ಕುಂದಾಪುರ: 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ, ಕಾರಣ?

By Kannadaprabha News  |  First Published Dec 22, 2023, 4:49 AM IST

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಕೆ ಅನೇಕ ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಕುಂದಾಪುರ(ಡಿ.22):  ಇಲ್ಲಿನ ಕಟ್ಕೆರೆ ಗ್ರಾಮದಲ್ಲಿ 13 ವರ್ಷದ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಇಲ್ಲಿನ ನಿವಾಸಿ ರಾಜಶೇಖರ ಎಂಬವರ ಮಗಳು ರಿಷಿತಾ ಆತ್ಮಹತ್ಯೆ ಮಾಡಿಕೊಂಡವಳು. 

ಈಕೆ 7ನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಯಿಂದ ಮನೆಗೆ ಬಂದವಳೇ ಮನೆಯ ಸಮೀಪದ ಬಾವಿಗೆ ಹಾರಿದಳು. ತಕ್ಷಣ ಮನೆಯವರು ಆಗ್ನಿಶಾಮಕ ದಳವನ್ನು ಕರೆಯಿಸಿ ಆಕೆಯನ್ನು ಮೇಲೆತ್ತಿದರಾದರೂ, ಆಕೆ ಅದಾಗಲೇ ಮೃತಪಟ್ಟಿದ್ದಳು.

Tap to resize

Latest Videos

undefined

ಫ್ಯಾಕ್ಟರಿಯಲ್ಲಿ ರಜೆ ನೀಡದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಕೆ ಅನೇಕ ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

click me!