ಹಾವೇರಿ: ಸಾಲಭಾದೆಯಿಂದ ಮನನೊಂದು ರೈತ ಆತ್ಮಹತ್ಯೆ!

By Kannadaprabha News  |  First Published Jul 3, 2023, 4:53 AM IST

ಸಾಲಬಾಧೆ ತಾಳಲಾರದೇ ಅನ್ನದಾತನೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಹೆಡ್ಡಿಗೊಂಡ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.


ಬ್ಯಾಡಗಿ:  ಸಾಲಬಾಧೆ ತಾಳಲಾರದೇ ಅನ್ನದಾತನೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಹೆಡ್ಡಿಗೊಂಡ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಹೆಡ್ಡಿಗೊಂಡ ಗ್ರಾಮದ ಶಿವನಗೌಡ ಭೀಮನಗೌಡ ಹೊಸಮನಿ (46) ಆತ್ಮಹತ್ಯೆ ಮಾಡಿಕೊಂಡ ಅನ್ನದಾತ. ಶಿವನಗೌಡ ತನ್ನ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಲು ಕುರುಬಗೊಂಡ ಗ್ರಾಮದ ಯೂನಿಯನ್‌ ಬ್ಯಾಂಕ್‌ನಲ್ಲಿ .7 ಲಕ್ಷ ಮತ್ತು ಹಾವೇರಿಯ ಮಹಿಂದ್ರಾ ಫೈನಾನ್ಸ್‌ನಲ್ಲಿ .7.5 ಲಕ್ಷ ಸಾಲ ಮಾಡಿದ್ದರು. ಕಳೆದ ಎರಡು ವರ್ಷದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕೃಷಿಯಲ್ಲಿ ಸಮರ್ಪಕವಾಗಿ ಬೆಳೆ ಬಾರದೇ ಅಪಾರ ನಷ್ಟಅನುಭವಿಸಿದ್ದರು. ಇದರಿಂದ ಕಂಗಾಲಾಗಿದ್ದರು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕಳೆದ ಹಲವು ದಿನಗಳಿಂದ ಸಾಲ ಹೇಗೆ ತೀರಿಸುವುದು? ಎಂದು ಚಿಂತೆಯಲ್ಲಿ ಮುಳುಗಿದ್ದರು ಎನ್ನಲಾಗಿದೆ.

Tap to resize

Latest Videos

undefined

ಸಾಲಕ್ಕೆ ಹೆದರಿ ಆಪ್ತರ ಬಳಿ ಸಾಯುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದ ಶಿವನಗೌಡ ಅವರಿಗೆ ಆಪ್ತರು ಧೈರ್ಯ ಹೇಳುತ್ತಿದ್ದರು. ಆದರೆ ಅವರು ಶನಿವಾರ ಸಂಜೆ ತನ್ನ ಹೊಲಕ್ಕೆ ಹೋಗಿ ಮರಕ್ಕೆ ಟವೆಲ್‌ ಬಿಗಿದು ನೇಣು ಹಾಕಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅದೇ ಸಮಯಕ್ಕೆ ಟವೆಲ್‌ ಹರಿದ ಕಾರಣ ಹೊಲದಲ್ಲಿನ ಆತ್ಮಹತ್ಯೆ ಪ್ರಯತ್ನ ವಿಫಲವಾಗಿದೆ. ಆನಂತರ ಅಲ್ಲಿಂದ ನೇರವಾಗಿ ಮನೆಗೆ ಆಗಮಿಸಿದ ಶಿವನಗೌಡ ಮನೆಯಲ್ಲಿ ಹಗ್ಗ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಉದ್ಯಮ ನಷ್ಟದಿಂದ ಹೆಗಲೇರಿದ ಸಾಲ: ಪತ್ನಿ, ಮಗನನ್ನು ನದಿಗೆ ದೂಡಿ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಘಟನೆ ಕುರಿತಂತೆ ಕಾಗಿನೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

click me!