
ಸೋನೆಪುರ(ಮಾ.22): ಉತ್ತಮ ತಯಾರಿ ನಡೆಸಿ ಆತ್ಮವಿಶ್ವಾಸದಿಂದಲೇ ಪರೀಕ್ಷೆ ಬರೆದು ಹೊರಬಂದ 6ನೇ ತರಗತಿ ವಿದ್ಯಾರ್ಥಿಗಳ ಮೇಲೆ ನಿಯಂತ್ರಣ ತಪ್ಪಿದ ಕಾರು ಹರಿದು ಮೂವರು ಮೃತಪಟ್ಟ ಘಟನೆಗೆ ಒಡಿಶಾದ ಸೋನೆಪುರದಲ್ಲಿ ನಡೆದಿದೆ. ಇತರ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಶ್ರದ್ಧಾಪಾಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಾದ ಸುಬ್ರೋತ್ ಬೋಯಿ, ರಾಜೇಶ್ ಪೆರಾ ಹಾಗೂ ರಾಜಾ ಪೆರಾ ಎಂದು ಗುರುತಿಸಲಾಗಿದೆ.
ಶ್ರದ್ಧಪಾಲಿ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ.ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಶಾಲಾ ಆವರಣದಿಂದ ಹೊರಬಂದಿದ್ದಾರೆ. ಬಳಿಕ ಇತರ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲೇ ಈ ಅಪಘಾತ ಸಂಭವಿಸಿದೆ. ರಸ್ತೆಯಿಂದ ಸಾಕಷ್ಟು ದೂರ ಹಾಗೂ ಶಾಲಾ ಗೇಟ್ ಬಳಿ ನಿಂತಿದ್ದ ವಿದ್ಯಾರ್ಥಿಗಳ ಮೇಲ ಕಾರು ಹರಿದಿದೆ. ಅತೀ ವೇಗದಿಂದ ನಿಯಂತ್ರಣ ತಪ್ಪಿದ ಕಾರು ವಿದ್ಯಾರ್ಥಿಗಳಿಗೆ ಮೇಲಿಂದ ಹರಿದು ಶಾಲಾ ಅವರಣಕ್ಕೆ ಢಿಕ್ಕಿಯಾಗಿ ನಿಂತಿದೆ. 6 ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೈಟ್ ಶಿಫ್ಟ್ ಮಾಡುತ್ತಿದ್ದ ಪೊಲೀಸ್‌ಗೆ ಗುದ್ದಿದ ಅಪರಿಚಿತ ವಾಹನ: ಸ್ಥಳದಲ್ಲಿಯೇ ಪೇದೆ ಸಾವು
ಕಾರು ಚಾಲಕನ ಬಂಧಿಸಲಾಗಿದೆ. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಸೋನೆಪುರ ಬಿನಿಕಾ ರಸ್ತೆ ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸರು ಅಹಿತಕರ ಘಟನೆಗೆ ಅವಕಾಶ ನೀಡಿಲ್ಲ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲಾ ಆವರಣವಿದ್ದರೂ ರಸ್ತೆಯಲ್ಲಿ ಯಾವುದೇ ಸೂಚನ ಫಲಕ ಸೇರಿದಂತೆ ಸ್ಪೀಡ್ ಬ್ರೇಕರ್ ಹಾಕಿಲ್ಲ ಎಂದು ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಬೆಳಗಾವಿಯಲ್ಲಿ ಸ್ಪೀಡ್ ಬ್ರೇಕರ್ ನಿರ್ಮಾಣಗೊಂಡ ಕೆಲ ಘಂಟೆಗಳಲ್ಲೇ ಅಪಘಾತವಾಗಿ ಯುವಕ ಬಲಿ!
ಪರೀಕ್ಷಾ ನಡುವೆ ಈ ರೀತಿಯ ಘಟನೆ ನಡೆದಿರುವುದು ಇದೀಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಶಾಲಾ ಆವರಣಕ್ಕೆ ಬರಲು ಆತಂಕ ಪಡುತ್ತಿದ್ದಾರೆ. ಅಪಘಾತದಿಂದ ಶಾಲಾ ಮಕ್ಕಳು ಕೂಡ ಆಘಾತಕ್ಕೊಳಗಾಗಿದ್ದಾರೆ.
ಅಪಘಾತದಲ್ಲಿ ಮೂವರ ಸಾವು
ಟ್ಯಾಂಕರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಮೂವರು ಸ್ಥಳದಲ್ಲಿ ಅಸುನೀಗಿರುವ ಘಟನೆ ಕರ್ನಾಟಕದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ… ಕ್ರಾಸ್ ಬಳಿ ಮಂಗಳವಾರ ನಡೆದಿದೆ. ದುರ್ಘಟನೆಯಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದು, ಬಿ.ಬಿ ಇಂಗಳಗಿ ಗ್ರಾಮದವರಾದ ಮಹಾಂತೇಶ ಕಾಸಣ್ಣ ಹಡಪದ (27), ಸದ್ದಾಂ ಬಂದಗಿಸಾಬ ನಾಯ್ಕೋಡಿ (27), ಮಂಜುನಾಥ ದೇವಪ್ಪ ದೊಡ್ಡಮನಿ (24) ಮೃತಪಟ್ಟಿರುವ ದುರ್ದೈವಿಗಳು. ಅಲ್ಲದೇ, ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ