Charmadi Ghat: ಚಾರ್ಮಾಡಿ ಪರಿಸರದಲ್ಲಿ ಮೂರು ವಾಹನಗಳು ಪಲ್ಟಿ

By Kannadaprabha News  |  First Published Jul 3, 2023, 6:01 AM IST

ಚಾರ್ಮಾಡಿ ಪೇಟೆ ಹಾಗೂ ಚಾರ್ಮಾಡಿ ಘಾಟಿ ಪರಿಸರದಲ್ಲಿ ಒಟ್ಟು ಮೂರು ವಾಹನಗಳು ಮಗುಚಿ ಬಿದ್ದ ಘಟನೆ ಭಾನುವಾರ ಸಂಜೆ ನಡೆದಿದೆ. ಉಜಿರೆಯಿಂದ ಮೂಡಿಗೆರೆ ಕಡೆ ಪ್ರಯಾಣಿಸುತ್ತಿದ್ದ ಟಿಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿಪೇಟೆಯಲ್ಲಿ 100 ಮೀ. ಅಂತರದಲ್ಲಿ ಉರುಳಿ ಬಿದ್ದಿವೆ.


ಬೆಳ್ತಂಗಡಿ (ಜು.3): ಚಾರ್ಮಾಡಿ ಪೇಟೆ ಹಾಗೂ ಚಾರ್ಮಾಡಿ ಘಾಟಿ ಪರಿಸರದಲ್ಲಿ ಒಟ್ಟು ಮೂರು ವಾಹನಗಳು ಮಗುಚಿ ಬಿದ್ದ ಘಟನೆ ಭಾನುವಾರ ಸಂಜೆ ನಡೆದಿದೆ.

ಉಜಿರೆಯಿಂದ ಮೂಡಿಗೆರೆ ಕಡೆ ಪ್ರಯಾಣಿಸುತ್ತಿದ್ದ ಟಿಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿಪೇಟೆಯಲ್ಲಿ 100 ಮೀ. ಅಂತರದಲ್ಲಿ ಉರುಳಿ ಬಿದ್ದಿವೆ.

Tap to resize

Latest Videos

ಇಲ್ಲಿನ ಸುಮಾರು 3 ಕಿಮೀ ವ್ಯಾಪ್ತಿಯ ರಸ್ತೆ ಮಳೆಗಾಲದಲ್ಲಿ ವಿಪರೀತ ಜಾರುವುದರಿಂದ ಹಲವಾರು ಅಪಘಾತಗಳು ಈಗಾಗಲೇ ನಡೆದಿವೆ. ಮಳೆ ಬಂದರೆ ಇಲ್ಲಿ ವಾಹನಗಳು ಉರುಳಿ ಬೀಳುವುದು ಸಾಮಾನ್ಯವಾಗಿದೆ. ಇದಕ್ಕೆ ಇಲ್ಲಿನ 3 ಕಿ.ಮೀ. ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನಯವಾದ ಡಾಮರೀಕರಣ ಮಾಡಿರುವುದು ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

Charmadi ghat: ಆಂಬುಲೆನ್ಸ್‌ಗೂ ದಾರಿಬಿಡದೆ ವಾಹನ ಪಾರ್ಕಿಂಗ್; ಪ್ರವಾಸಿಗರ ಹುಚ್ಚಾಟಕ್ಕೆ ರೋಗಿಗಳು ಪರದಾಟ!

ಭಾನುವಾರ ಸಂಜೆಯೂ ಉತ್ತಮ ಮಳೆ ಇದ್ದು ರಸ್ತೆ ಜಾರುತ್ತಿದ್ದ ಕಾರಣದಿಂದ ಚಾಲಕರ ನಿಯಂತ್ರಣಕ್ಕೆ ಸಿಗದ ಈ ಎರಡು ವಾಹನಗಳು ಉರುಳಿ ಬಿದ್ದವು. ವಾಹನಗಳಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಬಂದ ಸ್ಥಳೀಯರಿಗೂ ರಸ್ತೆ ಜಾರುವುದರಿಂದ ಕಾರ್ಯಾಚರಣೆ ನಡೆಸಲು ಕಷ್ಟವಾಯಿತು.

ಈ ರಸ್ತೆಯ ಸಮಸ್ಯೆ ಬಗ್ಗೆ ಸಂಬಂಧಪಟ್ಟಇಲಾಖೆಗೆ ಬದಲಿ ಡಾಮರೀಕರಣ ಮಾಡುವ ಬಗ್ಗೆ ಕಳೆದ ಮೂರು ವರ್ಷಗಳಿಂದ ಸ್ಥಳೀಯರು ಮನವಿ ಮಾಡುತ್ತಿದ್ದಾರೆ. ಆದರೆ ಇಲಾಖೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತ ಇಲ್ಲಿಯ ಮಂದಿ ತಕ್ಷಣ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಪ್ರತಿಭಟನೆ ನಡೆಸಲು ಮುಂದಾಗುವುದಾಗಿ ತಿಳಿಸಿದ್ದಾರೆ.

ಘಾಟಿಯಲ್ಲಿ ಕಾರು ಪಲ್ಟಿ: ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಬಳಿಕ ರಸ್ತೆಯಲ್ಲಿ ಬೆಂಗಳೂರು ಮೂಲದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆಯು ಭಾನುವಾರ ನಡೆದಿದೆ.

Charmadi Ghat: ನಾಪತ್ತೆಯಾಗಿದ್ದ ಚಾರಣಿಗ; ಚಾರ್ಮಾಡಿ ಅರಣ್ಯದಲ್ಲಿ ಪತ್ತೆ!

ಮೂರು ಅಪಘಾತಗಳಲ್ಲಿ ವಾಹನಗಳಿಗೆ ಹಾನಿಯಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

click me!