ಹಾಡಿನ ಮೂಲಕ ವ್ಲಾದಿಮಿರ್ ಪುಟಿನ್ ಟೀಕಿಸಿದ ಪಾಪ್ ಸಿಂಗರ್ ಶವವಾಗಿ ಪತ್ತೆ!

By Suvarna News  |  First Published Mar 22, 2023, 5:00 PM IST

ಉಕ್ರೇನ್ ವಿರುದ್ದ ಯುದ್ಧ ಸಾರಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೀಕಿಸಿ ಹಾಡು ರಚಿಸಿದ್ದ ಪಾಪ್ ಸಿಂಗರ್ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. 35ರ ಹರೆಯದ ಸಿಂಗರ್ ಅನುಮಾನಸ್ಪದ ಸಾವು ರಷ್ಯಾದ ಕರಾಳ ಅಧ್ಯಾಯ ತೆರೆದಿಟ್ಟಿದೆ.


ಮಾಸ್ಕೋ(ಮಾ.22); ರಷ್ಯನ್ ಪಾಪ್ ಸಾಂಗ್ ಗ್ರೂಪ್ ಹುಟ್ಟು ಹಾಕಿ ಪಾಪ್ ಹಾಡಿನ ಮೂಲಕ ದಿಮಾ ನೋವಾ ಅತ್ಯಂತ ಜನಪ್ರಿಯರಾಗಿದ್ದಾರೆ.  ಆದರೆ ರಷ್ಯಾ ಉಕ್ರೇನ್ ಯುದ್ಧದ ವೇಳೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡೆ ಟೀಕಿಸಿ ಪಾಪ್ ಹಾಡು ರಚಿಸಿದ್ದ ದಿಮಾ ನೋವಾ ಅಭಿಮಾನಿಗಳ ಸಂಖ್ಯೆ ಡಬಲ್ ಆಗಿತ್ತು. ಇದೇ ಹಾಡು ಎಲ್ಲೆಡೆ ಗುನುಗಲು ಆರಂಭಿಸಿತ್ತು. ಪುಟಿನ್ ಯುದ್ಧ ನೀತಿಯಿಂದ ಅಮಾಯಕ ಜನರ ಮೇಲಾಗುತ್ತಿರುವ ಪರಿಣಾಮದ ಕುರಿತು ಹಾಡಿನಲ್ಲಿ ವಿವರಿಸಲಾಗಿತ್ತು. ಜೊತೆಗೆ ಪುಟಿನ್ ನಡೆಯನ್ನು ತೀವ್ರವಾಗಿ ಟೀಕಿಸಲಾಗಿತ್ತು. 35ರ ಹರೆಯದ ಖ್ಯಾತ ಪಾಪ್ ಸಿಂಗ್ ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

ಮಂಜುಗಡ್ಡೆಯಾಗಿ ಮಾರ್ಪಟ್ಟಿದ್ದ ನದಿ ದಾಡುತ್ತಿರುವಾಗ ದಿಮಾ ನೋವಾ ನದಿಗೆ ಬಿದ್ದಿದ್ದಾರೆ. ದಿಮಾ ನೋವಾ ಜೊತೆ ಇತರ ಇಬ್ಬರು ನದಿಗೆ ಬಿದ್ದಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ದಿಮಾ ನೋವಾ ಮುಂಜುಗಡ್ಡೆಯ ಅಡಿಯಿಂದ ಹೊರತೆಗಯಲಾಗಿತ್ತು. ಆದರೆ ದಿಮಾ ನೋವಾ ಆಸ್ಪತ್ರೆ ದಾಖಲಿಸುವ ಮೊದಲೇ ಮೃತಪಟ್ಟಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದೆ. ದಿಮಾ ನೋವಾ ಜೊತೆಗಿದ್ದ ಸಹೋದರ ಹಾಗೂ ಗೆಳೆಯನ ಸುಳಿವು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಮಾರ್ಚ್ 19 ರಂದು ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tap to resize

Latest Videos

ಯುದ್ಧ ಸೋಲು ಭೀತಿಯಲ್ಲಿ ಪುಟಿನ್, ಪೋರ್ನ್ ಹಬ್ ವೀಕ್ಷಿಸುವ ಯುವಕರ ರಷ್ಯಾ ಸೇನೆಗೆ ನೇಮಿಸಲು ಆದೇಶ!

ಕ್ರಿಮ್ ಸೋಡಾ ಅನ್ನೋ ಪಾಪ್ ಸಾಂಗ್ ಗ್ರೂಪ್ ಹುಟ್ಟು ಹಾಕಿ ರಷ್ಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ದಿಮಾ ನೋವಾ, ಪುಟಿನ್ ಟೀಕಿಸಿ ಹಾಡು ರಚಿಸಿ ಹಾಡಿದ್ದರು. ಇದು ಉಕ್ರೇನ್ ಮೇಲಿನ ಯುದ್ದ ವೇಳೆ ಉಕ್ರೇನ್ ಹಾಗೂ ರಷ್ಯಾದ ಹಲವು ಭಾಗಗಳಲ್ಲಿ ಈ ಹಾಡು ಹಾಕಲಾಗಿತ್ತು. ಪುಟಿನ್ ವಿರುದ್ಧ ಬರೆದಿರುವ ಹಾಡು ಜನಪ್ರಿಯಗೊಳ್ಳುತ್ತಲೇ ದಿಮಾ ನೋವಾ ಹಲವು ಬೆದರಿಕೆ ಎದುರಿಸಿದ್ದರು. 

ಅಕ್ವಾ ಡಿಸ್ಕೋ ಅನ್ನೋ ಹಾಡಿನ ಮೂಲಕ ಉಕ್ರೇನ್ ಮೇಲಿನ ಯುದ್ದವನ್ನು ದಿಮಾ ನೋವಾ ಟಿಕಿಸಿದ್ದರು. ಈ ಹಾಡು ಯುದ್ದದ ಸಂದರ್ಭದಲ್ಲಿ ರಾಷ್ಟ್ರಗೀತೆಯಾಗಿ ಮಾರ್ಪಟ್ಟಿತು. ಈ ಕುರಿತು ಕ್ರಿಮ್ ಸೋಡಾ ಗ್ರೂಪ್ ದಿಮಾ ನೋವಾ ನಿಧನ ಖಚಿತಪಡಿಸಿದೆ. ನದಿ ದಾಟುತ್ತಿರುವಾಗ ಅವಘಡ ಸಂಭವಿಸಿದೆ. ದಿಮಾ ನೋವಾರನ್ನು ರಕ್ಷಿಸಿದ್ದರೂ ಬದುಕುಳಿಯಲಿಲ್ಲ. ಇನ್ನಿಬ್ಬರಿಗಾಗಿ ರಕ್ಷಣಾ ಪಡೆಗಳು ಹುಡುಕಾಟ ನಡೆಸಿದೆ ಎಂದಿದೆ.

ಉಕ್ರೇನ್ ವಿರುದ್ಧ ಯುದ್ಧ, ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್!

ಯುದ್ಧ ಸ್ಥಗಿತಕ್ಕೆ ಯೋಜನೆ ರೆಡಿ: ಪುಟಿನ್‌
ಈಗಾಗಲೇ ಒಂದು ವರ್ಷ ಪೂರೈಸಿರುವ ಉಕ್ರೇನ್‌ ಜೊತೆಗಿನ ಯುದ್ಧವನ್ನು ಸ್ಥಗಿತಗೊಳಿಸಲು ಚೀನಾ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಒಂದು ವೇಳೆ ಈ ಯೋಜನೆಯನ್ನು ಪಾಶ್ಚಿಮಾತ್ಯ ದೇಶಗಳು ಒಪ್ಪಿಕೊಂಡರೆ ಶಾಂತಿ ಮರುಸ್ಥಾಪನೆಗೆ ಚೀನಾ ಯೋಜನೆ ವೇದಿಕೆಯಾಗಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಜೊತೆಗಿನ ಮಾತುಕತೆ ಬಳಿಕ ಹೇಳಿಕೆ ನೀಡಿದ ಅವರು, ಇದುವರೆಗೂ ಯುದ್ಧ ಸ್ಥಗಿತದ ಪ್ರಸ್ತಾಪಕ್ಕೆ ಪಾಶ್ಚಿಮಾತ್ಯ ದೇಶಗಳು ಒಲವು ತೋರಿಲ್ಲ ಎಂದು ಹೇಳಿದರು. ಇದೇ ವೇಳೆ ಕೆಲ ದೇಶಗಳು ಉಕ್ರೇನ್‌ಗೆ ಪರಮಾಣು ಶಸ್ತ್ರಾಸ್ತ್ರ ಪೂರೈಕೆ ಮುಂದಾಗಿರುವ ಮಾಹಿತಿ ಇದೆ ಎಂದರು.

click me!