ಪ್ರತ್ಯೇಕ ಘಟನೆ; ನಡುರಸ್ತೆಯಲ್ಲೇ ಹೊತ್ತಿಉರಿದ ಓಮಿನಿ, ಕಾರು!

By Ravi Janekal  |  First Published Dec 22, 2023, 5:28 PM IST

ಹೊಟೇಲ್‌ ಮುಂದೆ ನಿಲ್ಲಿಸಿದ್ದ ಕಾರು ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಹೊತ್ತಿಕೊಂಡು ಉರಿದ ಘಟನೆ ರಾಮನಗರದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ಪಕ್ಕದ ತಾಜ್ ಹೋಟೆಲ್ ಮುಂಭಾಗ ನಡೆದಿದೆ.


ರಾಮನಗರ (ಡಿ.22): ಹೊಟೇಲ್‌ ಮುಂದೆ ನಿಲ್ಲಿಸಿದ್ದ ಕಾರು ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಹೊತ್ತಿಕೊಂಡು ಉರಿದ ಘಟನೆ ರಾಮನಗರದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ಪಕ್ಕದ ತಾಜ್ ಹೋಟೆಲ್ ಮುಂಭಾಗ ನಡೆದಿದೆ.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕುಟುಂಬ. ದಾರಿ ಮಧ್ಯೆ ಊಟಕ್ಕಾಗಿ ಹೋಟೆಲ್ ಮುಂದೆ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದ ಕುಟುಂಬ. ಈ ವೇಳೆ ಕಾರಿನಲ್ಲಿ ಶಾರ್ಟ್ ಸೆರ್ಕ್ಯೂಟ್ ನಿಂದ ಬೆಂಕಿ ತಗುಲಿರೋ ಶಂಕೆ.  ಊಟ ಮುಗಿಸಿ ಬರುವಷ್ಟರಲ್ಲಿ ಕಾರಿಗೆ ಬೆಂಕಿ. ಸ್ಥಳೀಯರು ಗಮನಿಸಿ ಬೆಂಕಿ ನಂದಿಸಿಲು ಯತ್ನಿಸಿದರು.. ಆದರೆ ಬೆಂಕಿಯ ಕೆನ್ನಾಲಗೆಗೆ ಕಾರು ಸಂಪೂರ್ಣ ಸುಟ್ಟು ಹೋಗಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಘಟನೆ.

Tap to resize

Latest Videos

undefined

ವಿಜಯಪುರ: ಹೊತ್ತಿ ಉರಿದ ಖಾಸಗಿ ಟ್ರಾವೆಲ್ಸ್. ಚಾಲಕನ ಸಮಯ ಪ್ರಜ್ಞೆಗೆ 36 ಜೀವಗಳು ಬಚಾವ್!

ನಡುರಸ್ತೆಯಲ್ಲಿ ಹೊತ್ತಿಉರಿದ ಓಮಿನಿ ಕಾರು!

ಕಾರವಾರ:ರಸ್ತೆಯಲ್ಲಿ ಹೊರಟಿದ್ದ ಓಮಿನಿ ಕಾರು ದಾರಿ ಮಧ್ಯೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ-ಹರೀಶಿ ಮಾರ್ಗದ ರಸ್ತೆಯಲ್ಲಿ ನಡೆದಿದೆ.

ಚಿದಾನಂದ ಗಣಪತಿ ನಾಯ್ಕ್ ಎಂಬುವವರಿಗೆ ಸೇರಿರುವ ಮಿನಿ ಕಾರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಸಂಪೂರ್ಣ ಸುಟ್ಟುಹೋಗಿದೆ. ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

ತಡರಾತ್ರಿ ಗಂಗಾವತಿ ನಗರದ ಜ್ಯುವೆಲ್ಲರಿ ಶಾಪ್‌ ಗೆ ಬೆಂಕಿ; ಚಿನ್ನಾಭರಣ ಸುಟ್ಟು ಕರಕಲು?

click me!