ಪೊಲೀಸ್ ಪೇದೆಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿನಾಯಕ ಟಕ್ಕಳಕಿ ಯುವತಿಗೆ ಮೋಸ ಮಾಡಿರುವ ಪೊಲೀಸ್ ಪೇದೆ. ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯಯಲ್ಲಿ ಸೇವೆ ಸಲ್ಲಿಸುತ್ತಿರುವ ಪೇದೆ.
ವಿಜಯಪುರ (ಜ.25): :ಪೊಲೀಸ್ ಪೇದೆಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿನಾಯಕ ಟಕ್ಕಳಕಿ ಯುವತಿಗೆ ಮೋಸ ಮಾಡಿರುವ ಪೊಲೀಸ್ ಪೇದೆ. ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯಯಲ್ಲಿ ಸೇವೆ ಸಲ್ಲಿಸುತ್ತಿರುವ ಪೇದೆ.
ಬೆಂಗಳೂರು: 29ನೇ ಮಹಡಿಯಿಂದ ಜಿಗಿದು12 ವರ್ಷದ ಬಾಲಕಿ ಆತ್ಮಹತ್ಯೆ!
ಯುವತಿಯೊಂದಿಗೆ ಮೊದಲು ಪರಿಚಯವಾಗಿರುವ ಪೇದೆ. ಪರಿಚಯ ಪ್ರೀತಿಗೆ ತಿರುಗಿದೆ. ಮದುವೆಯಾಗುವುದಾಗಿ ಮಾತುಕೊಟ್ಟಿದ್ದರಿಂದ ಪೊಲೀಸಪ್ಪನ ನಂಬಿದ್ದ ಯುವತಿ. ಯುವತಿಯ ನಂಬಿಕೆ ದುರುಪಯೋಗಪಡಿಸಿಕೊಂಡ ಪೇದೆ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಮದುವೆ ಬಗ್ಗೆ ಪ್ರಸ್ತಾಪಿಸಿದ್ದ ಯುವತಿ. ಆಗ ಮದುವೆಗೆ ನಿರಾಕರಿಸಿರುವ ವಿನಾಯಕ. ಪೇದೆಯಿಂದ ಮೋಸ ಹೋಗಿರುವುದು ತಿಳಿದು ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಸಂತ್ರಸ್ತೆ. ಯುವತಿ ದೂರು ನೀಡುತ್ತಿದ್ದಂತೆ ನಾಪತ್ತೆಯಾಗಿರೋ ಪೊಲೀಸ್ ಪೇದೆ. ಬಂಧನ ಭೀತಿಯಿಂದ ಕಳೆದ 20 ದಿನಗಳಿಂದ ಠಾಣೆಗೆ ಬಾರದೆ ತಲೆಮರೆಸಿಕೊಂಡಿರುವ ವಿನಾಯಕ.
ಮೇಲುಕೋಟೆ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣ; ಅತಿಯಾದ ಸಲುಗೆಯಿಂದಲೇ ಕೊಲೆ!
ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಆರೋಪಿ ಪತ್ತೆಗೆ ಹುಡುಕಾಟ ಮುಂದುವರಿಸಿದ್ದಾರೆ.