ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ರಾಯಚೂರು ತಾಲೂಕಿನ ಕುರ್ವಕಲಾ ಗ್ರಾಮದಲ್ಲಿ ಮನೆಯೊಂದು ಕುಸಿದಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ನಿರ್ಮಲಾ (13) ಮನೆ ಕುಸಿತದಿಂದಾಗಿ ಮೃತಪಟ್ಟ ಬಾಲಕಿ.
ರಾಯಚೂರು (ಮಾ.22): ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ರಾಯಚೂರು ತಾಲೂಕಿನ ಕುರ್ವಕಲಾ ಗ್ರಾಮದಲ್ಲಿ ಮನೆಯೊಂದು ಕುಸಿದಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ನಿರ್ಮಲಾ (12) ಮನೆ ಕುಸಿತದಿಂದಾಗಿ ಮೃತಪಟ್ಟ ಬಾಲಕಿ. ಮನೆ ಅವಶೇಷಗಳಡಿ ಸಿಲುಕಿದ್ದ ಬಾಲಕಿ ನಿರ್ಮಲಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ.
ಇನ್ನು ಮನೆಯಲ್ಲಿದ್ದ ತಾಯಿ ಮತ್ತು ಚಿಕ್ಕ ಮಗುವಿಗೆ ಗಂಭೀರ ಗಾಯವಾಗಿದ್ದು, ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಂತಿದ್ದರೂ ಕಳೆದ 3 ದಿನಗಳಿಂದ ಸುರಿದಿದ್ದ ಅಕಾಲಿಕ ಮಳೆಗೆ ಹಳೆಯ ಮಣ್ಣಿನ ಮನೆಗಳು ಶಿಥಿಲಗೊಂಡಿವೆ. ಕುರುವಕಲಾ ಗ್ರಾಮದಲ್ಲಿ ಮನೆ ಹಳೆಯದಾಗಿದ್ದರಿಂದ ಮಳೆಗೆ ಕುಸಿದು ಬಿದ್ದಿದ್ದೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಕಾಯ್ದೆ ಬೋಗಸ್: ಸುರ್ಜೇವಾಲಾ ಆರೋಪ
ವಿದ್ಯುತ್ ತಗುಲಿ ಒಂದೇ ಕುಟುಂಬದ ಮೂವರ ಸಾವು: ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಮಧ್ಯರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಧನಗರಗಲ್ಲಿ ನಿವಾಸಿ ಜರಣಮ್ಮ ಅಂಬಣ್ಣ (50) ಹಾಗೂ ಅವರ ಮಕ್ಕಳಾದ ಮಹೇಶ, ಸುರೇಶ ಮೃತರು. ಮಳೆ ಕಾರಣ ಎತ್ತುಗಳನ್ನು ಬೇರೆಡೆ ಕಟ್ಟಲು ಹೊರ ಬಂದಿದ್ದ ಹಿರಿಯ ಮಗ ಮಹೇಶ, ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಕತ್ತಲಿನಲ್ಲಿ ಕಾಣದೆ ತುಳಿದು ಸ್ಥಳದಲ್ಲಿಯೇ ಮೃತಪಟ್ಟರು.
ಮಗನ ಚೀರಾಟ ಕೇಳಿ ಹೊರಬಂದ ತಾಯಿ, ಜರಣಮ್ಮ ಕೂಡ ವಿದ್ಯುತ್ ಸ್ಪರ್ಶಕ್ಕೆ ಅಸುನೀಗಿದರು. ಅಣ್ಣ ಹಾಗೂ ತಾಯಿಯ ಚೀರಾಟ ಕೇಳಿ ಹೊರಗೆ ಬಂದ ಸುರೇಶ, ಕೂಡ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ಬಳಿಕ ಅಂಬಣ್ಣ ಹೊರ ಬಂದು ಕಿರಿಯ ಮಗನ ಕಾಲು ಮುಟ್ಟಿದ ತಕ್ಷಣ ಶಾಕ್ ಹೊಡೆದು ದೂರ ಬಿದ್ದು, ಗಾಯಗೊಂಡಿದ್ದಾರೆ. ನೆರೆಹೊರೆಯವರು ಲೈನ್‌ಮನ್‌ಗೆ ಮಾಹಿತಿ ನೀಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಏರುದನಿಯಲ್ಲಿ ಮಾತಾಡ್ಬೇಡಿ: ಕಸಾಪ ಮಾರ್ಗಸೂಚಿ ಹೊರಡಿಸಿದ ಮಹೇಶ್ ಜೋಶಿ
ಶೃಂಗೇರಿ, ಉಡುಪಿಯಲ್ಲಿ ಮಳೆ: ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹಲವೆಡೆ, ಉಡುಪಿ, ಬಳ್ಳಾರಿ ಜಿಲ್ಲೆಯ ಕೆಲವೆಡೆ ಭಾನುವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಳೆಮಾದಾಪುರದಲ್ಲಿ ಸಿಡಿಲು ಬಡಿದು ಕುರಿಗಾಹಿ ಅನಿಲ್ ಕುಮಾರ್ ಎಂಬುವರು ಗಾಯಗೊಂಡಿದ್ದಾರೆ. ಕುರಿಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದಾಗ ಸಿಡಿಲು ಬಡಿದಿದೆ.