ಮದುವೆಗೆ ಜಾತಿ ಅಡ್ಡಿ; ದೈಹಿಕ ಸಂಬಂಧ ಬೆಳೆಸಿ ಮೋಸ ಹೋದ ಯುವತಿ ನೇಣಿಗೆ ಶರಣು!

Published : Jul 03, 2023, 08:46 AM IST
ಮದುವೆಗೆ ಜಾತಿ ಅಡ್ಡಿ; ದೈಹಿಕ ಸಂಬಂಧ ಬೆಳೆಸಿ ಮೋಸ ಹೋದ ಯುವತಿ ನೇಣಿಗೆ ಶರಣು!

ಸಾರಾಂಶ

ಮದುವೆಯ ವಿಚಾರಕ್ಕೆ ಜಾತಿ ಅಡ್ಡ ಬಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ (ಜು.2): ಮದುವೆಯ ವಿಚಾರಕ್ಕೆ ಜಾತಿ ಅಡ್ಡ ಬಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಅಮೃತ ಮೃತ ದುರ್ದೈವಿ. ಆಗಷ್ಟೇ ಪಿಯುಸಿ ಮುಗಿಸಿದ್ದ ಅಮೃತ. ಸ್ನೇಹಿತೆಯ ಗಂಡನ ಸಹೋದರನಾದ ಸುನೀಲ್ ಜೊತೆ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು, ಪ್ರೀತಿ ಪ್ರೇಮ ಅಂತಾ ಇಬ್ಬರೂ ಕೈಕೈ ಹಿಡಿದು ಓಡಾಡಿದ್ದರು. ಯಾವಾಗ ಯುವತಿ ಮದುವೆ ಬಗ್ಗೆ ಪ್ರಸ್ತಾಪಿಸಿದಳೋ ಆಗ ಜಾತಿ ಅಡ್ಡ ಬಂತು ನೋಡಿ! ಅದುವರೆಗೆ ಯುವತಿಯೊಂದಿಗೆ ಸುತ್ತಾಟ ನಡೆಸಿ ದೈಹಿಕ ಸಂಬಂಧವೂ ಬೆಳೆಸಿಕೊಂಡ ಯುವಕ ಮದುವೆಯಾಗಲು ಜಾತಿ ಅಡ್ಡ ತಂದು ನಿರಾಕರಿಸಿಬಿಟ್ಟ.

ಲವ್, ಸೆಕ್ಸ್, ದೋಖಾ: ಯುವಕನ ಮನೆ ಎದುರೇ ಧರಣಿ ಕುಳಿತ ಯುವತಿ, ಸಹಾಯಕ್ಕೆ ಬಾರದ ಪೊಲೀಸರು!

ಅಮೃತ  (ವಡ್ಡರ) ತಳ ಸಮುದಾಯಕ್ಕೆ ಸೇರಿದ ಯುವತಿಯೆಂದು (ಬಲಿಜ) ಮೇಲ್ಜಾತಿಗೆ ಸೇರಿದ್ದವರೆಂದು ಮದುವೆ ಬೇಡ ಎಂದಿದ್ದ ಕುಟುಂಬದವರು. ಆದರೆ ಸ್ನೆಹ , ಪ್ರೀತಿ, ಹಾಸಿಗೆ ಹಂಚಿಕೊಳ್ಳುವಾಗ ಇರದ ಜಾತಿ ಮದುವೆಯಾಗೋವಾಗ ಏಕೆ ಬಂತು ಎಂದು ಯುವತಿ ಪ್ರಶ್ನಿಸಿದ್ದಳು.

ಯುವಕ ಪ್ರೀತಿ ಪ್ರೇಮದ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಈಗ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿದ್ದಾನೆ ಎಂದು  ಮನನೊಂದು ಯುವತಿ ನೇಣಿಗೆ ಶರಣಾಗಿದ್ದಳು. ಆದರೆ ಅದರೆ ಕೊನೆಯ ಕ್ಷಣದಲ್ಲಿ ನೇಣಿನಿಂದ ಇಳಿಸಿ ಬದುಕಿಸಲು ಸಾಕಷ್ಟು ಪ್ರಯತ್ನ ಮಾಡಿದ್ರು ನಾಲ್ಕು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೆ ಸಾವನ್ನಪ್ಪಿದ ಅಮೃತ.

ಯುವತಿ ಅಮೃತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೈಕೊಟ್ಟ ಹುಡುಗನ ಮೋಸದ ಕತೆ ಪತ್ರದ ಮೂಲಕ ಬರೆದಿಟ್ಟಿದ್ದಳು. ಹುಡುಗನ ಕಡೆಯ ಕುಟುಂಬದವರು ಅವಮಾನಿಸಿದ್ದರ ಬಗ್ಗೆ ಪತ್ರದಲ್ಲಿ ಬರೆದಿದ್ದ ಯುವತಿ. ಸದ್ಯ ಯುವತಿ ಸಾವಿನ ಪ್ರಕರಣದಲ್ಲಿ ಸುನೀಲ್ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. 

Love Sex Aur Dhokha : ಮದುವೆ ಆಗೋದಾಗಿ ನಂಬಿಸಿ ಲವ್.. ಸೆಕ್ಸ್.. ದೋಖಾ..  ಗೋಕಾಕದ ಕಿರಾತಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ