ್ತೆಯ ‘ಬ್ರೋನಿ’ ಹೆಸರಿನ ಬೀದಿ ನಾಯಿ ಮೇಲೆ ರಾಜ್‌ ಕಾರು ಹರಿಸಿದ್ದ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್‌ ಖದೀಮನ ಬಂಧನ

ಈ ಬಗ್ಗೆ ಸ್ಥಳೀಯ ನಿವಾಸಿ ಸ್ನೇಹ ನಂದಿಹಾಳ್‌ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಕಂಪನಿಯ ಕಾರು ಚಾಲಕನಾಗಿರುವ ರಾಜ್‌, ಜೂ.5ರಂದು ರಾತ್ರಿ 7ರ ಸುಮಾರಿಗೆ ಇಂದಿರಾ ನಗರದ 2ನೇ ಹಂತದಲ್ಲಿ ತನ್ನ ಸಂಬಂಧಿ ಮನೆಗೆ ಬಂದಿದ್ದ. ಅಲ್ಲಿಂದ ಮರಳುವಾಗ ಕಾರಿನ ಮುಂದೆ ಮಲಗಿದ್ದ ಬೀದಿ ನಾಯಿ ಮೇಲೆ ರಾಜ್‌ ಕಾರು ಹರಿಸಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ನಾಯಿ ಮೃತಪಟ್ಟಿತ್ತು. ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

click me!